For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬ್ರೆಜಿಲ್-ಅರ್ಜೆಂಟಿನಾ ವಿವಾಹವಂತೆ!: ಫುಟ್ಬಾಲ್ ಪ್ರೇಮಿಗಳ ಮದುವೆ ಕಥೆ

ಬೆಂಗಳೂರು, ಜೂನ್ 20: ಫೀಫಾ ಫುಟ್ಬಾಲ್ ಜ್ವರ ಕಾವೇರುತ್ತಿದೆ. ಕ್ರಿಕೆಟ್ ಗುಂಗಿನಲ್ಲಿದ್ದ ಭಾರತದ ಕ್ರೀಡಾಪ್ರೇಮಿಗಳು ಈಗ ಕಾಲ್ಚೆಂಡಿನಾಟದತ್ತ ಹೊರಳುತ್ತಿದ್ದಾರೆ.

ಮಲಗಿದಾಗಲೂ ಫುಟ್ಬಾಲ್ ಕನಸು, ಏಳುವಾಗಲೂ ಫುಟ್ಬಾಲ್ ಜಪ- ಇದು ಫುಟ್ಬಾಲ್ ಅಭಿಮಾನಿಗಳ ಸ್ಥಿತಿ. ಫುಟ್ಬಾಲ್ ಎಂಬ ವಿಶಿಷ್ಟ ಆಟ ಹುಟ್ಟಿಸುವ ವ್ಯಾಮೋಹವೇ ಅಂಥಹದ್ದು.

ಆದರೆ, ಇಲ್ಲಿನ ಫುಟ್ಬಾಲ್ ಪ್ರೇಮಿ ಜೋಡಿಗಳು ಮದುವೆಯ ಸಂಭ್ರಮಕ್ಕೂ ಫೀಫಾ ವಿಶ್ವಕಪ್‌ನ ಪೋಷಾಕು ತೊಡಿಸಿವೆ.

ಇದು ಫುಟ್ಬಾಲ್ ಹಬ್ಬದ ಸಂಭ್ರಮ ಜೋರಾಗಿರುವ ದೂರದ ಯಾವುದೋ ದೇಶದ ಕತೆಯಲ್ಲ. ನಮ್ಮ ನೆರೆಯ ಕೇರಳ ರಾಜ್ಯದ ಕಥೆ.

ಕೇರಳದಲ್ಲಿ ಎರಡು ಜೋಡಿಗಳು ಫುಟ್ಬಾಲ್ ಸಂಭ್ರಮದಲ್ಲಿ ಮುಳುಗೆದ್ದಿವೆ. ಫುಟ್ಬಾಲ್ ಸಂಭ್ರಮದಂತೆಯೇ ತಮ್ಮ ಮದುವೆ ವರ್ಣರಂಜಿತವಾಗಿರಬೇಕು ಎಂಬ ಕನಸನ್ನು ಸಾಕಾರಗೊಳಿಸಿಕೊಂಡಿವೆ.

ಈ ಎರಡು ಜೋಡಿಗಳ ಫುಟ್ಬಾಲ್ ಮದುವೆ ಹೇಗಿತ್ತು ನೋಡಿ...

ಜೊಬಿನ್ ಮತ್ತು ಇರೇನ್ ಜೋಡಿ

ಜೊಬಿನ್ ಮತ್ತು ಇರೇನ್ ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತ್ರಿಶೂರ್‌ನ ಜೊಬಿನ್ ಮತ್ತು ಇರೇನ್ ತಮ್ಮ ಮದುವೆಯ ಸಂಭ್ರಮಕ್ಕೆ ಚಾಲನೆ ನೀಡಲು ಆಯ್ದುಕೊಂಡಿದ್ದು ಫೀಫಾ ಫುಟ್ಬಾಲ್ ಥೀಮ್ ಅನ್ನು.

ಈ ದಂಪತಿ ಮದುವೆಗೂ ಮುನ್ನ ಫುಟ್ಬಾಲ್ ತಂಡಗಳ ದಿರಿಸು ತೊಟ್ಟು ಕಾಣಿಸಿಕೊಂಡಿದ್ದು ಮಾತ್ರವಲ್ಲ, ಮದುವೆ ಮನೆಗೂ ಫುಟ್ಬಾಲ್ ಕಳೆ ತಂದುಕೊಟ್ಟಿದ್ದರು. ಅದೂ ತಮ್ಮ ನೆಚ್ಚಿನ ತಂಡಗಳ ಬಣ್ಣಗಳಲ್ಲಿ.

ತ್ರಿಶೂರ್‌ನ ಸೇಂಟ್ ಅಲೋಸಿಸ್ ವೆಡ್ಡಿಂಗ್ ಹಾಲ್‌ನಲ್ಲಿ ಆಯೋಜಿಸಿದ್ದ ಮಧ್ಯಾಹ್ನದ ಭೋಜನ ಕೂಟದ ಹಾಲ್‌ 'ಅರ್ಜೆಂಟೀನಾ' ದೇಶವಾಗಿ ಬದಲಾಗಿತ್ತು. ಅರ್ಜೆಂಟೀನಾ ದೇಶದ ಬಾವುಟ, ಅದರ ಫುಟ್ಬಾಲ್ ಜೆರ್ಸಿಯ ವಿನ್ಯಾಸವನ್ನು ಒಳಗೊಂಡ ಸಿಂಗಾರ ಎಲ್ಲರ ಗಮನ ಸೆಳೆದಿತ್ತು.

ಬಿಳಿ-ನೀಲಿ ವರ್ಣಮಯ

ಬಿಳಿ-ನೀಲಿ ವರ್ಣಮಯ

ಹಾಲ್‌ನ ಕುರ್ಚಿಗಳು, ಟೇಬಲ್‌, ವಿದ್ಯುದ್ದೀಪಗಳು, ಬ್ಯಾನರ್‌, ಫ್ಲೆಕ್ಸ್ ಬೋರ್ಡ್ ಮತ್ತು ಗಾಳಿತುಂಬಿದ ಬಲೂನುಗಳು ಎಲ್ಲವೂ ಬಿಳಿ ಮತ್ತು ನೀಲಿಬಣ್ಣದಿಂದ ವಿನ್ಯಾಸಗೊಂಡು ಈ ದಂಪತಿಯ ಅರ್ಜೆಂಟೀನಾದೆಡೆಗಿನ ಪ್ರೀತಿಯನ್ನು ಸಾರುತ್ತಿದ್ದವು.

ಮದುಮಗ ಜೊಬಿನ್ ಅರ್ಜೆಂಟೀನಾ ಫುಟ್ಬಾಲ್ ತಂಡದ ಬಹುದೊಡ್ಡ ಅಭಿಮಾನಿ. ಹೀಗಾಗಿ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸುವ ಬಣ್ಣಗಳಾದ ಬಿಳಿ ಮತ್ತು ನೀಲಿ ಬಣ್ಣಗಳನ್ನು ಬಳಸಿ ಫುಟ್ಬಾಲ್ ಆಕಾರದ ಕೇಕ್ ತಯಾರಿಸಲಾಗಿತ್ತು. ಅದರ ನಡುವೆ ಅರ್ಜೆಂಟೀನಾದ ಬಾವುಟವನ್ನು ಹೋಲುವ ಸೂರ್ಯನ ಚಿನ್ಹೆಯನ್ನೂ ಇರಿಸಲಾಗಿತ್ತು.

ಅರ್ಜೆಂಟೀನಾ ಫ್ಲ್ಯಾಗ್ ಬಲೂನುಗಳು, ಫ್ಲೆಕ್ಸ್‌ಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಎಲ್ಲವೂ ಅರ್ಜೆಂಟೀನಾದ ಬಣ್ಣಗಳನ್ನೇ ಬಿಂಬಿಸುತ್ತಿದ್ದವು. ಇವೆಲ್ಲವನ್ನೂ ಸ್ಥಳೀಯವಾಗಿಯೇ ಸಿದ್ಧಪಡಿಸಿದ್ದು ಎನ್ನುತ್ತಾರೆ ಮದುವೆ ಸಮಾರಂಭದ ಉಸ್ತುವಾರಿ ನಿಭಾಯಿಸಿದ ರೋಮನ್ ಇವೆಂಟ್ ಪ್ಲ್ಯಾನರ್ಸ್ ಕಂಪೆನಿಯ ಜಿನು ಪಟೇಲ್.

ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ಲಾಭ

ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ಲಾಭ

ಕೇರಳದಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅವರು ಇಷ್ಟಪಡುವ ದಿರಿಸು, ಬಗೆಬಗೆಯ ಅಲಂಕಾರಿಕ ವಸ್ತುಗಳು ಈ ದೇಶಗಳ ಬಣ್ಣಗಳಲ್ಲಿಯೇ ಸಿಗುತ್ತವೆ. ಇದನ್ನು ಇಲ್ಲಿನ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿವೆ.

ಜೋಬಿನ್ಸ್‌ನ ಸ್ನೇಹಿತರು ಫೀಫಾ ವಿಶ್ವಕಪ್‌ ಟ್ರೋಫಿಯನ್ನು ಹೋಲುವ ಉಡುಗೊರೆಯನ್ನು ನೀಡಿ ಅಭಿನಂದಿಸಿದ್ದಾರೆ.

ಹಾಲ್‌ಗೆ ಪ್ರವೇಶಿಸುವ ಎರಡೂ ಬದಿಗಳಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಲೂನುಗಳನ್ನು ಹಿಡಿದು ಸ್ನೇಹಿತರು ನಿಂತಿದ್ದರು. ಈ ಜೋಡಿ ಒಳಗೆ ಬಂದ ಬಳಿಕ ಅವರ ಕೈಗೆ ಬಲೂನುಗಳನ್ನು ಹಸ್ತಾಂತರಿಸಿದರು. ಬಳಿಕ ಈ ಬಲೂನುಗಳನ್ನು ಹಾರಿಬಿಡಲಾಯಿತು.

ಇಡೀ ಸಭಾಂಗಣ ಅರ್ಜೆಂಟೀನಾದ ಬಣ್ಣಗಳಿಂದ ತುಂಬಿದ್ದರೆ, 30 ಮಂದಿ ಅಡುಗೆ ಸಿಬ್ಬಂದಿಯೂ ಅದೇ ದಿರಿಸಿನೊಂದಿಗೆ ಕಾಣಿಸಿಕೊಂಡರು.

ಮೋನಿಶಾ ಮತ್ತು ರೋಶನ್ ಜೋಡಿ

ಮೋನಿಶಾ ಮತ್ತು ರೋಶನ್ ಜೋಡಿ

ಮತ್ತೊಂದು ಜೋಡಿ ಮೋನಿಶಾ ಮತ್ತು ರೋಶನ್ ವಿಶ್ವಕಪ್ ಫುಟ್ಬಾಲ್ ಶುರುವಾಗುವ ಮುನ್ನವೇ ಅಂದರೆ, ಮೇ 27ರಂದೇ ಮದುವೆಯಾಗಿದ್ದರು.

ಮದುವೆಗೂ ಮುನ್ನ ಈ ಜೋಡಿ ನಡೆಸಿದ ಫೋಟೊ ಶೂಟ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ತ್ರಿಶೂರ್ ಮೂಲದ ಫೋಟೊಗ್ರಾಫರ್ ಅನೀಶ್ ತ್ರಿಥಲ್ಲೂರ್ ಅವರ ಐಡಿಯಾ ಇದು. ಅನೀಶ್ ಸಲಹೆಯಂತೆ ಮೋನಿಶಾ ಮತ್ತು ರೋಶನ್ ಜೋಡಿ ಅರ್ಜೆಂಟೀನಾ-ಬ್ರೆಜಿಲ್ ತಂಡದ ಪ್ರತಿನಿಧಿಗಳಾಗಿ ರೊಮ್ಯಾಂಟಿಕ್ ಫೋಟೊಶೂಟ್ ಮಾಡಿಸಿಕೊಂಡರು.

ವಿಶ್ವಕಪ್ ಎಂದರೆ ಪ್ರೀತಿ

ವಿಶ್ವಕಪ್ ಎಂದರೆ ಪ್ರೀತಿ

ಪ್ರತಿ ಬಾರಿಯೂ ವಿಶ್ವಕಪ್‌ಅನ್ನು ತಪ್ಪದೇ ನೋಡುತ್ತೇನೆ. ನನ್ನ ಮದುವೆಯ ಫೋಟೊಶೂಟ್ ವಿಭಿನ್ನವಾಗಿರಬೇಕು ಎಂದು ಬಯಸಿದ್ದೆ. ಆಗ ಅನೀಶ್ ಫುಟ್ಬಾಲ್ ಥೀಮ್‌ನ ಫೋಟೊಶೂಟ್ ಐಡಿಯಾ ನೀಡಿದರು ಎಂದು ರೋಶನ್ ತಿಳಿಸಿದ್ದಾರೆ.

ಈ ಫೋಟೊಶೂಟ್‌ನಲ್ಲಿ ಮೋನಿಶಾ ಅರ್ಜೆಂಟೀನಾ ದಿರಿಸಿನಲ್ಲಿದ್ದರೆ, ರೋಶನ್ ಬ್ರೆಜಿಲ್ ಉಡುಪು ತೊಟ್ಟಿದ್ದರು. ಮಳೆಯಲ್ಲಿ ಚೆಂಡನ್ನು ಒದೆಯುವುದು, ಅದರೊಂದಿಗೆ ಆಡುವ ಅನೇಕ ರಮ್ಯ ಚಿತ್ರಗಳನ್ನು ಅನೀಶ್ ಕ್ಲಿಕ್ಕಿಸಿದ್ದಾರೆ.

ವೈರಲ್ ಆಗುವುದು ಖಾತರಿಯಿತ್ತು

ವೈರಲ್ ಆಗುವುದು ಖಾತರಿಯಿತ್ತು

ರೋಶನ್ ವಿಶ್ವಕಪ್ ಫುಟ್ಬಾಲ್ ಅನ್ನು ವೀಕ್ಷಿಸುತ್ತಾರಾದರೂ ಈ ದಂಪತಿ ಫುಟ್ಬಾಲ್ ಆಟದ ದೊಡ್ಡ ಅಭಿಮಾನಿಗಳೇನೂ ಅಲ್ಲ. ಆದರೆ, ಈ ಫೋಟೊಶೂಟ್ ವ್ಯಾಪಕವಾಗಿ ಗಮನ ಸೆಳೆಯುತ್ತದೆ ಎಂಬ ಭರವಸೆ ಅವರಿಗಿತ್ತು.

ಇಡೀ ಕೇರಳದ ತುಂಬ ಬ್ರೆಜಿಲ್ ಮತ್ತು ಅರ್ಜೆಂಟೀನಾ ಅಭಿಮಾನಿಗಳಿದ್ದಾರೆ. ಇದು ಫೋಟೊಶೂಟ್‌ಗೆ ಮಹಾನ್ ಮತ್ತು ವೈರಲ್ ಆಗುವ ಐಡಿಯಾ ಎಂಬುದನ್ನು ಆಲೋಚಿಸಿದ್ದೆವು. ತ್ರಿಶೂರ್‌ನ ಚಾವಕ್ಕಾಡ್ ಪಾರ್ಕ್‌ನಲ್ಲಿ ಫೋಟೊಶೂಟ್ ನಡೆಸಿದ್ದೆವು. ಹಿಂದೆಂದೂ ಸಿಗದ ಅದ್ಭುತ ಅನುಭವ ದೊರಕಿತು ಎಂದು ಅನೀಶ್ ವಿವರಿಸಿದ್ದಾರೆ.

Story first published: Wednesday, June 20, 2018, 15:26 [IST]
Other articles published on Jun 20, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+