For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

SAFF ಚಾಂಪಿಯನ್ ಭಾರತ: 14 ಆವೃತ್ತಿಯಲ್ಲಿ 9 ಬಾರಿ ಭಾರತಕ್ಕೆ ಕಿರೀಟ; ಎಲ್ಲಾ ಆವೃತ್ತಿಗಳ ಚಾಂಪಿಯನ್ನರ ಮಾಹಿತಿ

2013ನೇ ಆವೃತ್ತಿಯ SAFF ಚಾಂಪಿಯನ್ ಪಟ್ಟ ಭಾರತದ ಮುಡಿಗೇರಿದೆ. ಈ ಮೂಲಕ ಏಷ್ಯಾದ ಈ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 9ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಈ ಬಾರಿಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕುವೈಟ್ ವಿರುದ್ಧ ಸೆಣೆಸಾಡಿದ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಭಾರತ ಫುಟ್ಬಾಲ್ ತಂಡ ಮುಂದುವರಿಸಿದೆ.

1993ರ ಬಳಿಕ ಈ ಟೂರ್ನಿಯ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು ಆರಂಭದಲ್ಲಿ ಸಾರ್ಕ್ ಗೋಲ್ಡ್ ಕಪ್(SAARC Gold Cup) ಎಂದು ಕರೆಯಲಾಗುತ್ತಿದ್ದ ಈ ಪಂದ್ಯಾವಳಿಯನ್ನು ನಂತರ SAFF ಚಾಂಪಿಯನ್‌ಶಿಪ್ ಎಂದು ಬದಲಾಯಿಸಲಾಗಿದೆ. ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್‌ನ ತಂಡಗಳ ನಡುವಿನ ಕದನ ಇದಾಗಿದೆ. ಆರಂಭದಲ್ಲಿ ಇದು ಕೇವಲ ನಾಲ್ಕು ತಂಡಗಳ ಸ್ಪರ್ಧೆಯಾಗಿದ್ದು ನಂತರ 8 ತಂಡಗಳ ಕದನವಾಗಿ ಮಾರ್ಪಟ್ಟಿದೆ.

India won SAFF Championship 9th time: Complete list of winners from 1993-2023

ಇನ್ನು ಈ ಬಾರಿಯ ಟೂರ್ನಿಯಲ್ಲಿ ಕುವೈಟ್ ಹಾಗೂ ಲೆಬನಾನ್ ತಂಡಗಳು SAFF ಸದಸ್ಯ ರಾಷ್ಟ್ರಗಳು ಅಲ್ಲದಿದ್ದರೂ ಶ್ರೀಲಂಕಾ ತಂಡ FIFA ದಿಂದ ನಿಷೇಧಕ್ಕೆ ಒಳಗಾಗಿರುವ ಕಾರಣ ಟೂರ್ನಿಯ ಪೈಪೋಟಿ ಹೆಚ್ಚಿಸುವ ಸಲುವಾಗಿ ಈ ತಂಡಗಳಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ಈ ಎರಡು ತಂಡಗಳು ಇದೇ ಮೊದಲ ಬಾರಿಗೆ SAFF ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದೆ.

ಭಾರತವೇ ಯಶಸ್ವಿ ತಂಡ
ಇನ್ನು ಈ SAFF ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎಂದರೆ ಅದು ಭಾರತ. ಈ ಟೂರ್ನಿಯಲ್ಲಿ ಭಾರತ 9 ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದರೆ 4 ಸಂದರ್ಭಗಳಲ್ಲಿ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಅಂದರೆ ಈವರೆಗೆ ಆಡಿರುವ 14 ಆವೃತ್ತಿಗಳಲ್ಲಿ ಭಾರತ 13 ಬಾರಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಇನ್ನು ಭಾರತದ ಬಳಿಕ ಎರಡನೇ ಅತ್ಯಂತ ಯಶಸ್ವಿ ತಂಡವೆಂದರೆ ಅದು ಮಾಲ್ಡೀವ್ಸ್. ಅದು ಐದು ಬಾರಿ ಫೈನಲ್‌ಗೆ ಪ್ರವೇಶ ಪಡೆದುಕೊಂಡು ಎರಡು ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಉಳಿದಂತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಯಾವ ರಾಷ್ಟ್ರಗಳು ಯಾವ ಆವೃತ್ತಿಯಲ್ಲಿ ಚಾಂಪಿಯನ್ಸ್?

ಭಾರತ 1993, 1997, 1999, 2005, 2009, 2011, 2015, 2021, ಹಾಗೂ 2023ರ SAFF ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದು 9 ಬಾರಿ ಈ ಸಾಧನೆ ಮಾಡಿದೆ. ಇನ್ನು ಮಾಲ್ಡೀವ್ಸ್ 2008 ಮತ್ತು 2018 ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬಾಂಗ್ಲಾದೇಶ 2003ರಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದರೆ 2013ರಲ್ಲಿ ಒಮ್ಮೆ ಅಫ್ಘಾನಿಸ್ತಾನ ಈ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಇನ್ನು ಶ್ರೀಲಂಕಾ 1995ರಲ್ಲಿ ಚಾಂಪಿಯನ್ ಆಗಿದೆ. SAFF ಸದಸ್ಯ ರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ ಮತ್ತು ಭೂತಾನ್ ಒಮ್ಮೆಯೂ ಈ ಪ್ರಶಸ್ತಿ ಗೆದ್ದಿಲ್ಲ.

Story first published: Wednesday, July 5, 2023, 16:57 [IST]
Other articles published on Jul 5, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+