For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಚೆನ್ನೈಯಿನ್‌ಗೆ ಫೈನಲ್ ತಲುಪಲು ಒಂದೇ ಹೆಜ್ಜೆ

Goa host Chennaiyin seeking to plot greatest-ever ISL comeback

ಗೋವಾ, ಮಾರ್ಚ್ 6: ಈಗಾಗಲೇ ಚೆನ್ನೈಯಿನ್ ಎಫ್ ಸಿ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 1-4 ಗೋಲುಗಳ ಅಂತರದಲ್ಲಿ ಸೋಲು ಹಿನ್ನಡೆ ಕಂಡಿರುವ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೂರನೇ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಥ ಜಯ ಗಳಿಸಿ ಸೆಮಿಫೈನಲ್ ತಲಪುವ ಗುರಿ ಹೊಂದಿದೆ. ಆದರೆ ಈ ಬಾರಿ ಗೋವಾಕ್ಕೆ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ತಲಪುವುದು ಅಷ್ಟು ಸುಲಭವಲ್ಲ.

ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ ಆಡಿರದ ಎಡು ಗಾರ್ಸಿಯಾ ನಾಳೆಯ ಪಂದ್ಯಕ್ಕೆ ಲಭ್ಯ ಇರುವುದು ಗೋವಾ ತಂಡದ ಬಲವನ್ನು ಹೆಚ್ಚಿಸಿದೆ. ಗಾಯದ ಸಮಸ್ಯೆಯಿಂದಾಗಿ ಎರಡು ವಾರಗಳ ಕಾಲ ವಿಶ್ರಾಂತಿಯಲ್ಲಿದ್ದ ಬ್ರೆಂಡಾನ್ ಫೆರ್ನಾಂಡೀಸ್ ಹಾಗೂ ಹ್ಯುಗೊ ಬೌಮಾಸ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. 14 ಪಂದ್ಯಗಳಲ್ಲಿ ಬೌಮಾಸ್ 10 ಗೋಲುಗಳನ್ನಗ ಗಳಿಸಿದ್ದು, 11 ಗೋಲುಗಳನ್ನು ಗಳಿಸಲು ನೆರವಾಗಿದ್ದಾರೆ. ಇದರಿಂದಾಗಿ ಗೋವಾ ತಂಡ ಎರಡನೇ ಪಂದ್ಯದಲ್ಲಿ ಜಯ ಗಳಿಸುವ ನಿರೀಕ್ಷೆಯಲ್ಲಿದೆ.

ಫೆರಾನ್ ಕೊರೊಮಿನಾಸ್ ಹಿಂದಿನ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರರಾಗಿದ್ದು, ಈಗ ಒಂಬತ್ತನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಗೋವಾ ಇದುವರೆಗೂ ಗಳಿಸಿರುವ ಗೋಲುಗಳಿಗಿಂತ ಹೆಚ್ಚಿನ ಗೋಲನ್ನು ನಾಳೆಯ ಪಂದ್ಯದಲ್ಲಿ ಗಳಿಸಬೇಕಾಗುತ್ತದೆ. ತಂಡದ ಮಧ್ಯಂತರ ಕೋಚ್ ಕ್ಲಿಫಾರ್ಡ್ ಮಿರಾಂಡ ಅವರಿಗೆ ಪೂರ್ಣ ಆಕ್ರಮಣಕಾಗಿ ತಂಡವನ್ನು ಆಯ್ಕೆ ಮಾಡುವುದೋ ಅಥವಾ ಸೆಂಟರ್ ಬ್ಯಾಕ್ ಕಡೆಗೆ ಹೆಚ್ಚಿನ ಗಮನ ಹರಿಸುವುದೂ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ.

Goa host Chennaiyin seeking to plot greatest-ever ISL comeback

''ಹಿನ್ನಡೆಯ ಕಂಡ ಗೋಲುಗಳನ್ನು ಸರಿದೂಗಿಸಿ ಜಯ ಕಾಣಬೇಕಾಗಿದೆ. ಇದರರ್ಥ ಪಂದ್ಯ ಆರಮಭಗೊಂಡ ಮೊದಲ ನಿಮಿಷದಿಂದಲೇ ಗೋಲು ಗಳಿಸುದೆಂದಲ್ಲ. ಫುಟ್ಬಾಲ್ ನಲ್ಲಿ ಮೊದಲ 10-15 ನಿಮಿಷಗಳ ಆಟ ಪಂದ್ಯವನ್ನು ತೀರ್ಮಾನಿಸುವುದಿಲ್ಲ. ಅಂತಿಮ ವಿಜಿಲ್ ವರೆಗೂ ನಾವು ನಿಮಿಷದಿಂದ ನಿಮಿಷಕ್ಕೆ ಪಂದ್ಯವನ್ನು ನಿಯಂತ್ರಿಸಬೇಕಾಗಿದೆ,'' ಎಂದು ಗೋವಾ ಕೋಚ್ ಕ್ಲಿಫೋರ್ಡ್ ಮಿರಾಂಡ ಹೇಳಿದ್ದಾರೆ.

ಚೆನ್ನೈಯಿನ್ ಎಫ್ ಸಿ ತಂಡ ಆರಂಭದಲ್ಲೇ ಗೋಲು ಗಳಿಸಿ ಗೋವಾ ತಂಡವನ್ನು ಸಂಕಷ್ಟಕ್ಕೆ ಈಡುಮಾಡುವ ಗುರಿ ಹೊಂದಿದೆ. ಚೆನ್ನೈಯಿನ್ ತಂಡದ ಫೈನ್ ಹಾದಿಗೆ ಅಡ್ಡಿ ತರಬೇಕಾದರೆ ಗೋವಾ ತಂಡ ಕನಿಷ್ಠ 5 ಗೋಲುಗಳನ್ನು ಗಳಿಸಬೇಕಾಗಿದೆ. ಮೂರು ಗೋಲುಗಳಿಂದ ಮೇಲುಗೈ ಸಾಧಿಸಿದ್ದರೂ ತನಮ್ಮ ತಂಡ ಎರಡನೇ ಸೆಮಿಫೈನಲ್ ನಲ್ಲಿ ಎಚ್ಚರಿಕೆಯಿಂದ ಆಡಲಿದೆ ಎಂದಿದ್ದಾರೆ.

''ಯಾವುದೇ ರೀತಿಯ ಅನುಕೂಲತೆ ಹೊಂದಿದ್ದರೂ ಅದು ತಂಡಕ್ಕೆ ಅನುಕೂಲವೇ, ಅದನ್ನು ಬದಿಗಿರಿಸಿ ಹೇಳುವುದಾದರೆ, ನಾವು ಅತ್ಯಂತ ಅಪಾಯಕಾರಿ ಪಂದ್ಯವನ್ನು ಎದುರು ನೋಡುತ್ತಿದ್ದೇವೆ, ಲೀಗ್ ನಲ್ಲಿ ಆಡಿದ 18 ಪಂದ್ಯಗಳಲ್ಲೂ ಗೋವಾ ಬಲಿಷ್ಠ ತಂಡವಾಗಿ ಮೂಡಿ ಬಂದಿತ್ತು. ಗೋವಾ ತಂಡದ ಬಗ್ಗೆ ಇರುವ ಗೌರವ ಯಾವುದೇ ಕಾರಣಕ್ಕೂ ಬದಲಾಗದು, ನಾವು ಈಗಾಗಲೇ ಗಳಿಸಿರುವ ಲಾಐವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲಿದ್ದೇವೆ,'' ಎಂದು ಓವೆನ್ ಕೊಯ್ಲ್ ಹೇಳಿದ್ದಾರೆ.

Story first published: Friday, March 6, 2020, 21:35 [IST]
Other articles published on Mar 6, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+