ಕೊಲಂಬಿಯಾ ಕನಸು ನನಸು ಮಾಡಿದ ರೊಡ್ರಿಗೇಜ್
ರಿಯೋ ಡಿ ಜನೈರೊ, ಜೂ.29: ಕೊಲಂಬಿಯಾ ಕ್ರೀಡಾ ಪ್ರೇಮಿಗಳು ಕಂಡ ಬಹುವರ್ಷಗಳ ಕನಸು ನನಸಾಗಿದೆ. ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್‌ನಲ್ಲಿ ನಿನ್ನೆ ನಡೆದ ಕೊಲಂಬಿಯಾ ಹಾಗೂ ಉರುಗ್ವೆ ನಡುವಿನ ಪಂದ್ಯದಲ್ಲಿ ಹೆಚ್ಚಿನ ಪ್ರತಿರೋಧವಿಲ್ಲದೆ ಉರುಗ್ವೆ 0-2 ಅಂತರದಲ್ಲಿ ಸೋಲೊಪ್ಪಿಕೊಂಡಿದೆ. ಕೊಲಂಬಿಯಾದ ಕನಸನ್ನು ರೋಡ್ರಿಗೇಜ್ ನನಸು ಮಾಡಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿ ಖುಷಿ ಕೊಲಂಬಿಯನ್ನರಲ್ಲಿ ಕಂಡು ಬಂದಿದೆ. ಪಂದ್ಯದ ಆರಂಭದಿಂದಲೂ ಛಲದಿಂದ ಹೋರಾಟ ನಡೆಸಿದ ಕೊಲಂಬಿಯಾ ಪರವಾಗಿ ಮಿಂಚಿದ್ದು ಜೇಮ್ಸ್ ರೋಡ್ರಿಗ್ಸ್. ಅದ್ಭುತ ಪ್ರದರ್ಶನದ ಮೂಲಕ ತಂಡವನ್ನು ಯಶಸ್ಸಿನ ಹಾದಿಗೆ ತಂದು ಹೊಸ ಕೀರ್ತಿ ಗಳಿಸಿದರು.
ಒಗ್ಗಟ್ಟು ಹಾಗೂ ಸಮನ್ವಯತೆಯಿಂದ ಕೊಲಂಬಿಯಾ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಮೊದಲಾರ್ಧದ 28ನೇ ನಿಮಿಷದಲ್ಲಿ ಎದೆ ಮಟ್ಟಕ್ಕೆ ಬಂದ ಚೆಂಡನ್ನು ತಡೆದ ರೋಡ್ರಿಗ್ರೇಜ್ ಸುಮಾರು 25 ಯಾರ್ಡ್‌ಗಳ ದೂರದಿಂದಲೇ ಅದ್ಭುತವಾಗಿ ಚೆಂಡನ್ನು ಗೋಲಿನ ಬಲೆಗೆ ಬೀಳುವಂತೆ ಒದ್ದು ಅಚ್ಚರಿ ಮೂಡಿಸಿದರು. ಕೊಲಂಬಿಯಾಗೆ ಮುನ್ನಡೆ ತಂದುಕೊಟ್ಟರು. ಇಟಲಿ ಆಟಗಾರ ಕೆಲ್ಲಿನಿಗೆ ಕಚ್ಚಿದ ಆರೋಪದಿಂದ ನಿಷೇಧಕ್ಕೊಳಗಾಗಿರುವ ಉರುಗ್ವೆಯ ಮುಂಪಡೆ ಆಟಗಾರ ಸ್ವಾರೇಜ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು.[ನಿಷೇಧಿತ ಫುಟ್ಬಾಲ್ ಪಟು ಸ್ವಾರೆಜ್ ಗೆ ಭರ್ಜರಿ ಸ್ವಾಗತ]

ಒರಟಾಟಕ್ಕಿಳಿದ ಉರುಗ್ವೆ ಆಟಗಾರರು
ಗೋಲು ಹೊಡೆದ ನಂತರ ಕುಣಿದಾಡುವ ಕೊಲಂಬಿಯನ್ನರ ಖುಷಿಗೆ ಉರುಗ್ವೆ ಆಟಗಾರರು ಚೆಂಡಿನ ಮೂಲಕ ಉತ್ತರ ನೀಡದೆ ಒರಟಾಟದಲ್ಲಿ ತೊಡಗಿದರು. ಗೋಲು ಬಾರಿಸುವ ತವಕದಲ್ಲಿ ಅಪಾಯಕಾರಿ ಆಟ ಪ್ರದರ್ಶಿಸಿದ್ದಕ್ಕಾಗಿ ತಂಡದ ಮುಂಚೂಣಿ ಆಟಗಾರ ಡಿಯಾಗೋ ಮತ್ತು ಜೋಸ್‌ಗಿಮೆನ್ಸ್‌ಗೆ ರೆಫ್ರಿ ಹಳದಿ ಕಾರ್ಡ್ ತೋರಿ ಎಚ್ಚರಿಕೆ ನೀಡಿದರು.

ದ್ವಿತೀಯಾರ್ಧದಲ್ಲಿ ಪಂದ್ಯದ ರೋಚಕವಾಯ್ತು
ಅಂತಿಮ ಕ್ಷಣಗಳು ಸಮೀಪಿಸುತ್ತಿದ್ದಂತೆ ಪಂದ್ಯದ ರೋಚಕತೆ ಹೆಚ್ಚಿತು. ಉರುಗ್ವೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದ ತಂತ್ರಕ್ಕೆ ತಡೆಯೊಡ್ಡಲು ಕೊಲಂಬಿಯಾ ಡಿಫೆಂಡರ್‌ಗಳು ಸಫಲರಾದರು.

ಫೋರ್ಲಾನ್, ಕವಾನಿ ಮ್ಯಾಜಿಕ್ ನಡೆಯಲಿಲ್ಲ
ಕಳೆದ ವಿಶ್ವಕಪ್ ನಲ್ಲಿ ಚಿನ್ನದ ಬೂಟಿನ ರೇಸಿನಲ್ಲಿದ್ದ ಉರುಗ್ವೆಯ ಫೋರ್ಲಾನ್ ಮ್ಯಾಜಿಕ್ ಈ ಬಾರಿ ನಡೆಯಲಿಲ್ಲ ಹಾಗೂ ಸ್ವಾರೇಜ್ ಇಲ್ಲದೆ ಮುಂಪಡೆ ಅಟಗಾರ ಕವಾನಿ ಕೂಡಾ ಮಂಕಾದರು.

ಕೊಲಂಬಿಯಾ ಸಂಭ್ರಮ ನೋಡಲು ಸೊಗಸು
ವಿಶ್ವಕಪ್ ಇತಿಹಾಸದಲ್ಲಿ ಕರಾಳ ಅಧ್ಯಾಯ ಹೊಂದಿರುವ ಕೊಲಂಬಿಯಾ ಈ ಬಾರಿ ಯುವ ಆಟಗಾರ ರೋಡ್ರಿಗ್ರೇಜ್ ಮೂಲಕ ಹೊಸ ಅಧ್ಯಾಯ ಬರೆಯುತ್ತಿದೆ. ಕೊಲಂಬಿಯಾದ ಡಿಫೆಂಡರ್ ಆಂಡ್ರೆ ಎಸ್ಕೋಬಾರ್ ಓನ್ ಗೋಲ್ ಹೊಡೆದಿದ್ದಕ್ಕಾಗಿ 94ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಬೇಕಾಗಿತ್ತು.

ಉರುಗ್ವೆ ದಾಳಿಗೆ ಡಿಫೆಂಡರ್ಸ್ ಸವಾಲು
ಉರುಗ್ವೆ ಕಡೆಯಿಂದ ಬಂದಂತಹ ಪ್ರಬಲ ದಾಳಿಯನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುವಲ್ಲಿ ಕೊಲಂಬಿಯಾದ ಡಿಫೆಂಡರ್‌ಗಳು ಯಶಸ್ವಿಯಾದರು. ಅಂತಿಮವಾಗಿ ಉರುಗ್ವೆ ಗೋಲು ಬಾರಿಸಲು ವಿಫಲವಾಗಿ ಕೊಲಂಬಿಯಾಗೆ ಶರಣಾಯಿತು. ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಅಮೆರಿಕ ಖಂಡದ ಕೊಲಂಬಿಯಾ ತಂಡವನ್ನು ಅಭಿನಂದಿಸಿದರು.

ಕೊಲಂಬಿಯಾ ಮುಂದಿನ ಗುರಿ ಬ್ರೆಜಿಲ್
ಬ್ರೆಜಿಲ್ ವಿರುದ್ಧ ಜುಲೈ 5 ರಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿರುವ ಕೊಲಂಬಿಯಾ ಭರ್ಜರಿ ತಯಾರಿ ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications