For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್ ಸೆಮಿಫೈನಲ್: ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡಕ್ಕೆ ಕ್ರೊಯೇಶಿಯಾ ಸವಾಲು

FIFA World Cup semi-final, Argentina vs Croatia: Lionel Messi teams eye on enter finals

ಫಿಫಾ ವಿಶ್ವಕಪ್‌ ಅಂತಿಮ ಹಂತಕ್ಕೆ ತಲುಪಿದ್ದು ಇನ್ನು ಕೇವಲ ಮೂರು ಪಂದ್ಯಗಳು ಮಾತ್ರವೇ ಬಾಕಿಯಿದೆ. ಮೊದಲ ಸೆಮಿಫೈನಲ್‌ಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ಹಾಗೂ ಬಲಿಷ್ಠ ಕ್ರೊಯೇಶಿಯಾ ತಂಡಗಳು ಮುಖಾಮುಖಿಯಾಗಲಿದೆ. ಎರಡು ತಂಡಗಳು ಕೂಡ ಫೈನಲ್‌ನಲ್ಲಿ ಸ್ಥಾನವನ್ನು ಪಡೆಯಲು ಸರ್ವ ಪ್ರಯತ್ನ ನಡೆಸಲಿದ್ದು ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.

ಕ್ರೊಯೇಶಿಯಾ ತಂಡ ಟೂರ್ನಿಯುದ್ದಕ್ಕೂ ಶಿಸ್ತಿನ ಹೋರಾಟವನ್ನು ನಡೆಸಿದ್ದು ಲ್ಯೂಕ ಮಾಡ್ರಿಕ್ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದೀಗ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡಕ್ಕೆ ಯಾವ ರೀತಿಯ ಸವಾಲೊಡ್ಡಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.

ಅರ್ಜೆಂಟಿನಾ ಹಾಗೂ ಕ್ರೊಯೇಶಿಯಾ ತಂಡಗಳ ಸೆಮಿಫೈನಲ್ ಹಾದಿ

ಅರ್ಜೆಂಟಿನಾ ಹಾಗೂ ಕ್ರೊಯೇಶಿಯಾ ತಂಡಗಳ ಸೆಮಿಫೈನಲ್ ಹಾದಿ

ಕಳೆದ ಬಾರಿಯ ಫೈನಲಿಸ್ಟ್ ಕ್ರೊಯೇಶಿಯಾ ಈ ಬಾರಿಯ ಟೂರ್ನಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ ಕ್ರೊಯೇಶಿಯಾ ತಂಡ ಯಾವುದೇ ಸೂಪರ್‌ಸ್ಟಾರ್ ಆಟಗಾರನನ್ನು ಹೊಂದಿಲ್ಲದಿರುವುದರಿಂದಾಗಿ ಅಷ್ಟಾಗಿ ಗಮನ ಸೆಳದಿಲ್ಲ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಫಲಿತಾಂಶ ಡ್ರಾ ಸಾಧಿಸಿರುವ ಕ್ರೊಯೇಶಿಯಾ ಅಂತಿಮವಾಗಿ ಫಲಿತಾಂಶ ತನ್ನ ಪರವಾಗುವಂತೆ ಮಾಡಿದೆ. ಈ ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದರೆ ಲೀಗ್ ಹಂತದಲ್ಲಿ ಕೆನಡಾ ವಿರುದ್ಧ 4-1 ಅಂತರದಿಂದ ಗೆಲುವು ಸಾಧಿಸಿತ್ತು.

ಇನ್ನು ಮತ್ತೊಂದೆಡೆ ಅರ್ಜೆಂಟಿನಾ ತಂಡ ಈ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿಯೇ ಸೌದಿ ಅರೇಬಿಯಾ ವಿರುದ್ಧ 1-2 ಅಂತರದ ಸೋಲು ಅನುಭವಿಸಿತ್ತು. 2019ರ ಏಪ್ರಿಲ್ ಬಳಿಕ ಸೋಲು ಕಾಣದ ತಂಡವಾಗಿ ವಿಶ್ವಕಪ್‌ಗೆ ಆಗಮಿಸಿದ್ದ ಅರ್ಜೆಂಟಿನಾ ತಂಡಕ್ಕೆ ಸೌದಿ ಅರೇಬಿಯಾ ದೊಡ್ಡ ಆಘಾತ ನೀಡಿತ್ತು. ಆದರೆ ಬಳಿಕ ಗೆಲುವಿನ ಲಯಕ್ಕೆ ಮರಳುವಲ್ಲಿ ಮೆಸ್ಸಿ ಪಡೆ ಯಶಸ್ವಿಯಾಗಿದ್ದು ಐದು ಪಂದ್ಯಗಳಲ್ಲಿ 3 ಗೆಲುವು ಸಾಧಿಸಿದೆ. ಇನ್ನು ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡವನ್ನು ಫೆನಾಲ್ಟಿ ಶೂಟೌಟ್ ಮೂಲಕ ಸೋಲಿಸುವಲ್ಲಿ ಯಶಸ್ವಿಯಾಗಿತ್ತು.

120 ನಿಮಿಷಗಳ ಎರಡು ಪಂದ್ಯಗಳನ್ನಾಡಿರುವ ಕ್ರೊಯೇಶಿಯಾ

120 ನಿಮಿಷಗಳ ಎರಡು ಪಂದ್ಯಗಳನ್ನಾಡಿರುವ ಕ್ರೊಯೇಶಿಯಾ

ಕ್ರೊಯೇಶಿಯಾ ಸೆಮಿಫೈನಲ್ ಪಂದ್ಯಕ್ಕೆ ಬಹಳ ಪ್ರಯಾಸ ಪಟ್ಟು ಪ್ರವೇಶಿಸಿದೆ. ನಾಕೌಟ್ ಹಂತದ ಎರಡು ಪಂದ್ಯಗಳನ್ನು ಕೂಡ 120 ನಿಮಿಷಗಳ ಕಾಲ ಆಡಿದ್ದು ಡ್ರಾ ಸಾಧಿಸಿ ಬಳಿಕ ಫೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿದೆ. ಜಪಾನ್ ವಿರುದ್ಧ ರೌಂಡ್ ಆಫ್ 16 ಹಂತದಲ್ಲಿ ಫೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಕ್ರೊಯೇಶಿಯಾ ಬಳಿಕ ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಬ್ರೆಜಿಲ್ ತಂಡಕ್ಕೂ ಆಘಾತ ನೀಡಿತ್ತು.

ಇನ್ನು ಅರ್ಜೆಂಟಿನಾ ತಂಡ ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿಯೂ ಸುದೀರ್ಘ ಅವಧಿಯ ಪಂದ್ಯದಲ್ಲಿ ಆಡಬೇಕಾಯಿತು. 120 ನಿಮಿಷಗಳ ಅವಧಿ ಮುಕ್ತಾಯವಾದಾಗ 2-2 ಅಂತರದಿಂದ ಸಮಬಲ ಸಾಧಿಸಿದ ಕಾರಣ ಫೆನಾಲ್ಟಿ ಶೂಟೌಟ್‌ನಲ್ಲಿ 4-3 ಅಂತರದಿಂದ ಅರ್ಜೆಂಟಿನಾ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಮೊದಲ ಸೆಮಿಫೈನಲ್ ಪಂದ್ಯ ಸಮಯ ಹಾಗೂ ನೇರಪ್ರಸಾರ

ಮೊದಲ ಸೆಮಿಫೈನಲ್ ಪಂದ್ಯ ಸಮಯ ಹಾಗೂ ನೇರಪ್ರಸಾರ

ಅರ್ಜೆಂಟಿನಾ ಹಾಗೂ ಕ್ರೊಯೇಶಿಯಾ ತಂಡಗಳ ನಡುವಿನ ಸೆಣೆಸಾಟ ಲೂಸೆಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತೀಯ ಕಾಲಮಾನ ಡಿಸೆಂಬರ್ 14ರ ಮದ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ.
ನೇರಪ್ರಸಾರ: ಈ ಪಂದ್ಯಗಳು ಭಾರತದಲ್ಲಿ ಸ್ಪೋರ್ಟ್ಸ್ 18 ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾ ಆಪ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಇತ್ತಂಡಗಳ ಆರಂಭಿಕ ಆಡುವ XIರ ಬಳಗ
ಕ್ರೊಯೇಷಿಯಾ: ಲಿವಕೋವಿಕ್, ಜುರಾನೋವಿಕ್, ಲೊವ್ರೆನ್, ಗ್ವಾರ್ಡಿಯೋಲ್, ಸೋಸಾ, ಮೋಡ್ರಿಕ್, ಬ್ರೋಜೊವಿಕ್, ಕೊವಾಸಿಕ್, ಕ್ರಾಮರಿಕ್, ಪೆಟ್ಕೊವಿಕ್, ಪೆರಿಸಿಕ್

ಅರ್ಜೆಂಟೀನಾ: ಮಾರ್ಟಿನೆಜ್, ಮೊಲಿನಾ, ರೊಮೆರೊ, ಒಟಮೆಂಡಿ, ಟ್ಯಾಗ್ಲಿಯಾಫಿಕೊ, ಡಿ ಪಾಲ್, ಫೆರ್ನಾಂಡಿಸ್, ಮ್ಯಾಕ್ ಅಲಿಸ್ಟರ್, ಡಿ ಮಾರಿಯಾ, ಮೆಸ್ಸಿ, ಅಲ್ವಾರೆಜ್

Story first published: Tuesday, December 13, 2022, 16:13 [IST]
Other articles published on Dec 13, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+