ಹಾಕಿ ವಿಶ್ವಕಪ್ 2018: ಸ್ಪೇನ್ ವಿರುದ್ಧ ಸಮಬಲ ಸಾಧಿಸಿದ ನ್ಯೂಜಿಲ್ಯಾಂಡ್

ಭುವನೇಶ್ವರ್, ಡಿಸೆಂಬರ್ 6: ಭುವನೇಶ್ವರ್ ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 6) ನಡೆದ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ನ್ಯೂಜಿಲ್ಯಾಂಡ್ ಮತ್ತು ಸ್ಪೇನ್ ಮುಖಾಮುಖಿಯಲ್ಲಿ ಎರಡೂ ತಂಡಗಳು 2-2ರ ಸಮಬಲ ಸಾಧಿಸಿವೆ.
ಪೂಲ್ 'ಎ'ಯಲ್ಲಿ ನಡೆದ ಈ ಪಂದ್ಯದ ಮೊದಲಾರ್ಧದಲ್ಲಿ ಸ್ಪೇನ್ ಎರಡು ಗೋಲ್ ಬಾರಿಸಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ನ್ಯೂಜಿಲ್ಯಾಂಡ್ ಎರಡು ಗೋಲ್ ಬಾರಿಸಿ ಅಂತರವನ್ನು ಸರಿದೂಗಿಸಿತು. ಎರಡೂ ತಂಡಗಳು ಉತ್ತಮ ಪೈಪೋಟಿ ನಡೆಸಿದ್ದು ಗಮನ ಸೆಳೆಯಿತು.
ಸ್ಪೇನ್ ಪರ ಆಲ್ಬರ್ಟ್ ಬೆಲ್ಟ್ರಾನ್ ಅವರು 9ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅನಂತರ ಅಲ್ವಾರೊ ಇಗ್ಲೇಷಿಯಸ್ 27ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಆದರೆ ದ್ವಿತೀಯಾರ್ಧದಲ್ಲಿ ನ್ಯೂಜಿಲ್ಯಾಂಡ್‌ನ ಹೇಡನ್ ಫಿಲಿಪ್ಸ್ 50ನೇ ನಿಮಿಷದಲ್ಲಿ, ಕೇನ್ ರಸ್ಸೆಲ್ 56ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫಲಿತಾಂಶ ಹಿಡಿದಿಟ್ಟುಕೊಂಡರು.
Story first published: Thursday, December 6, 2018, 21:11 [IST]
Other articles published on Dec 6, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications