ಐಎಸ್ಎಲ್ 2019 : ಗೋವಾದಲ್ಲಿ ಗೋಲೇ ಆಗಿಲ್ಲ, ಪಂದ್ಯ ಡ್ರಾ

ಗೋವಾ, ಜನವರಿ 28 : ಸುಬ್ರತೊ ಪಾಲ್ ಅವರು ರಕ್ಷಣಾತ್ಮಕ ಪ್ರದರ್ಶನ ತೋರದೇ ಇರುತ್ತಿದ್ದರೆ ಗೋವಾ ತಂಡ ಜೇಮ್ಶೆಡ್ಪುರ ವಿರುದ್ಧ ಜಯ ಗಳಿಸಿರುತ್ತಿತ್ತು. ಆದರೆ ಪಾಲ್ ಪಂದ್ಯದ ಹೀರೋ ಎನಿಸಿದರು. ಇದರೊಂದಿಗೆ ಗೋವಾ ಹಾಗೂ ಜೇಮ್ಶೆಡ್ಪುರ ನಡುವಿನ ಇಂಡಿಯನ್ ಸೂಪರ್ ಲೀಗ್ ನ 63ನೇ ಪಂದ್ಯ ಗೋಳಿಲ್ಲದೇ ಡ್ರಾದಲ್ಲಿ ಕೊನೆಗೊಂಡಿತು.
ಗೋಲಿಲ್ಲದ ಪ್ರಥಮಾರ್ಧ ಗೋವಾ ನಾಲ್ಕನೇ ಸ್ಥಾನದಲ್ಲೇ ಉಳಿದರೆ ಜೇಮ್ಶೆಡ್ಪುರ ಐದನೇ ಸ್ಥಾನದಲ್ಲಿ ಮುಂದುವರಿಯಿತು. ಫೆರಾನ್ ಕೊರೊಮಿನಾಸ್ ಗೆ ಗೋಲು ಗಳಿಸುವ ಅವಕಾಶ ನೀಡದಿರುವುದು ಜೇಮ್ಶೆಡ್ಪುರ ತಂಡದ ಪ್ರಮುಖ ಸಾಧನೆಯಾಗಿತ್ತು.
ಗೋವಾ ತಂಡ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿ ಪ್ರಥಮಾರ್ಧದಲ್ಲಿ ಮಿಂಚಿತ್ತು. ಆದರೆ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟಿದ್ದು ಜೆಮ್ಷೆಡ್ಪುರವೇ ಹೆಚ್ಚು. ಲೀಗ್‌ನಲ್ಲಿ ಗೋಲಿನ ಮಳೆಗರೆದ ಗೋವಾ ಈಗ ಮನೆಯಂಗಣದಲ್ಲೇ ಗೋಲು ಗಳಿಸಲು ಹರಸಾಹಸ ಪಡುತ್ತಿದೆ. ಇತ್ತಂಡಗಳು ಒಂದು ರೀತಿಯಲ್ಲಿ ತಾಳ್ಮೆಯ ಆಟಕ್ಕೆ ಮನ ಮಾಡಿದವು. ಗೋವಾದ ನೈಜ ಆಕ್ರಮಣಕಾರಿ ಆಟ ಕಂಡು ಬರಲಿಲ್ಲ. ದ್ವಿತೀಯಾರ್ಧದದಲ್ಲಿ ಗೋವಾ ಗೋಲು ಗಳಿಸುವ ನಿರೀಕ್ಷೆ ಇದೆ. ಏಕೆಂದರೆ ತಂಡಕ್ಕೆ ಇಲ್ಲಿ ಜಯದ ಅಗತ್ಯವಿದೆ.
ಅದೇ ರೀತಿ ಜೆಮ್ಷುಡ್ಪುರದ ಡಿಫೆನ್ಸ್ ವಿಭಾಗ ಕೂಡ ಗೋವಾದ ನಿಯಂತ್ರಣಕ್ಕೆ ಸಜ್ಜಾಯಿತು. ಮಾರಿಯೋ ಆರ್ಕ್ವೆಸ್‌ಗೆ ಗೋಲು ಗಳಿಸುವ ಅವಕಾಶ ಸಿಕ್ಕಿದ್ದನ್ನು ಹೊರತುಪಡಿಸಿದರೆ 45 ನಿಮಿಷಗಳ ಆಟದಲ್ಲಿ ಸ್ಪಷ್ಟ ಅವಕಾಶ ಸಿಕ್ಕಿದ್ದು ವಿರಳ.
ಹೋರಾಟದಲ್ಲಿ ಮುಂದುವರಿಯಿರಿ ಇಲ್ಲ ಸೋತು ನಿರ್ಗಮಿಸಿ. ಇದು ಇಂಡಿಯನ್ ಸೂಪರ್ ಲೀಗ್‌ನ ಸದ್ಯದ ಸ್ಥಿತಿ. ವಿರಾಮದ ನಂತರ ಪಂದ್ಯಗಳು ಆರಂಭಗೊಂಡಿದ್ದು, ಅಂತಿಮ ನಾಲ್ಕರ ಹಂತಕ್ಕಾಗಿ ಹೋರಾಟ ಆರಂಭಗೊಂಡಿದೆ.
63ನೇ ಪಂದ್ಯದಲ್ಲಿ ಗೋವಾ ಎಫ್ ಸಿ ಹಾಗೂ ಜೆಮ್ಷೆಡ್ಪುರ ತಂಡಗಳು ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಹೋರಾಟ ಆರಂಭಿಸಿದವು, ಇಲ್ಲಿ ಸಿಗುವ ಜಯ ತಂಡವನ್ನು ಅಂತಿಮ ನಾಲ್ಕರ ಹಂತಕ್ಕೆ ಹತ್ತಿರವಾಗಿಸಲಿದೆ. ಗೋವಾಕ್ಕಿಂತ ಜೆಮ್ಷೆಡ್ಪುರ ಒಂದು ಪಂದ್ಯ ಹೆಚ್ಚು ಆಡಿದೆ. ಗೋವಾ ತಂಡ ಈ ಋತುವಿನಲ್ಲಿ ಉತ್ತಮ ಆರಂಭ ಕಂಡಿತ್ತು. ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿಸಿತ್ತು.
ಆದರೆ ವಿರಾಮದ ಮೊದಲು ಆಡಿದ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು. ಪ್ರವಾಸಿ ಜೆಮ್ಷೆಡ್ಪುರ ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿರಲಿಲ್ಲ. ಜೆಮ್ಷೆಡ್ಪುರ ತಂಡ ಗೋವಾ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಬಾರಿ ಮಾತ್ರ. ಎರಡು ಬಾರಿ ಸೋಲನುಭವಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಗೆದ್ದಿರುವ ಒಂದು ಪಂದ್ಯ ಈ ಬಾರಿಯ ಋತುವಿನಲ್ಲಿ. ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಜೆಮ್ಷೆಡ್ಪುರ 4-1 ಅಂತರದಲ್ಲಿ ಗೆದ್ದು ದಾಖಲೆ ಬರೆದಿತ್ತು.
11 ಪಂದ್ಯಗಳಲ್ಲಿ 27 ಗೋಲು ಗಳಿಸಿರುವ ಗೋವಾ ತಂಡ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ತಂಡವೆನಿಸಿದೆ. ಪ್ರತಿಯೊಂದು ಪಂದ್ಯದಲ್ಲೂ ತಲಾ 2 ಗೋಲು ಗಳಿಸಿರುವ ಸಾಧನೆ ಗೋವಾ ತಂಡದ ಹೆಸರಿನಲ್ಲಿದೆ. ಜೆಮ್ಷೆಡ್ಪುರ ತಂಡ ಈ ಬಾರಿ ಸೋತಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಆದರೆ ಟಾಟಾ ಪಡೆ ಪೂರ್ಣ ಅಂಕ ಪಡೆಯುವಲ್ಲಿ ವಿಲವಾಗಿದೆ. ಈ ರೀತಿಯ ಲಿತಾಂಶ ತಂಡದ ಮುನ್ನಡೆಯ ಮೇಲೆ ಅಡ್ಡ ಪರಿಣಾಮ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications