ಸ್ಪೇನ್ ಮಾಜಿ ಸ್ಟಾರ್ ಫುಟ್ಬಾಲರ್ ಜೋಸ್ ಆಂಟೋನಿಯೊ ದುರ್ಮರಣ

ಮ್ಯಾಡ್ರಿಡ್, ಜೂನ್ 1: ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಸ್ಪೇನ್ ರಾಷ್ಟ್ರೀಯ ತಂಡದಲ್ಲಿ ಮಿಂಚಿದ್ದ ಮಾಜಿ ಫುಟ್ಬಾಲರ್ ಜೋಸ್ ಆಂಟೋನಿಯೊ ರೆಯೆಸ್ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನು ರೆಯೆಸ್ ತವರೂರಿನ ಕ್ಲಬ್ ಸೆವಿಲ್ಲಾ ಶನಿವಾರ (ಜೂನ್ 1) ತಿಳಿಸಿದೆ. ಆಂಟೋನಿಯೊ ರೆಯೆಸ್‌ಗೆ 35 ವರ್ಷ ವಯಸ್ಸಾಗಿತ್ತು.
ಸೆವಿಲ್ಲಾ ತಂಡದಲ್ಲಿ ಖ್ಯಾತಿ ಗಳಿಸಿದ್ದ ಜೋಸ್ ಆಂಟೋನಿಯೊ ಅನಂತರ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಅಟ್ಲೆಂಟಿಕೋ ಮ್ಯಾಡ್ರಿಡ್ ಪರ ಗಮನ ಸೆಳೆದಿದ್ದರು. ಅಂದ್ಹಾಗೆ ರೆಯೆಸ್ ಸೆವಿಲ್ಲಾ ಸೇರಿಕೊಂಡಿದ್ದು 16ನೇ ಹರೆಯದಲ್ಲಿ. 1999-2000ರ ವರೆಗೆ ರೆಯೆಸ್, ಸೆವಿಲ್ಲಾ ಪ್ರತಿನಿಧಿಸಿದ್ದರು.
'ಈ ಕೆಟ್ಟ ಸುದ್ದಿಯನ್ನು ಖಾತ್ರಿಪಡಿಸಲು ನಮಗೆ ಇಷ್ಟವಾಗುತ್ತಿಲ್ಲ. ನಮ್ಮ ನೆಚ್ಚಿನ ಸ್ಟಾರ್ ಜೋಸ್ ಆಂಟೋನಿಯೊ ರೆಯೆಸ್ ಅವರು ದುರ್ಮರಣಕ್ಕೀಡಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಸೆವಿಲ್ಲಾ, ಟ್ವಿಟರ್‌ನಲ್ಲಿ ಬರೆದುಕೊಂಡಿದೆ. ಎಲ್ಲಾ ತಂಡಗಳನ್ನು/ಪಂದ್ಯಗಳನ್ನು ಸೇರಿಸಿ ಆಂಟೋನಿಯೊ ರೆಯೆಸ್ ಒಟ್ಟು 95 ಗೋಲ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications