Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ: ಆಸ್ಟ್ರೇಲಿಯಾವನ್ನು 2-1ರ ಅಂತರದಿಂದ ಸೋಲಿಸಿದ ಫ್ರಾನ್ಸ್

France vs Australia FIFA World Cup 2018: France beat Australia 2-1

ಮಾಸ್ಕೋ, ಜೂ. 16: ರಷ್ಯಾದ ಕಜನ್ ಅರೆನಾದಲ್ಲಿ ಇಂದು ನಡೆದ ಸಿ ಗ್ರೂಪಿನ ಆಸ್ಟ್ರೇಲಿಯಾ-ಫ್ರಾನ್ಸ್ ನಡುವಿನ ಫೀಫಾ ವಿಶ್ವಕಪ್ ಕಾದಾಟದಲ್ಲಿ ಫ್ರಾನ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಜಯ ಸಾಧಿಸಿದೆ.

ಸೋರ್ ಕಾರ್ಡ್

ಮೊದಲಾರ್ಧದಲ್ಲಿ ಗೋಲುಗಳೇ ದಾಖಲಾಗಿರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಎರಡು ಮತ್ತು ಆಸ್ಟ್ರೇಲಿಯಾ ಒಂದು ಗೋಲು ದಾಖಲಿಸಿ ಫ್ರಾನ್ಸ ಎದುರು ತಲೆಬಾಗಿತು. ಫ್ರಾನ್ಸ್ ನ ಆಂಟೊಯಿನ್ ಗ್ರೀಜ್ಮನ್ ಅವರು 58 ನಿಮಿಷದಲ್ಲಿ ಫ್ರಾನ್ಸ ಪರ ಮೊದಲ ಗೋಲ್ ಬಾರಿಸಿ ಖಾತೆ ತೆರೆದರು.

ಎರಡೂ ತಂಡಗಳ ಭರ್ಜರಿ ಕಾದಾಟದ ಬಳಿಕ 62ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಮೈಲ್ ಜೆಡಿನಾಕ್ ಅವರು ಗೋಲ್ ಸಿಡಿಸಿ ಫ್ರಾನ್ಸ್ ಮುನ್ನಡೆಯನ್ನು ಸರಿದೂಗಿಸಿದರು. ಪಂದ್ಯ ಕೊಂಚ ಕುತೂಹಲಕಾರಿಯಾಯಿತು.

ದ್ವಿತೀಯ ಗೋಲ್ ಬಳಿಕ ಸುಮಾರು 8 ನಿಮಿಷಗಳ ಬಳಿಕ ಅಂದರೆ 80ನೇ ನಿಮಿಷದಲ್ಲಿ ಪಾಲ್ ಪೋಗ್ಬಾ ಅವರು ಫ್ರಾನ್ಸ್ ಪರ ಎರಡನೆಯ ಗೋಲ್ ಬಾರಿಸಿ ಫ್ರಾನ್ಸ್ 2-1ರ ಮುನ್ನಡೆ ತಂದುಕೊಟ್ಟರು. ಅನಂತರ 5 ನಿಮಿಷಗಳನ್ನು ಸೇರಿಸಲಾಯಿತಾದರೂ ಗೋಲ್ ದಾಖಲಾಗಲಿಲ್ಲ. ಫ್ರಾನ್ಸ್ ಗೆಲುವನ್ನು ಸಂಭ್ರಮಿಸಿತು.

Story first published: Saturday, June 16, 2018, 19:56 [IST]
Other articles published on Jun 16, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+