ಫೀಫಾ ವಿಶ್ವಕಪ್: ಈಜಿಪ್ಟ್ ವಿರುದ್ಧ ಆತಿಥೇಯ ರಷ್ಯಾಗೆ 3-1ರ ಜಯ


ಮಾಸ್ಕೋ, ಜೂ. 20: ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಎ ಗ್ರೂಪಿನ ಪಂದ್ಯದಲ್ಲಿ ಆತಿಥೇಯ ರಷ್ಯಾ, ಈಜಿಪ್ಟ್ ವಿರುದ್ಧ 3-1ರ ಜಯ ಸಾಧಿಸಿದೆ. ಮಂಗಳವಾರದ ಈ ಪಂದ್ಯದಲ್ಲಿ ರಷ್ಯಾ ಎರಡನೇ ಗೆಲುವನ್ನು ದಾಖಲಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
ಪಂದ್ಯದ ದ್ವಿತೀಯಾರ್ಧದಲ್ಲಿ 15 ನಿಮಿಷಗಳ ಅವಧಿಯಲ್ಲಿ 3 ಗೋಲ್ ಗಳನ್ನು ಸಿಡಿಸಿ ರಷ್ಯಾ ಪಾರಮ್ಯ ಮೆರೆಯಿತು. 47, 59, 62ನೇ ನಿಮಿಷಗಳಲ್ಲಿ ಗೋಲ್ ಸಿಡಿಸಿ ರಷ್ಯಾ ಗೆಲುವನ್ನು ಬರೆಯಿತು. ಈಜಿಷ್ಟ್ ನಿಂದ 73ನೇ ನಿಮಿಷದಲ್ಲಿ ಗೋಲ್ ದಾಖಲಾಯಿತು. ಈಜಿಪ್ಟ್ ಸ್ಟಾರ್ ಆಟಗಾರ ಮೊಹಮ್ಮದ್ ಸಲಾಹ್ ಪೆನಾಲ್ಟಿ ಶೂಟ್ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸಿದರು.
47ನೇ ನಿಮಿಷದಲ್ಲಿ ರಷ್ಯಾ ಪರ ಮೊದಲ ಗೋಲ್ ದಾಖಲಿಸಿದ್ದು ಈಜಿಪ್ಟ್ ಆಟಗಾರ ಅಹಮ್ಮದ್ ಫಾತಿ ಅವರು. ಯಡವಟ್ಟಿನಾಟವಾಡಿ ಫಾತಿ ಎದುರಾಳಿಗೆ ನೆರವಾದರು. 59ನೇ ನಿಮಿಷದಲ್ಲಿ ಡೆನಿಸ್ ಚೆರಿಶೇವ್ ಅವರಿಂದ ಗೋಲ್ ದಾಖಲಾಗಿ ರಷ್ಯಾಕ್ಕೆ 2-0ಯ ಮುನ್ನಡೆ ತಂದುಕೊಟ್ಟಿತು. 62ನೇ ನಿಮಿಷದಲ್ಲಿ ಆರ್ಟೆಮ್ ಡಿಜೂಬಾ ಮೂರನೇ ಗೋಲ್ ಬಾರಿಸಿ ರಷ್ಯಾ ಗೆಲುವನ್ನು ಸಾರಿದರು.
ಇತ್ತಂಡಗಳ ನಾಲ್ಕೂ ಗೋಲ್ ಗಳು ಸಿಡಿದದ್ದು ಪಂದ್ಯದ ದ್ವಿತೀಯಾರ್ಧದಲ್ಲಿ ಎನ್ನುವುದು ವಿಶೇಷ. ಪಂದ್ಯದ ವೇಳೆ 57ನೇ ನಿಮಿಷದಲ್ಲಿ ಈಜಿಪ್ಟ್ ನ ತ್ರೆಜೆಕೆಟ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯಿತು. 84ನೇ ನಿಮಿಷದಲ್ಲಿ ರಷ್ಯಾದ ಫೆಡರ್ ಸ್ಮೋಲೋವ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications