For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರದ್ದಾಗುತ್ತೆ ಎನ್ನಲಾಗಿದ್ದ ಫುಟ್ಬಾಲ್ ಪಂದ್ಯ ರದ್ದಿಲ್ಲ, ಆದ್ರೆ ಛೆಟ್ರಿ ಮಿಸ್ಸಾದ್ರು!

Indian football teams friendly against Jordan to go ahead as per schedule

ಅಮನ್, ನವೆಂಬರ್ 17: ತೀವ್ರ ಮಳೆಯ ಕಾರಣ ವಾಯು ಸಂಚಾರ ಅಸ್ತವ್ಯಸ್ತಗೊಂಡು ಆಟಗಾರರು ನಿಗದಿತ ಸಮಯಕ್ಕೆ ಪಂದ್ಯ ನಡೆಯುವ ತಾಣಕ್ಕೆ ತಲುಪುವುದು ವಿಳಂಬವಾಗುವುದರಿಂದ ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದ್ದ ಭಾರತ vs ಆತಿಥೇಯ ಜೋರ್ಡನ್ ತಂಡಗಳ ನಡುವಿನ ಫುಟ್ಬಾಲ್ ಪಂದ್ಯ ರದ್ದಾಗಿಲ್ಲ. ವೇಳಾಪಟ್ಟಿಯಂತೆ ನಡೆಯಲಿದೆ.

2019ರ 'ಏಷ್ಯಾನ್ ಫುಟ್ಬಾಲ್ ಕಾನ್ಫಿಡರೇಶನ್ ಏಷ್ಯಾಕಪ್'ಗೆ ತಯಾರಿ ಅರ್ಥವಾಗಿ ಭಾರತ ಮತ್ತು ಜೋರ್ಡನ್ ನಡುವಿನ ಪಂದ್ಯ ಜೋರ್ಡನ್‌ನ ಅಮನ್ ನ ಕಿಂಗ್ ಅಬ್ದುಲ್ಲ II ಸ್ಟೇಡಿಯಂನಲ್ಲಿ ಇಂದು (ನವೆಂಬರ್ 17) ನಡೆಯುವುದರಲ್ಲಿತ್ತು. ಆದರೆ ಅರಬ್ ದೇಶಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಈಗಿನ ಮಾಹಿತಿಯಂತೆ ಪಂದ್ಯ ರದ್ದಾಗಿಲ್ಲ. ಬದಲಿಗೆ ವೇಳಾಪಟ್ಟಿಯ ಪ್ರಕಾರ ಶನಿವಾರ (ನವೆಂಬರ್ 17) 10.30pmಗೆ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ 3ಯಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ. ಆದರೆ ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಗಾಯಗೊಂಡಿರುವುದರಿಂದ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಂಡವನ್ನು ಪ್ರತಿನಿಧಿಸುತ್ತಿಲ್ಲ.

ಫುಟ್ಬಾಲ್ ಕ್ರೀಡೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತೆ ನೋಡಿಕೊಂಡ, ಈಗಲೂ ನೋಡಿಕೊಳ್ಳುತ್ತಿರುವ ಸುನಿಲ್ ಛೆಟ್ರಿ, ಪಾದದ ಗಂಟಿನ (ಆ್ಯಂಕಲ್) ಗಾಯಕ್ಕೀಡಾಗಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ತಂಡದ ಆಕರ್ಷಣೀಯ ಆಟಗಾರರಾಗಿರುತ್ತಿದ್ದ ಛೆಟ್ರಿ ಪಂದ್ಯ ಮಿಸ್‌ ಮಾಡಿಕೊಂಡಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ.

Story first published: Saturday, November 17, 2018, 21:53 [IST]
Other articles published on Nov 17, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+