ಫುಟ್ಬಾಲ್ ನಿಂದ ಫೀಫಾ, ಯುಇಎಫ್ಎ ಅಧ್ಯಕ್ಷರಿಗೆ ನಿಷೇಧ
ಜ್ಯೂರಿಚ್, ಡಿ. 21: ಫೀಫಾ ಚುನಾವಣೆ ಗೆದ್ದ ನಂತರ ಅಚ್ಚರಿ ಎಂಬಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸೆಪ್ ಬ್ಲಾಟರ್ ಹಾಗೂ ಯುಇಎಫ್ಎ ಅಧ್ಯಕ್ಷ ಮೈಕಲ್ ಪ್ಲಾಟಿನಿ ಅವರಿಗೆ 8 ವರ್ಷಗಳ ಕಾಲ ಫುಟ್ಬಾಲ್ ನಿಂದ ನಿಷೇಧ ಹೇರಲಾಗಿದೆ.
17 ವರ್ಷಗಳ ಕಾಲ ಫುಟ್ಬಾಲ್ ಜಗತ್ತಿನ ಉನ್ನತ ಹುದ್ದೆ ಪಡೆದುಕೊಂಡ 79 ವರ್ಷ ವಯಸ್ಸಿನ ಬ್ಲಾಟರ್ ನಂತರ ಚುನಾವಣೆ ಗೆದ್ದು ರಾಜೀನಾಮೆ ನೀಡಿದ್ದರು. ಯುರೋಪ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್ಎ) ಅಧ್ಯಕ್ಷ ಫ್ರಾನ್ಸ್ನ ಮೈಕೆಲ್ ಪ್ಲಾಟಿನಿ ಅವರು ಫೀಫಾದ ನೂತನ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. [ಫೀಫಾ ಅಧ್ಯಕ್ಷ ಚುನಾವಣೆ ಗೆದ್ದಿದ್ದೇಕೆ? ರಿಸೈನ್ ಮಾಡಿದ್ದೇಕೆ?]

ಆದರೆ, ಇಬ್ಬರ ವಿರುದ್ಧ 2 ಮಿಲಿಯನ್ ಡಾಲರ್ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಫೀಫಾ ಭ್ರಷ್ಟಾಚಾರ ನಿಗ್ರಹ ಸಮಿತಿ ನೀಡಿದ ವರದಿ ಆಧಾರಿಸಿ ಇಬ್ಬರಿಗೂ ನಿಷೇಧ ಹೇರಲಾಗಿದೆ. ಬ್ಲಾಟರ್ ಅವರಿಗೆ 40,000 ಡಾಲರ್ ಹಾಗೂ ಪ್ಲಾಟಿನಿಗೆ 80,000 ಡಾಲರ್ ದಂಡ ವಿಧಿಸಲಾಗಿದೆ. [ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]
60 ವರ್ಷ ವಯಸ್ಸಿನ ಪ್ಲಾಟಿನಿ ಅವರು ಮೂರು ಬಾರಿ ಯುರೋಪಿನ ಶ್ರೇಷ್ಠ ಆಟಗಾರ ಎನಿಸಿಕೊಂಡ ಫ್ರಾನ್ಸ್ ತಂಡದ ನಾಯಕರಾಗಿದ್ದರು. 2007ರಿಂದ ಯುಇಎಫ್ಎ ಅಧಿಕಾರ ವಹಿಸಿಕೊಂಡಿದ್ದರು.
ಫೀಫಾ ಅಧ್ಯಕ್ಷೀಯ ಚುನಾವಣೆ ಫೆಬ್ರವತರಿ 26ರಂದು ನಡೆಯಲು ನಿಗದಿಯಾಗಿದೆ. ಏಷ್ಯನ್ ಫುಟ್ಬಾಲ್ ನ ಮುಖ್ಯಸ್ಥ ಬಹರೇನ್ ನ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ, ದಕ್ಷಿಣ ಆಫ್ರಿಕಾ ಉದ್ಯಮಿ ಟೊಕ್ಯೋ ಸೆಕ್ಸ್ ವಾಲೆ, ಜೋರ್ಡನ್ ದೊರೆ ಅಲಿ ಬಿನ್ ಅಲ್ ಹಸನ್, ಸ್ವಿಜರ್ಲೆಂಡ್ ನ ಜಿಯಾನಿ ಇನ್ಫಾಟಿನೋ, ಫ್ರಾನ್ಸಿನಿ ಜೆರೊಮಿ ಶಾಂಪೇನ್ ಅವರು ಅಧ್ಯಕ್ಷ ಪದವಿ ಮೇಲೆ ಕಣ್ಣು ಹಾಕಿದ್ದಾರೆ. 209 ಸದಸ್ಯ ರಾಷ್ಟ್ರಗಳು ಗುಪ್ತ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications