For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

SAFF Championship: ಭಾರತ vs ಕುವೈಟ್ ಫೈನಲ್ ಸೆಣೆಸಾಟ: ಪಂದ್ಯದ ಸಮಯ, ನೇರಪ್ರಸಾರ ಹಾಗೂ ಇತರ ಮಾಹಿತಿ

ಇಂದು(ಜೂನ್ 4) SAFF ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್ ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತ ಹಾಗೂ ಕುವೈಟ್ ತಂಡಗಳು ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗುತ್ತಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಫುಟ್ಬಾಲ್ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ 9ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದಂತಾಗುತ್ತದೆ.

ಕಳೆದ ವಾರ ಗ್ರೂಫ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ 1-1 ಅಂತರದಿಂದ ಪಂದ್ಯ ಡ್ರಾಗೊಂಡಿತ್ತು. ಆದರೆ ಆ ಪಂದ್ಯ ಆಟದ ಗುಣಮಟ್ಟಕ್ಕಿಂತಲೂ ಎರಡು ತಂಡಗಳ ಆಟಗಾರರ ನಡುವಿನ ಘಟರ್ಣೆಯ ಕಾರಣಕ್ಕೆ ಸುದ್ದಿಯಾಗಿದ್ದು ವಿಪರ್ಯಾಸ. ಇದೀಗ ಫೈನಲ್ ಪಂದ್ಯದಲ್ಲಿ ಅದೇ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಪೈಪೊಟಿಯ ಕದನವನ್ನು ನಿರೀಕ್ಷಿಸಲಾಗುತ್ತಿದೆ.

India Vs Kuwait SAFF Championship 2023 Final: When, Where to Watch, Live Streaming

ಭಾರತ ಹಾಗೂ ಕುವೈಟ್ ತಂಡಗಳು ಈವರೆಗೆ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದೆ. ಈ ಪೈಕಿ ಭಾರತ ಒಂದು ಬಾರಿ ಗೆಲುವು ಸಾಧಿಸಿದರೆ ಕುವೈಟ್ ಎರಡು ಬಾರಿ ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಇನ್ನು ಈ ಎರಡು ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ ಭಾರತ ತಂಡ 6 ಗೋಲು ಬಾರಿಸಿದ್ದರೆ ಕುವೈಟ್ 18 ಗೋಲುಗಳನ್ನು ಬಾರಿಸಿದೆ. ಇನ್ನು ವಿಶ್ವ ಫುಟ್ಬಾಲ್ ಶ್ರೇಯಾಂಕಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿದ್ದರೆ ಕುವೈಟ್ ಪ್ರಸ್ತುತ 141ನೇ ಸ್ಥಾನದಲ್ಲಿದೆ.

ಇತ್ತಂಡಗಳ ಕೀ ಪ್ಲೇಯರ್ಸ್:

ಭಾರತ: ಸುನಿಲ್ ಛೆಟ್ರಿ, ಗುರ್‌ಪ್ರೀತ್‌ ಸಿಂಗ್ ಸಂಧು, ಮಹೇಶ್ ಸಿಂಗ್
ಕುವೈಟ್: ಶಬೈಬ್ ಅಲ್ ಖಲ್ದಿ, ಖಾಲಿದ್ ಹಜಿಯಾ, ಅಬ್ದುಲ್ಲಾ ಅಲ್ ಬ್ಲೌಶಿ

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ಕುವೈಟ್ ತಂಡಗಳ ನಡುವಿನ SAFF ಟೂರ್ನಿಯ ಫೈನಲ್ ಪಂದ್ಯದ ಜುಲೈ 4ರಂದು ಸಂಜೆ 7:30ಕ್ಕೆ ಆರಂಭವಾಗಲಿದ್ದು ಬೆಂಗಳೂರಿನ ಕಂಠೀರನ ಕ್ರೀಡಾಂಗಣ ಈ ಪಂದ್ಯದ ಆತಿಥ್ಯವಹಿಸಲಿದೆ. ಇನ್ನು ಈ ಪಂದ್ಯವನ್ನು ಫ್ಯಾನ್‌ಕೋಡ್‌ ಚಂದಾದಾರರಾಗಿದ್ದಲ್ಲಿ ಲೈವ್‌ಸ್ಟ್ರೀಮಿಂಗ್‌ನಲ್ಲಿ ವೀಕ್ಷಿಸುವ ಅವಕಾಶವಿದೆ. ಇನ್ನು ಡಿಡಿ ಸ್ಪೋರ್ಟ್ಸ್ ಕೂಡ ಈ ಪಂದ್ಯದ ನೇರಪ್ರಸಾರವನ್ನು ಮಾಡಲಿದೆ.

ಭಾರತ vs ಕುವೈಟ್ ಫೈನಲ್ ಪಂದ್ಯ, ಇತ್ತಂಡಗಳ ಸಂಭಾವ್ಯ ಪ್ರಾಥಮಿಕ ಪ್ಲೇಯಿಂಗ್ XI

ಭಾರತ: ಅಮರಿಂದರ್ ಸಿಂಗ್, ಅನ್ವರ್ ಅಲಿ, ಸಂದೇಶ್ ಜಿಂಗನ್, ನಿಖಿಲ್ ಪೂಜಾರಿ, ಆಕಾಶ್ ಮಿಶ್ರಾ, ಆಶಿಕ್ ಕುರುನಿಯನ್, ಅನಿರುದ್ಧ್ ಥಾಪಾ, ಜೀಕ್ಸನ್ ಸಿಂಗ್, ಸುನಿಲ್ ಛೆಟ್ರಿ, ಲಾಲಿಯನ್ಜುವಾಲಾ ಚಾಂಗ್ಟೆ, ನವೋರೆಮ್ ಮಹೇಶ್ ಸಿಂಗ್

ಕುವೈತ್: ಅಬ್ದುಲ್ರಹ್ಮಾನ್ ಕಮೀಲ್, ಹಮದ್ ಅಲ್-ಹರ್ಬಿ, ಅಬ್ದುಲ್ಲಾ ಅಲ್-ಫಹಾದ್, ಹಮದ್ ಅಲ್-ಕಲ್ಲಾಫ್, ಹಸನ್ ಹಮ್ದಾನ್ ಅಲ್-ಅನೆಜಿ, ರೆಧಾ ಹನಿ ಅಬು ಜಬಾರಾ, ಫವಾಜ್ ಸುಲ್ತಾನ್ ಅಲ್-ಎನೆಜಿ, ಅಹ್ಮದ್ ಅಲ್-ಧೆಫಿರಿ, ಮೊಹಮ್ಮದ್ ಅಬ್ದುಲ್ಲಾ ದಹಮ್, ಶಬೈಬ್ ಅಲ್-ಖಾಲ್ದಿ, ಈದ್ ಅಲ್-ರಶೀದಿ

Story first published: Tuesday, July 4, 2023, 16:21 [IST]
Other articles published on Jul 4, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+