Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Football: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸೆಮಿಫೈನಲ್‌ಗೆ ಪ್ರವೇಶ

ಭಾರತದ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಭಾರತ ಎಸ್‌ಎಎಫ್‌ಎಫ್‌ ಅಂಡರ್‌ 20 ಫುಟ್ಬಾಲ್‌ ಟೂರ್ನಿಯಲ್ಲಿ 3-0 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಈ ಗೆಲುವು ಭಾರತವನ್ನು ಸೆಮಿಫೈನಲ್‌ಗೆ ತಲುಪುವಂತೆ ಮಾಡಿದೆ. ಪಾಕಿಸ್ತಾನ ಈ ಟೂರ್ನಿಯಿಂದ ಪಂದ್ಯಾವಳಿಯಿಂದ ಹೊರಬಿದ್ದಿತು. ಇದೇ ಟೂರ್ನಿಯಲ್ಲಿ ಪಾಕಿಸ್ತಾನ ಮಾರ್ಚ್ 24 ರಂದು ಬಾಂಗ್ಲಾ ವಿರುದ್ಧ 2-0 ಯಿಂದ ಸೋಲು ಅನುಭವಿಸಿತ್ತು.

ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿರುವ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಭಾರತ ತಂಡ ಅಮೋಘ ಪ್ರದರ್ಶನ ನೀಡಿತು. ಮೊದಲ ನಿಮಿಷದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಭಾರತ ತಂಡ ಈ ಅವಧಿಯ ಆರಂಭದಲ್ಲಿ ಅಬ್ಬರಿಸಿತು. ಆರಂಭದ ಮೂರು ನಿಮಿಷದಲ್ಲಿ ಭಾರತದ ಪರ ವಿಶಾಲ್‌ ವದಾವ್ ಅವರು ಸೊಗಸಾದ ಕಾಲ್ಚಳಕ ಪ್ರದರ್ಶಿಸಿ ತಂಡಕ್ಕೆ ಮುನ್ನಡೆ ನೀಡುವಲ್ಲಿ ಸಫಲರಾದರು. ಭಾರತ 1-0 ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪಾಕಿಸ್ತಾನ ಗೋಲು ಬಾರಿಸುವ ಆಸೆಯನ್ನು ಹೊಂದಿತ್ತು. ಆದರೆ ಫಲಿಸಲಿಲ್ಲ. ಈ ಅವಧಿಯಲ್ಲಿ ಭಾರತದ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು. ಪರಿಣಾಮ ಭಾರತ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು.

India Crush Pakistan

ಎರಡನೇ ಅವಧಿಯಲ್ಲೂ ಭಾರತ ಸ್ಥಿರ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಭಾರತದ ಫಾರ್ವಡ್ ಆಟಗಾರ ಓಮಂಗ್ ದೊಡಮ್‌ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು. ಪಂದ್ಯದ 64ನೇ ನಿಮಿಷದಲ್ಲಿ ಇವರು ಸೊಗಸಾದ ಕಾಲ್ಚಳಕ ಪ್ರದರ್ಶಿಸಿ, ಎದುರಾಳಿ ಗೋಲಿಯನ್ನು ವಂಚಿಸುವಲ್ಲಿ ಸಫಲರಾದರು. ಪಾಕ್‌ ತಂಡದ ಗೋಲು ಬಾರಿಸುವ ಆಸೆಗೆ ದೊಡ್ಡ ಪೆಟ್ಟು ಬಿದ್ದಿತು. ಪರಿಣಾಮ ಭಾರತ 2-0 ಯಿಂದ ಮುನ್ನಡೆ ಸಾಧಿಸಿತು.

ಓಮಂಗ್ ಆರ್ಭಟ

ಪಾಕಿಸ್ತಾನ ತಂಡದಲ್ಲಿ ಹಲವು ತಪ್ಪುಗಳನ್ನು ಮಾಡುತ್ತಲೇ ಸಾಗಿತು. ಪರಿಣಾಮ ಭಾರತಕ್ಕೆ 88ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಲಭಿಸಿತು. ಓಮಂಗ್ ದೊಡಮ್ ಈ ಅದ್ಭುತ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಭಾರತದ ಗೋಲಿನ ಅಂತರ 3-0ಗೆ ಏರಿತು. ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲಬಹುದು ಎಂಬ ಆಸೆ ಕ್ಷೀಣಿಸುತ್ತಾ ಸಾಗಿತು. ಈ ಪಂದ್ಯದ ಕೊನೆಯ ವರೆಗೂ ಪಾಕ್‌ ಗೋಲು ಬಾರಿಸುವಲ್ಲಿ ವಿಫಲವಾಗಿ ಪಂದ್ಯವನ್ನು ಕೈ ಚೆಲ್ಲಿತು. ಅಲ್ಲದೆ ಟೂರ್ನಿಗೆ ಗುಡ್‌ ಬೈ ಹೇಳಿತು.

ಭಾರತ ಈ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ಲೀಗ್‌ ಹಂತದ ಎರಡನೇ ಪಂದ್ಯ ಮಾರ್ಚ್‌ 28 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಪಾಕ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.

Story first published: Thursday, March 26, 2026, 23:49 [IST]
Other articles published on Mar 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+