ಗ್ರೂಪ್ 'ಬಿ'ಯಲ್ಲಿದ್ದಾರೆ ವಿಶ್ವದ ಅಧಿಕ ಗೋಲ್ ಸರದಾರ ರೊನಾಲ್ಡೋ

ನವದೆಹಲಿ, ಜೂ. 12: ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಸಜ್ಜಾಗಿರುವ 32 ತಂಡಗಳನ್ನು ಎ ಇಂದ ಎಚ್ ವರೆಗೆ 8 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಬಿ ಗ್ರೂಪಿನಲ್ಲಿ ಬಲಿಷ್ಟ ತಂಡಗಳು ಸೆಣಸಾಡಲಿವೆ. ಬಿ ಗ್ರೂಪ್ ನಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳಿರುವುದರಿಂದ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ಬಿ ಗ್ರೂಪಿನಲ್ಲಿ ಪೋರ್ಚುಗಲ್, ಸ್ಪೇನ್, ಮೊರಾಕೋ, ಇರಾನ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಪಂದ್ಯಗಳು ಕ್ರೀಡಾಭಿಮಾನಿಗಳನ್ನು ಆಕರ್ಷಿಸಲಿವೆ. ಪೋರ್ಚುಗಲ್ ನ ರೊನಾಲ್ಡೋ 81 ಗೋಲ್ ಸಾಧನೆಯೊಂದಿಗೆ ವಿಶ್ವದ ಅಧಿಕ ಗೋಲ್ ಸಾಧಕರಲ್ಲಿ ಮೊದಲಿಗರಾಗಿರುವುದರಿಂದ ಬಿ ಗ್ರೂಪ್ ನತ್ತ ಫುಟ್ಬಾಲ್ ಅಭಿಮಾನಿಗಳು ಕುತೂಹಲವನ್ನಿರಿಸಿಕೊಂಡಿರುವುದಕ್ಕೆ ಒಂದು ಕಾರಣವೇ ರೊನಾಲ್ಡೋ.
ಇನ್ನು ಬಿ ಗ್ರೂಪ್ ನಲ್ಲಿರುವ ಎಲ್ಲಾ ನಾಲ್ಕು ತಂಡಗಳೂ ಫೀಫಾ ವಿಶ್ವ ರ್ಯಾಂಕಿಂಗ್ ನಲ್ಲಿ 41ರೊಳಗೆ ಸ್ಥಾನ ಗಿಟ್ಟಿಕೊಂಡವು ಎನ್ನುವುದು ಇನ್ನೊಂದು ವಿಶೇಷ. ಬಿ ಗುಂಪಿನ ತಂಡಗಳ ಫೀಫಾ ರ್ಯಾಂಕಿಂಗ್ ನಲ್ಲಿ ಪೋರ್ಚುಗಲ್ 4, ಸ್ಪೇನ್ 10, ಮೊರಾಕೋ 41 ಮತ್ತು ಇರಾನ್ 37ನೇ ಸ್ಥಾನದಲ್ಲಿದೆ.
ಈ ಗುಂಪಿನಲ್ಲಿ ಮೊದಲ ಪಂದ್ಯ ಜೂನ್ 15ರಂದು ರಾತ್ರಿ 8.30ಕ್ಕೆ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಮೊರಾಕೋ ಮತ್ತು ಇರಾನ್ ನಡುವೆ ನಡೆಯಲಿದೆ. ಇದೇ ದಿನ ರಾತ್ರಿ 11.30ಕ್ಕೆ ಸೋಚಿಯಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ.
ಉಳಿದಂತೆ ಜೂನ್ 20ರಂದು ಪೋರ್ಚುಗಲ್ ಮತ್ತು ಮೊರಾಕೋ, ಇರಾನ್ ಮತ್ತು ಸ್ಪೇನ್, ಜೂನ್ 25ಕ್ಕೆ ಸ್ಪೇನ್ ಮತ್ತು ಮೊರಾಕೋ, ಪೋರ್ಚುಗಲ್ ಮತ್ತು ಇರಾನ್ ತಂಡಗಳು ಪರಸ್ಪರ ಬಲ ಪ್ರದರ್ಶನ ಮಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications