ಇಟಲಿಯ ಕೆಲ್ಲಿನಿ ಭುಜ ಕಚ್ಚಿದ ಉರುಗ್ವೆಯ ಸ್ವಾರೇಜ್
ನಟಾಲ್(ಬ್ರೆಜಿಲ್), ಜೂ.25: ಉರುಗ್ವೆಯ ಸ್ಟಾರ್ ಆಟಗಾರ ಲೂಯಿಸ್ ಸ್ವಾರೇಜ್ ಆಟದ ನಡುವೆ ಇಟಲಿಯ ಆಟಗಾರ ಜಾರ್ಜೋ ಕೆಲ್ಲಿನಿ ಭುಜ ಕಚ್ಚಿದ ಘಟನೆ ನಡೆದಿದೆ. ಫೀಫಾ ವಿಶ್ವಕಪ್ ನ ಡಿ ಗುಂಪಿನ ಕೊನೆ ಲೀಗ್ ಪಂದ್ಯದಲ್ಲಿ ಉರುಗ್ವೆ ತಂಡ ಇಟಲಿಯನ್ನು ಚೆಚ್ಚಿ ಹೊರಗಟ್ಟಿದ ನಡುವೆಯೇ ಸ್ವಾರೇಜ್ ಕಚ್ಚಿದ ಪ್ರಸಂಗ ಸುದ್ದಿಯಲ್ಲಿದೆ.
ಮಂಗಳವಾರ ಅರೇನಾ ದಾಸ್ ಡುನಾಸ್ ನಲ್ಲಿ ಸುಮಾರು 39,706 ಫುಟ್ಬಾಲ್ ಪ್ರೇಮಿಗಳ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಸೋಲಿನ ಕಹಿ ಜತೆಗೆ ಕಚ್ಚಿಸಿಕೊಂಡ ನೋವಿನೊಂದಿಗೆ ಕೆಲ್ಲಿನಿ ಮನೆ ಕಡೆ ತೆರಳಿದ್ದಾರೆ. ಸ್ವರೇಜ್ ನಡೆದುಕೊಂಡ ರೀತಿ ಕಂಡು ಇತರೆ ಆಟಗಾರರು ದಿಗ್ಭ್ರಮೆ ವ್ಯಕ್ತಪಡಿಸಿದರೆ, ಮೆಕ್ಸಿಕೋ ರೆಫ್ರಿ ಮಾರ್ಕೊ ರೊಡ್ರಿಗ್ರೇಜ್ ಅವರು ತಕ್ಷಣಕ್ಕೆ ಈ ಕೃತ್ಯ ಗಮನಿಸದೇ ಹೋಗಿದ್ದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಸದ್ಯಕ್ಕೆ ಘಟನೆ ಬಗ್ಗೆ ಫೀಫಾ ತನ್ನ ತನಿಖೆ ಆರಂಭಿಸಿದೆ. ಸ್ವಾರೇಜ್ ಮೇಲೆ 24 ಪಂದ್ಯಗಳ ನಿಷೇಧ ಹೇರಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದೆ. ಬ್ಯೂಟಿಫುಲ್ ಗೇಮ್ ನಲ್ಲಿ ಪೆಪೆ ಡಿಚ್ಚಿ ಪ್ರಕರಣದ ನಂತರ ಸ್ವಾರೇಜ್ ಕಚ್ಚಾಟ ಕಪ್ಪು ಚುಕ್ಕೆಯಾಗಿದೆ. ಈ ಹಿಂದೆ ಕೂಡಾ ಇದೇ ರೀತಿ ಪ್ರಕರಣಗಳಲ್ಲಿ ಸ್ವಾರೇಜ್ ಸಿಕ್ಕಿಬಿದ್ದಿದ್ದರು.[ದೇವರ 'ಕೈ'ವಾಡದಿಂದ ಸೆಮೀಸ್ ಗೆ ಉರುಗ್ವೆ]

ಉರುಗ್ವೆ ತಂಡ 16ರ ಹಂತಕ್ಕೇರಿತು
ಫೀಫಾ ವಿಶ್ವಕಪ್ ನ ಡಿ ಗುಂಪಿನ ಕೊನೆ ಲೀಗ್ ಪಂದ್ಯದಲ್ಲಿ ಉರುಗ್ವೆ ತಂಡ ಇಟಲಿಯನ್ನು 1-0 ಅಂತರದಿಂದ ಸೋಲಿಸಿ ಟೂರ್ನಿಯಿಂದ ಹೊರಗಟ್ಟಿದೆ. ಇಟಲಿಯ ಆಂಡ್ರೆ ಪಿರ್ಲೋಗೆ ಇದು ಕೊನೆ ಪಂದ್ಯವಾಗಿತ್ತು.

ರೆಫ್ರಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆಯೆ?
ಕೆಲ್ಲಿನಿ ಭುಜ ಕಚ್ಚಿದ ಸ್ವಾರೇಜ್ ಗೆ ತಕ್ಷಣವೇ ರೆಡ್ ಕಾರ್ಡ್ ನೀಡಬೇಕಿದ್ದ ರೆಫ್ರಿ, ಘಟನೆಯನ್ನು ವೀಕ್ಷಿಸದಿದ್ದದ್ದಕ್ಕೆ ಸ್ವಾರೇಜ್ ಏನು ಥ್ಯಾಂಕ್ಸ್ ಹೇಳುತ್ತಿದ್ದಾರಾ?

ಈ ಬಾರಿ ವಿಶ್ವಕಪ್ ನ ಕಪ್ಪುಚುಕ್ಕೆ
ಜರ್ಮನಿಯ ಥಾಮಸ್ ಮುಲ್ಲರ್ ಗೆ ಪೆಪೆ ಡಿಚ್ಚಿ ಕೊಟ್ಟ ಪ್ರಕರಣ ನಂತರ ಉರುಗ್ವೆಯ ಲೂಯಿಸ್ ಸ್ವಾರೇಜ್ ಅವರು ಗಿರ್ಯಾಗಿಯೋ ಕೆಲ್ಲಿನಿ ಭುಜ ಕಚ್ಚಿದ್ದು ಈ ಬಾರಿ ಫೀಫಾ ವಿಶ್ವಕಪ್ ನ ಕಪ್ಪುಚುಕ್ಕೆಯಾಗಿ ಉಳಿಯಲಿದೆ.

ರೆಫ್ರಿ ನೋಡ್ರಿ ಇಲ್ಲಿ ಹಲ್ಲಿನ ಗುರುತು
ರೆಫ್ರಿ ನೋಡ್ರಿ ಇಲ್ಲಿ ಹಲ್ಲಿನ ಗುರುತು ಎಂದು ಭುಜ ತೋರಿಸುತ್ತಿರುವ ಕೆಲ್ಲಿನಿ

ಥೂ ನನ್ನ ಹಲ್ಲಿಗೆ ಪೆಟ್ಟಾಯ್ತು ಎನ್ನುತ್ತಿದ್ದಾರೆಯೇ?
ನೆಲದಿಂದ ಇಬ್ಬರು ಆಟಗಾರರು ಹಾರಿದ್ದಾರೆ. ಈ ಸಂದರ್ಭದಲ್ಲಿ ಕೆಲ್ಲಿನಿ ಹಿಂದೆ ಇದ್ದ ಸ್ವಾರೇಜ್ ಭುಜ ಕಚ್ಚಿದ್ದಾರೆ. ಚೆಂಡು ಸಿಗಲಿಲ್ಲ ಎಂಬ ಕೋಪದಿಂದ ಕಚ್ಚಿದರೆ? ಗೊತ್ತಿಲ್ಲ. ಆದರೆ, ಕಚ್ಚಿದ ನಂತರ ನೆಲದ ಮೇಲೆ ಬಿದ್ದು ಹಲ್ಲು ಹಿಡಿದುಕೊಂಡಿದ್ದು ಹೀಗೆ

ಗಡಿಬಿಡಿ ನಡುವೆ ಗೋಲು ಗಳಿಸಿದ ಉರುಗ್ವೆ
ಪಂದ್ಯದ 81ನೇ ನಿಮಿಷದಲ್ಲಿ ಗಸ್ತಾನ್ ರಾಮಿರೇಜ್ ಹೊಡೆದ ಕಾರ್ನರ್ ಕಿಕ್ ಅನ್ನು ಉರುಗ್ವೆಯ ಡಿಯಾಗೋ ಗಾಡಿನ್ ಅವರು ಹೆಡ್ ಮಾಡಿ(ಬೆನ್ನಿನ ಭಾಗಕ್ಕೆ ತಾಗಿದ್ದು ನಂತರ ರೀಪ್ಲೆಯಲ್ಲಿ ಗೊತ್ತಾಯಿತು) ಗೋಲು ಗಳಿಸಿ ನೆಗೆದಿದ್ದು ಹೀಗೆ

ಇಟಲಿ ಆಟಗಾರರ ಜತೆ ಸ್ವಾರೇಜ್ ಮಾತುಕತೆ
ಇಟಲಿ ಆಟಗಾರರ ಜತೆ ಸ್ವಾರೇಜ್ ಮಾತು ಕತೆ ನಡೆಸಿ ಸಮಜಾಯಿಸಿ ನೀಡುತ್ತಿದ್ದಾರೆ. ಇಟಲಿ ಸ್ಟ್ರೈಕರ್ ಪಿರ್ಲೋ ಗಮನಿಸುತ್ತಿದ್ದಾರೆ.

ರೆಡ್ ಕಾರ್ಡ್ ಪಡೆದ ಮಾರ್ಚಿಸಿಯೋ
ಪಂದ್ಯದಲ್ಲಿ ಇನ್ನೊಂದು ಸ್ವಾರಸ್ಯಕರ ಘಟನೆ ನಡೆಯಿತು. ಫೌಲ್ ಮಾಡದೆ ತಪ್ಪಿಲ್ಲದೆ ರೆಡ್ ಕಾರ್ಡ್ ಪಡೆದ ಇಟಲಿಯ ಮಾರ್ಚಿಸಿಯೋ ಶಾಕಿಂಗ್ ನೋಟ

ಇಟಲಿಯ ಅಟಗಾರರು vs ರೆಫ್ರಿ ರೊಡ್ರಿಗೇಜ್
ಇಟಲಿಯ ಅಟಗಾರರು vs ರೆಫ್ರಿ ರೊಡ್ರಿಗೇಜ್ ನಡುವೆ ವಾಕ್ಸಮರ ನಡೆದಿದ್ದು ಹೀಗೆ. ಪಿರ್ಲೊ, ಕ್ಲಾಡಿಯೋ ಮಾರ್ಚಿಸಿಯೋ, ಕೆಲ್ಲಿನಿ,

ಫೌಲ್ ಮಾಡಿದ ಸ್ವಾರೇಜ್
ಇಟಲಿಯ ಆಂಡ್ರಿಯಾ ಬರ್ಜಗ್ಲಿ ಹಾಗೂ ಉರುಗ್ವೆಯ ಲೂಯಿಸ್ ಸೂರೆಜ್

ಕೆಲ್ಲಿನಿ ಭುಜ ಕಚ್ಚಿದ ಉರುಗ್ವೆಯ ಸ್ವಾರೇಜ್
ಕೆಳಗೆ ಬಿದ್ದ ಲೂಯಿಸ್ ಸ್ವಾರೇಜ್(9) ನೋಡುತ್ತಿರುವ ಇಟಲಿ ಆಂಡ್ರಿಯಾ ಬರ್ಜಗ್ಲಿ(15)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications