ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾವೈರಸ್‌ಗೆ ಮಾಜಿ ಫುಟ್ಬಾಲ್ ಆಟಗಾರ ಮೊಹಮ್ಮದ್ ಫರಾಹ್ ಸಾವು

Former African footballer Mohamed Farah dies due to COVID-19

ನವದೆಹಲಿ, ಮಾರ್ಚ್ 26: ಕೊರೊನಾವೈರಸ್‌ನಿಂದಾಗಿ ಬಳಲುತ್ತಿದ್ದ, ಸೊಮಾಲಿಯ ಫುಟ್ಬಾಲ್ ದಂತಕತೆ ಅಬ್ದುಲ್ ಕಾದಿರ್ ಮೊಹಮ್ಮದ್ ಫರಾಹ್ ಸಾವನ್ನಪ್ಪಿದ್ದಾರೆ ಎಂದು ಕಾನ್ಫೆಡರೇಶನ್ ಆಫ್ ಆಫ್ರಿಕನ್ ಫುಟ್ಬಾಲ್ (ಸಿಎಎಫ್‌) ಮತ್ತು ಸೊಮಾಲಿ ಫುಟ್ಬಾಲ್ ಫೆಡರೇಶನ್ (ಎಸ್‌ಎಫ್‌ಎಫ್‌) ಘೋಷಿಸಿದೆ.

50 ಲಕ್ಷ ರೂ. ಮೌಲ್ಯದ ಅಕ್ಕಿ ದಾನ ಮಾಡಲಿದ್ದಾರೆ ಸೌರವ್ ಗಂಗೂಲಿ50 ಲಕ್ಷ ರೂ. ಮೌಲ್ಯದ ಅಕ್ಕಿ ದಾನ ಮಾಡಲಿದ್ದಾರೆ ಸೌರವ್ ಗಂಗೂಲಿ

ಕಳೆದ ವಾರ ಕೊರೊನಾವೈರಸ್‌ ಸೋಂಕು ತಗುಲಿರುವುದು ಸಾಭೀತಾಗಿದ್ದ ಮೊಹಮ್ಮದ್ ಫರಾಹ್, ನಾರ್ತ್‌ವೆಸ್ಟ್ ಲಂಡನ್ ಹಾಸ್ಪಿಟಲ್‌ನಲ್ಲಿ ಮಂಗಳವಾರ (ಮಾರ್ಚ್ 24) ಕೊನೆಯುಸಿರೆಳೆದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಫರಾಹ್ ಸಾಯುವುದಕ್ಕೂ ಮುನ್ನ ಸೊಮಾಲಿಯಾದ ಯೂತ್ ಆಫ್‌ ಸ್ಫೋರ್ಟ್ ಸಚಿವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!

ಬೆಲೆಡ್ವೆನ್ ಸಿಟಿಯಲ್ಲಿ 15 ಫೆಬ್ರವರಿ 1961ರಲ್ಲಿ ಮೊಹಮ್ಮದ್ ಫರಾಹ್ ಜನಿಸಿದ್ದರು. ಫುಟ್ಬಾಲ್ ವೃತ್ತಿ ಜೀವನಕ್ಕೆ ಫರಾಹ್ ಇಳಿದಿದ್ದು 1976ರಲ್ಲಿ. ಅಂದು ನ್ಯಾಷನಲ್ ಸ್ಕೂಲ್ ಫುಟ್ಬಾಲ್ ಟೂರ್ನಿಯಲ್ಲಿ ಫರಾಹ್ ಆಡಿದ್ದರು. ಅದಾಗಿ ಪ್ರದೇಶಿಕ ಮಟ್ಟದಲ್ಲಿ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಾರಂಭಿಸಿದ ಮೊಹಮ್ಮದ್ ಫರಾಹ್ ಅಲ್ಲಿಂದ ಬೆಳೆಯಲಾರಂಭಿಸಿದರು.

ಭಾರತದ ಟಾಪ್ ಫೀಲ್ಡರ್‌ಗಳ ಹೆಸರಿಸಿದ ಮಾಜಿ ಆಟಗಾರ ಹರ್ಷ ಭೋಗ್ಲೆಭಾರತದ ಟಾಪ್ ಫೀಲ್ಡರ್‌ಗಳ ಹೆಸರಿಸಿದ ಮಾಜಿ ಆಟಗಾರ ಹರ್ಷ ಭೋಗ್ಲೆ

ಕೊರೊನಾವೈರಸ್‌ನಿಂದಾಗಿ ಸಾವನ್ನಪ್ಪಿದ ಆಫ್ರಿಕಾದ ಮೊದಲ ಫುಟ್ಬಾಲ್ ಸ್ಟಾರ್‌ ಆಗಿ ಕಾದಿರ್ ಮೊಹಮ್ಮದ್ ಫರಾಹ್ ಗುರುತಿಸಿಕೊಂಡಿದ್ದಾರೆ. ಮಾರಕ ಕೋವಿಡ್‌-19ನಿಂದಾಗಿ ವಿಶ್ವದಾದ್ಯಂತ ಸುಮಾರು 20,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲೂ 12 ಮಂದಿ ಮೃತರಾಗಿದ್ದು ವರದಿಯಾಗಿದೆ.

Story first published: Thursday, March 26, 2020, 13:55 [IST]
Other articles published on Mar 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X