For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೋವಾ ಸೋಲಿಸಿ ಐಎಸ್‌ಎಲ್ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ಬೆಂಗಳೂರು!

Indian Super League final, Live Score: Bengaluru FC vs FC Goa

ಮುಂಬೈ, ಮಾರ್ಚ್ 17: ಮುಂಬೈಯ ಫುಟ್ಬಾಲ್ ಅರೆನಾದಲ್ಲಿ ಭಾನುವಾರ (ಮಾರ್ಚ್ 17) ನಡೆದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 2018-19ರ ಫೈನಲ್ ಹಣಾಹಣಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಎಫ್‌ಸಿ ಗೋವಾ ವಿರುದ್ಧ 1-0ಯ ಗೋಲ್‌ನೊಂದಿಗೆ ಐಎಸ್‌ಎಲ್ ಚೊಚ್ಚಲ ಟ್ರೋಫಿ ಜಯಿಸಿದೆ. ರೋಚಕ ಪಂದ್ಯದಲ್ಲಿ ರಾಹುಲ್ ಭೇಕ್ ಅವರ ಆಕರ್ಷಕ ಗೋಲ್ ನೆರವಿನಿಂದ ಬೆಂಗಳೂರು ತಂಡ ಚಾಂಪಿಯನ್ ಎನಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1053230

ಮೊದಲ ಗೋಲ್ ದಾಖಲಿಸಲು ಎರಡೂ ತಂಡಗಳೂ ಭರ್ಜರಿ ಪೈಪೋಟಿ ನಡೆಸಿದವಾದರೂ ಪಂದ್ಯದ ಪ್ರಥಮಾರ್ಧದಲ್ಲಿ ಗೋಲ್ ದಾಖಲಾಗಲಿಲ್ಲ. ಫಲಿತಾಂಶ 0-0ಯಲ್ಲಿ ಉಳಿಯಿತು. ಪ್ರಥಮಾರ್ಧ ಅಂತಿಮ ಕ್ಷಣದಲ್ಲಿ ಬೆಂಗಳೂರಿನ ಮಿಕುಗೆ ಗೋಲ್ ದಾಖಲಿಸಲು ಅವಕಾಶವಿತ್ತು. ಆದರೆ ಮಿಕು ಅವಕಾಶವನ್ನು ಕೈಚೆಲ್ಲಿದರು.

45ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡ ಆಟಗಾರನನ್ನು ಬದಲಿಸಿಕೊಂಡಿತು. ಮಂದಾರ್ ರಾವ್ ದೇಸಾಯ್ ಗಾಯಗೊಂಡು ಮೈದಾನದಿಂದ ಹೊರ ನಡೆದರು. ಅವರ ಬದಲಿ ಆಟಗಾರನಾಗಿ ಸೇವಿಯರ್ ಗಾಮಾ ಮೈದಾನ ಪ್ರವೇಶಿಸಿದರು.

ಪಂದ್ಯದ ದ್ವಿತೀಯಾರ್ಧ ಅಂದರೆ 90ನೇ ನಿಮಿಷದಲ್ಲಿ ಯಾವುದೇ ತಂಡ ಗೋಲ್ ದಾಖಲಿಸಲಿಲ್ಲ. ಹಾಗಾಗಿ 15 ಹೆಚ್ಚುವರಿ ನಿಮಿಷಗಳನ್ನು ನೀಡಲಾಯಿತು. ಆದರೆ 105ನೇ ನಿಮಿಷದಲ್ಲೂ ಗೋಲೇ ದಾಖಲಾಗದಿದ್ದಿದ್ದು ಇದು ಜಿದ್ದಾಜಿದ್ದಿಯ ಪಂದ್ಯ ಎನ್ನುವುದಕ್ಕೆ ಸಾಕ್ಷಿ ಹೇಳಿತು.

ಮತ್ತೆ 15 ನಿಮಿಷಗಳನ್ನು ಸೇರಿಸಲಾಯಿತು. ಆಗ 117ನೇ ನಿಮಿಷದಲ್ಲಿ ಬೆಂಗಳೂರಿನ ರಾಹುಲ್ ಭೇಕ್ ಗೋಲ್ ಸಿಡಿಸಿ ತಂಡದ ಗೆಲುವಿನ ಸಂಭ್ರಮಕ್ಕೆ ಕಾರಣರಾದರು. ಡಿಮಾಸ್ ಡೆಲ್ಗಾಡೊ ಸಹಕಾರದೊಂದಿಗೆ ರಾಹುಲ್ ಗೋಲ್ ಬಾರಿಸಿ ಹೀರೋ ಅನ್ನಿಸಿದರು. ಇದರೊಂದಿಗೆ ಬೆಂಗಳೂರು ಎಫ್‌ಸಿ ಚೊಚ್ಚಲ ಐಎಸ್‌ಎಲ್ ಟ್ರೋಫಿ ಜಯಿಸಿತು. ಹೀರೋ ಆಫ್ ದ ಲೀಗ್ ಮತ್ತು ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಎಫ್‌ಸಿ ಗೋವಾದ ಫೆರಾನ್ ಕೊರೊಮಿನಸ್ ಪಡೆದುಕೊಂಡರು.

ಬೆಂಗಳೂರು ಎಫ್‌ಸಿ ತಂಡ: (ಆಡುವ 11) ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ರಾಹುಲ್ ಬೆಕ್ಕೆ, ಜುವಾನ್, ಮಿಕು, ಹರ್ಮನ್‌ಜೋತ್ ಖಬ್ರಾ, ಸುನಿಲ್ ಛೆಟ್ರಿ (ಸಿ), ಡಿಮಾಸ್ ಡೆಲ್ಗಾಡೋ, ಕ್ಸಿಸ್ಕೋ ಹೆರ್ನಾಂಡೆಜ್, ಉದಂಡಾ ಸಿಂಗ್, ನಿಶು ಕುಮಾರ್, ಅಲೆಜಾಂಡ್ರೊ ಗಾರ್ಸಿಯಾ ಬ್ಯಾರೆರಾ.

ಬೆಂಚ್ ಪ್ಲೇಯರ್ಸ್: ಬೋಯಿಂಗ್ಯಾಂಗ್ ಹಾಕಿಪ್, ಕೀನ್ ಲೆವಿಸ್, ಲೂಯಿಸ್ ಲೋಪೆಜ್, ಸೊರಾಮ್ ಪೊಯಿರೆ, ಸೆಂಬೊಯಿ ಹಾಕಿಪ್, ಆಲ್ಬರ್ಟ್ ಸೆರೆನ್, ರಿನೋ ಆಂಟೋ.

ಎಫ್‌ಸಿ ಗೋವಾ ತಂಡ: (ಆಡುವ 11) ಅಹಮದ್ ಜಹೌಹ್, ಮಂದರ್ ರಾವ್ ದೆಸ್ಸಾಯ್ (ಸಿ), ಫೆರಾನ್ ಕೊರೊಮಿನಸ್, ಬ್ರ್ಯಾಂಡನ್ ಫೆರ್ನಾಂಡಿಸ್, ಜ್ಯಾಕಿಚಂದ್ ಸಿಂಗ್, ಕಾರ್ಲೋಸ್ ಪೆನಾ, ಸೆರಿಟನ್ ಫೆರ್ನಾಂಡಿಸ್, ಎಡು ಬೈಡಿಯಾ, ಲೆನ್ನಿ ರೊಡ್ರಿಗಸ್, ಮೌರ್ಟಾಡಾ ಫಾಲ್, ನವೀನ್ ಕುಮಾರ್ (ಜಿಕೆ).
ಬೆಂಚ್ ಪ್ಲೇಯರ್ಸ್: ಹ್ಯೂಗೋ ಬೌಮಸ್, ಝೈದ್ ಕ್ರೌಚ್, ಮೊಹಮ್ಮದ್ ನವಾಜ್, ಮನ್ವಿರ್ ಸಿಂಗ್, ಚಿಂಗ್ಲೆನ್ಸನಾ ಸಿಂಗ್, ಮೊಹಮದ್ ಅಲಿ, ಸೇವಿಯರ್ ಗಮಾ.

Story first published: Sunday, March 17, 2019, 23:59 [IST]
Other articles published on Mar 17, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+