Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಚೀನಾ ಕುತೂಹಲಕಾರಿ ಸೌಹಾರ್ದ ಫುಟ್ಬಾಲ್ ಪಂದ್ಯ ಸಮಬಲ

India vs China Live Score, Football Match

ಸುಝೌ, ಅಕ್ಟೋಬರ್ 13: ಚೀನಾದ ಸುಝೌ ಒಲಿಂಪಿಕ್ ಕ್ರೀಡಾ ಕೇಂದ್ರ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್ 13) ಸೌಹಾರ್ದ ಫುಟ್ಬಾಲ್ ಪಂದ್ಯಕ್ಕಾಗಿ ಭಾರತ ಮತ್ತು ಚೀನಾ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯ 0-0ಯ ಸಮಬಲ ದೊಂದಿಗೆ ಅಂತ್ಯಗೊಂಡಿದೆ.

ಸುಮಾರು 21 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚೀನಾ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯ ಆಯೋಜಿಸಿತ್ತು. ಇಂದಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಮೊದಲಾರ್ಧ ಮುಕ್ತಾಯದ ವೇಳೆಯೂ ಇತ್ತಂಡಗಳ ಅಂಕ 0-0ಯಲ್ಲಿತ್ತು. ದ್ವಿತೀಯಾರ್ಧದ ಬಳಿಕ ಹೆಚ್ಚುವರಿ (90+6) ನಿಮಿಷಗಳನ್ನು ಸೇರಿಸಲಾಯಿತಾದರೂ ಅಂಕ 0-0ಯಿಂದ ಬದಲಾಗಲಿಲ್ಲ.

ಪ್ರಮುಖಾಕರ್ಷಣೆಯಾಗಿ ಭಾರತದ ಫುಟ್ಬಾಲ್ ಹೆಮ್ಮೆ ಸುನಿಲ್ ಛೆಟ್ರಿ ಅವರು ಮೂಲಕ ಮೊದಲಾರ್ಧದಲ್ಲಿ ಭಾರತಕ್ಕೆ ಸಿಗಲಿದ್ದ ಮುನ್ನಡೆಯ ಗೋಲ್ ಸ್ವಲ್ಪದರಲ್ಲಿ ತಪ್ಪಿತ್ತು. ಪಂದ್ಯವನ್ನು ಗೆದ್ದುಕೊಳ್ಳವ ನೆಲೆಯಲ್ಲಿ ಭಾರತ ಆಟವಾಡಿತಾದರೂ ಅತ್ತ ಚೀನಾ ಕೂಡ ಉತ್ತಮ ಪೈಪೋಟಿ ನೀಡಿದ್ದರಿಂದ ಎರಡೂ ತಂಡಗಳಿಂದ ಗೋಲ್ ದಾಖಲಾಗಲಿಲ್ಲ.

ಭಾರತ ತಂಡ: ಗುರ್ಪ್ರೀತ್ ಸಿಂಗ್ (ಜಿಕೆ), ನಾರಾಯಣ್ ದಾಸ್, ಸುಭಾಶಿಶ್ ಬೋಸ್, ಸಂದೇಶ್ ಜಿಂಗ್ಯಾನ್ (ಸಿ), ಪ್ರೀತಮ್ ಕೊಟಾಲ್, ಹಾಲಿಚರನ್ ನರ್ಜಾರಿ, ಅನಿರುದ್ಧ್ ಥಾಪಾ, ಪ್ರಣಯ್ ಹಾಲ್ಡರ್, ಉದಂಟ ಸಿಂಗ್, ಸುನಿಲ್ ಛೆಟ್ರಿ, ಜೆಜೆ ಲಾಲ್ಪೆಕ್ಲುವಾ.

Story first published: Saturday, October 13, 2018, 19:16 [IST]
Other articles published on Oct 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+