Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ː ಭಾರತದಿಂದ 21 ವರ್ಷಗಳಲ್ಲಿ ಕಾಣದಂಥ ಸಾಧನೆ

ಬೆಂಗಳೂರು, ಜುಲೈ 06: ಕಳೆದ 21 ವರ್ಷಗಳಲ್ಲೇ ಕಾಣದಂಥ ಸಾಧನೆಯನ್ನು ಭಾರತೀಯ ಫುಟ್ಬಾಲ್ ತಂಡ ಇದೀಗ ದಾಖಲಿಸಿದೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ 96ನೇ ಸ್ಥಾನಕ್ಕೇರಿದೆ.

1996ರಲ್ಲಿ 94ನೇ ಸ್ಥಾನ ಗಳಿಸಿದ್ದು, ಇದುವರೆಗಿನ ಅತ್ಯುತ್ತಮ ಶ್ರೇಯಾಂಕ ಎನಿಸಿಕೊಂಡಿದೆ. ಹೀಗಾಗಿ, ಕಳೆದ ಎರಡು ದಶಕಗಳಲ್ಲಿ ತಂಡ ಹೊಂದಿದ ಅತ್ಯುತ್ತಮ ಶ್ರೇಯಾಂಕ ಎನಿಸಿದೆ.

India rise 4 places to reach second highest FIFA rank ever


ಇತ್ತೀಚೆಗೆ ತಾನಾಡಿದ 15 ಪಂದ್ಯಗಳ ಪೈಕಿ 13ರಲ್ಲಿ ಭಾರತ ಜಯ ಸಾಧಿಸಿರುವುದು ಶ್ರೇಯಾಂಕ ಪಟ್ಟಿಯಲ್ಲಿ ಜಿಗಿತಕ್ಕೆ ಕಾರಣವಾಗಿದೆ. ಏಷ್ಯಾ ತಂಡಗಳಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ತಂಡಗಳ ಪೈಕಿ ಭಾರತ 12ನೇ ಸ್ಥಾನ ಗಳಿಸಿದೆ. ಸದ್ಯ ಫಿಫಾ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿರುವ ಇರಾನ್‌, ಏಷ್ಯಾದ ಟಾಪ್ ಸ್ಥಾನ ಗಳಿಸಿದೆ.

ಎರಡು ವರ್ಷಗಳ ಹಿಂದೆ 173 ಸ್ಥಾನದಲ್ಲಿದ್ದ ಭಾರತ ಈಗ ಅತ್ಯುತ್ತಮ ಸ್ಥಾನವನ್ನು ತಲುಪಿದೆ. ಇದು ಭಾರತೀಯ ಫುಟ್‌ಬಾಲ್‌ನ ಸತ್ವವನ್ನು ಸಾರುತ್ತದೆ. ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರು, ಸಿಬ್ಬಂದಿ, ಕೋಚ್‌ ಹಾಗೂ ಒಕ್ಕೂಟಕ್ಕೆ ಅಭಿನಂದನೆಗಳು' ಎಂದು ಎಂದು ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹರ್ಷವ್ಯಕ್ತಪಡಿಸಿದ್ದಾರೆ.

2015ರ ಫೆಬ್ರುವರಿಯಲ್ಲಿ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅವರು ತಂಡದ ಕೋಚ್‌ ಹುದ್ದೆಗೆ ನೇಮಕವಾದಾಗ 171ನೇ ಸ್ಥಾನದಲ್ಲಿತ್ತು.

ಟಾಪ್ 10 ತಂಡಗಳು:

1. ಜರ್ಮನಿ
2. ಬ್ರೆಜಿಲ್
3. ಅರ್ಜೆಂಟೀನಾ
4. ಪೋರ್ಚುಗಲ್
5. ಸ್ವಿಟ್ಜರ್ಲೆಂಡ್
6. ಪೋಲೆಂಡ್
7. ಚಿಲಿ
8. ಕೊಲಂಬಿಯಾ
9. ಫ್ರಾನ್ಸ್
10. ಬೆಲ್ಜಿಯಂ

96. ಭಾರತ(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+