For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ವಿಜೇತರು: ಅರ್ಜೆಂಟೀನಾ, ಉರುಗ್ವೆ ಸಾಲಿಗೆ ಸೇರಿದ ಫ್ರಾನ್ಸ್

By Mahesh
FIFA world Cup Winners list from 1930-2018

ಬೆಂಗಳೂರು, ಜುಲೈ 15: ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ 88 ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. 1930ರಲ್ಲಿ ಆರಂಭವಾದ ವಿಶ್ವಕಪ್ ಟೂರ್ನಮೆಂಟ್ ಈ ಬಾರಿ ರಷ್ಯಾದಲ್ಲಿ ಇಂದು ಸಂಪನ್ನವಾಗಿದೆ.

ಜುಲೈ 15ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಫ್ರಾನ್ಸ್ ತಂಡವು 4-2 ಅಂತರದಲ್ಲಿ ಕ್ರೋವೇಷಿಯಾ ತಂಡವನ್ನು ಸೋಲಿಸಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. 1998ರ ನಂತರ ಕಪ್ ಗೆದ್ದ ಫ್ರಾನ್ಸ್ ತಂಡ ಈಗ ಎರಡು ಬಾರಿ ಚಾಂಪಿಯನ್ ಆಗಿದ್ದ ಉರುಗ್ವೆ, ಅರ್ಜೆಂಟೀನಾ ಸಾಲಿಗೆ ಸೇರಿಕೊಂಡಿದೆ. ಯುರೋ ಕಪ್ ಮಿಸ್ ಮಾಡಿಕೊಂಡಿದ್ದ ಫ್ರಾನ್ಸ್ ಇಂದು ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿತು.

1
958085

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಿತು. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿಗಿತು. ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿತ್ತು.

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಜಾಗತಿಕ ಫುಟ್ಬಾಲ್ ಸಮರ 1942 ಹಾಗೂ 1946ರಲ್ಲಿ ಮಾತ್ರ ವಿಶ್ವಯುದ್ಧದ ಕಾರಣದಿಂದ ನಡೆದಿರಲಿಲ್ಲ. 20 ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಪ್ರತಿ ಬಾರಿ ಅರ್ಹತೆ ಗಳಿಸಿದ ಸಾಧನೆ ಮಾಡಿದೆ.

ಬ್ರೆಜಿಲ್ 5, ಇಟಲಿ 4, ಜರ್ಮನಿ 4, ಉರುಗ್ವೆ, ಅರ್ಜೆಂಟೀನಾ ಹಾಗೂ ಫ್ರಾನ್ಸ್ ತಲಾ ಎರಡು ಬಾರಿ, ಇಂಗ್ಲೆಂಡ್, ಸ್ಪೇನ್ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿವೆ.

1. 1930 > ಉರಗ್ವೆ ( ಅರ್ಜೆಂಟಿನಾ ವಿರುದ್ದ 4 -2 ಗೋಲುಗಳ ಜಯ)

2. 1934 > ಇಟಲಿ ( ಜೆಕೊಸ್ಲೋವಾಕಿಯಾ ವಿರುದ್ದ 2 -1 ಗೋಲುಗಳ ಜಯ)
3. 1938 > ಇಟಲಿ ( ಹಂಗರಿ ವಿರುದ್ದ 4 -2 ಗೋಲುಗಳ ಜಯ)
4. 1950 > ಉರಗ್ವೆ ( ಬ್ರೆಜಿಲ್ ವಿರುದ್ದ 2 -1 ಗೋಲುಗಳ ಜಯ)
5. 1954 > ಜರ್ಮನಿ ( ಹಂಗರಿ ವಿರುದ್ದ 3 -2 ಗೋಲುಗಳ ಜಯ)
6. 1958 > ಬ್ರೆಜಿಲ್ ( ಸ್ವೀಡನ್ ವಿರುದ್ದ 5 -2 ಗೋಲುಗಳ ಜಯ)

7. 1962 > ಬ್ರೆಜಿಲ್ ( ಜೆಕೊಸ್ಲೋವಾಕಿಯಾ ವಿರುದ್ದ 3 -1 ಗೋಲುಗಳ ಜಯ)

8. 1966 > ಇಂಗ್ಲೆಂಡ್ ( ಜರ್ಮನಿ ವಿರುದ್ದ 4 -2 ಗೋಲುಗಳ ಜಯ)

9. 1970 > ಬ್ರೆಜಿಲ್ ( ಇಟಲಿ ವಿರುದ್ದ 4 -2 ಗೋಲುಗಳ ಜಯ)

10. 1974 > ಜರ್ಮನಿ (ಹಾಲೆಂಡ್ ವಿರುದ್ದ 2 -1 ಗೋಲುಗಳ ಜಯ)

11. 1978 > ಅರ್ಜೆಂಟಿನಾ (ಹಾಲೆಂಡ್ ವಿರುದ್ದ 3 -1 ಗೋಲುಗಳ ಜಯ)

12. 1982 > ಇಟಲಿ ( ಜರ್ಮನಿ ವಿರುದ್ದ 3 -1 ಗೋಲುಗಳ ಜಯ)

13. 1986 > ಅರ್ಜೆಂಟಿನಾ (ಜರ್ಮನಿ ವಿರುದ್ದ 3 -2 ಗೋಲುಗಳ ಜಯ)

14. 1990 > ಜರ್ಮನಿ (ಅರ್ಜೆಂಟಿನಾ ವಿರುದ್ದ 1 -0 ಗೋಲುಗಳ ಜಯ)

15. 1994 > ಬ್ರೆಜಿಲ್ ( ಇಟಲಿ ವಿರುದ್ದ 3 -2 ಗೋಲುಗಳ ಜಯ)

16. 1998 > ಫ್ರಾನ್ಸ್ (ಬ್ರೆಜಿಲ್ ವಿರುದ್ದ 3 -0 ಗೋಲುಗಳ ಜಯ)

17. 2002 > ಬ್ರೆಜಿಲ್ ( ಜರ್ಮನಿ ವಿರುದ್ದ 2 -0 ಗೋಲುಗಳ ಜಯ)

18. 2006 > ಇಟಲಿ (ಫ್ರಾನ್ಸ್ ವಿರುದ್ದ ಟೈಬ್ರೇಕರ್ ನಲ್ಲಿ 5 -3 ಗೋಲುಗಳ ಜಯ)
19. 2010> ಸ್ಪೇನ್ (ನೆದರ್ಲೆಂಡ್ಸ್ ವಿರುದ್ಧ 1-0ರಲ್ಲಿ ಜಯ)
20. 2014> ಜರ್ಮನಿ (ಅರ್ಜೆಂಟೀನಾ ವಿರುದ್ಧ 1-0ರಲ್ಲಿ ಗೆಲುವು)
21. 2018>>ಫ್ರಾನ್ಸ್ (ಕ್ರೋವೇಷಿಯಾ ವಿರುದ್ಧ 4-2ರಲ್ಲಿ ಗೆಲುವು)

Story first published: Sunday, July 15, 2018, 23:07 [IST]
Other articles published on Jul 15, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+