ಮೆಸ್ಸಿ ಮ್ಯಾಚ್ ಗೆದ್ದರೂ, ಮನ ಗೆದ್ದಿದ್ದು ಇರಾನ್
ಬೆಲೋ ಹಾರಿಜಾಂಟೆ(ಬ್ರೆಜಿಲ್), ಜೂ.22: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮ್ಯಾಜಿಕಲ್ ಎಡ ಪಾದದ ಕಿಕ್ ನಿಂದಾಗಿ ಅರ್ಜೆಂಟಿನಾ ಸೋಲಿನ ಅವಮಾನದಿಂದ ಬಚಾವಾಗಿದೆ. ಎಫ್ ಗುಂಪಿನ ಲೀಗ್ ಪಂದ್ಯದಲ್ಲಿ ಅರ್ಜೆಂಟಿನಾ 1-0 ಅಂತರದಲ್ಲಿ ಇರಾನ್ ತಂಡವನ್ನು ಸೋಲಿಸಿತು.ಮೆಸ್ಸಿ ಗೋಲಿನಿಂದ ಅರ್ಜೆಂಟಿನಾ ಪಂದ್ಯ ಗೆದ್ದರೂ, ಪ್ರೇಕ್ಷಕರ ಮನ ಗೆದ್ದಿದ್ದು ಮಾತ್ರ ಇರಾನ್ ತಂಡ. [ಫುಟ್ಬಾಲ್ ಕ್ರೇಜಿ ಫ್ಯಾನ್ಸ್ ಚಿತ್ರಗಳು]
ಪರ್ಷಿಯನ್ ಪಡೆಯ ರಕ್ಷಣಾ ವ್ಯೂಹ ಛೇದಿಸಿ ಮುನ್ನುಗ್ಗಲು ವಿಶ್ವಕಪ್ ಟೂರ್ನಿಯ ಫೇವರೀಟ್ ತಂಡಗಳಲ್ಲಿ ಒಂದೆನಿಸಿರುವ ಅರ್ಜೆಂಟಿನಾದ ವೀರರಿಗೆ ಸಾಧ್ಯವಾಗಲೇ ಇಲ್ಲ. ಪಂದ್ಯದ 90 ನಿಮಿಷಗಳ ಕಾಲ ಕಾಡಿ ಕಂಗೆಡಿಸಿದ ಪರ್ಷಿಯನ್ನರು ಇನ್ನೇನು ಐತಿಹಾಸಿಕ ಡ್ರಾ ಸಾಧಿಸಿಯೇಬಿಟ್ಟರೂ ಎನ್ನುವಷ್ಟರಲ್ಲಿ ಮೆಸ್ಸಿ ಹೊಡೆದ ಕಿಕ್ ಗೋಲ್ ಪೋಸ್ಟ್ ಸೇರಿ ಬಿಟ್ಟಿತು. [ಮೆಸ್ಸಿ ಪಾಪಚ್ಚಿಗೆ ಹಿಂಗ್ ಮಾಡ್ಬಾರ್ದಿತ್ತು]
ಮೆಸ್ಸಿ ಬಿಟ್ಟರೆ ಮತ್ಯಾರೂ ಗೋಲು ಹೊಡೆಯುವ ಸಾಹಸ ಮಾಡಲಿಲ್ಲ. ಹೊಡೆದ ಕಿಕ್ ಎಲ್ಲವನ್ನೂ ಇರಾನ್ ಗೋಲಿ ಅಲಿರೆಜಾ ಹಘಿಘಿ ಅದ್ಭುತವಾಗಿ ತಡೆಗಟ್ಟುತ್ತಿದ್ದರು. ಅರ್ಜೆಂಟಿನಾ ಎರಡು ಗೆಲುವಿನೊಂದಿಗೆ ರೌಂಡ್ 16ಕ್ಕೆ ಎಂಟ್ರಿ ಕೊಟ್ಟಿದೆ. ಆದ್ರೆ, ಬೋಸ್ನಿಯಾ ಹಾಗೂ ಇರಾನ್ ತಂಡದ ಮೇಲೆ ಅರ್ಜೆಂಟಿನಾ ಪ್ರಾಬಲ್ಯ ಮೆರೆಯಲು ಸಂಪೂರ್ಣ ಸೋತಿರುವುದು ಎದ್ದು ಕಾಣುತ್ತಿದೆ.[ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?]
ಅರ್ಜೆಂಟಿನಾ ತನ್ನ ಅಂತಿಮ ಪಂದ್ಯವನ್ನು ಜೂ.24ರಂದು ನೈಜೀರಿಯಾ ವಿರುದ್ಧ ಆಡಲಿದೆ. ಇರಾನ್ ತಂಡ ಬೋಸ್ನಿಯಾ ವಿರುದ್ಧ ಜೂ.25ರಂದು ಆಡಲಿದೆ.

ಪರ್ಷಿಯನ್ ಗೋಡೆಗೆ ಅರ್ಜೆಂಟಿನಾ ತತ್ತರ
ಪರ್ಷಿಯನ್ ಗೋಡೆಗೆ ಅರ್ಜೆಂಟಿನಾ ತತ್ತರಿಸಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರೂ ಇರಾನ್ ಡಿಫೆನ್ಸ್ ದಾಟಲು ಮೆಸ್ಸಿ, ಗೊನ್ಜಾಲೊ ಹಿಗ್ವೆನ್, ಮ್ಯಾಂಚೆಸ್ಟರ್ ಸಿಟಿ ಪರ ಆಡುವ ಸರ್ಗಿಯೋ ಅಗ್ವೆರೋಗೆ ಆಗಲಿಲ್ಲ. ಪಂದ್ಯದಲ್ಲಿ ಶೇಕಡಾ 75ರಷ್ಟು ಹೊತ್ತು ಚೆಂಡಿನ ನಿಯಂತ್ರಣ ಹೊಂದಿದ್ದ ಅರ್ಜೆಂಟಿನಾ ಒಂದೂ ಗೋಲು ಗಳಿಸಲಿಲ್ಲ ಎಂದರೆ ಊಹಿಸಿಕೊಳ್ಳಿ

ಮೆಸ್ಸಿಗೆ ಚೆಂಡು ಸಿಗಲೇ ಇಲ್ಲ
ಇರಾನ್ ಗೋಡೆ ದಾಟಲು ಅರ್ಜೆಂಟಿನಾ ಫಾರ್ವಡ್ ಸಾಧ್ಯವಾಗದ ಕಾರಣ ಸಿಕ್ಕ ಫ್ರೀ ಕಿಕ್ ಗೋಲಾಗಿಸಲು ಯತ್ನ ನಡೆದಿತ್ತು. ಅದರೆ, 32ನೇ ನಿಮಿಷದಲ್ಲಿ ಹೊಡೆದ ಕಿಕ್ ಗೋಲ್ ಪೋಸ್ಟ್ ನಿಂದ ಕೆಲವೇ ಅಡಿಗಳ ಅಂತರದಲ್ಲಿ ಹೊರ ಚಿಮ್ಮಿತ್ತು.

ಇರಾನ್ ರಕ್ಷಣಾ ವ್ಯೂಹದ ತಿಮೋಟಿಯನ್
ಇರಾನ್ ರಕ್ಷಣಾ ವ್ಯೂಹದ ಡಿಫೆನ್ಸ್ ಆಟಗಾರ ಆಂಡ್ರಾನಿಕ್ ತಿಮೋಟಿಯನ್ ಉತ್ತಮ ಆಟ ಪ್ರದರ್ಶಿಸಿ ಮೆಸ್ಸಿಯನ್ನು 'ಡಿ' ಬಾಕ್ಸ್ ನೊಳಗೆ ಬಿಡದಂತೆ ತಡೆದು ಬಿಟ್ಟರು.

ಡಿಯಾಗೋ ಮರಡೋನಾಗೂ ನಿರಾಶೆ
ಅರ್ಜೆಂಟಿನಾ ತಂಡಕ್ಕೆ ಇರಾನ್ ಸುಲಭ ತುತ್ತಾಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅರ್ಜೆಂಟಿನಾದ ಮಾಜಿ ಸ್ಟಾರ್ ಡಿಯಾಗೋ ಮರಡೋನಾ ಅವರು ತಮ್ಮ ಪುತ್ರಿ ಜತೆ ಪಂದ್ಯದ ಮೊದಲರ್ಧ ನೋಡಿ ಬೋರ್ ಆಗಿ ಎದ್ದು ಹೋದರು.

ಇರಾನ್ ದುರಾದೃಷ್ಟ, ಮೆಸ್ಸಿಗೆ ಅದೃಷ್ಟ
ಅರ್ಜೆಂಟಿನಾ ಮೆಸ್ಸಿ ಗೋಲಿನ ಅದೃಷ್ಟದಿಂದ ಗೆಲುವು ಸಾಧಿಸಿರ ಬಹುದು ಆದರೆ, ಇರಾನ್ ತಂಡಕ್ಕೆ ಸಿಗಬೇಕಿದ್ದ ಅರ್ಹ ಪೆನಾಲ್ಟಿಯನ್ನು ರೆಫ್ರಿ ನಿರಾಕರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಪೆನಾಲ್ಟಿಯನ್ನು ಗೋಲಾಗಿಸುತ್ತಿದ್ದರೋ ಇಲ್ಲವೋ ಆದರೆ, ಅರ್ಜೆಂಟಿನಾ ಆಟಗಾರನಿಂದ ಫೌಲ್ ಆಗಿದ್ದು ಕಣ್ಣಿಗೆ ರಾಚುತ್ತಿತ್ತು

ಪಂದ್ಯದ ಅಂಕಿ ಅಂಶ
* ಒಟ್ಟು ಶಾಟ್(ಗುರಿ ಮುಟ್ಟಿದ್ದು): 19(9)ಅರ್ಜೆಂಟಿನಾ vs ಇರಾನ್ 8(4)
* ಫೌಲ್ : ಅರ್ಜೆಂಟಿನಾ 8 vs ಇರಾನ್ 14
* ಕಾರ್ನರ್ಸ್ : ಅರ್ಜೆಂಟಿನಾ 10 vs ಇರಾನ್ 6
* ಚೆಂಡಿನ ಹಿಡಿತ:ಅರ್ಜೆಂಟಿನಾ 70% vs ಇರಾನ್ 30%
* ಆಫ್ ಸೈಡ್:ಅರ್ಜೆಂಟಿನಾ ೦ vs ಇರಾನ್ 1
* ಹಳದಿ ಕಾರ್ಡ್ : ಅರ್ಜೆಂಟಿನಾ ೦ vs ಇರಾನ್ 2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications