For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಜಯದ ಓಟ ಮುಂದುವರಿಸಿದ ಜೇಮ್ಶೆಡ್ಪುರ ಎಫ್‌ಸಿ

By Isl Media
Indian Super League: Jamshedpur call the shots at home

ಜೇಮ್ಶೆಡ್ಪುರ, ಅಕ್ಟೋಬರ್ 29: ಉತ್ತಮ ಹೊಂದಾಣಿಕೆಯ ಆಟ ಹಾಗೂ ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡ ಜೇಮ್ಶೆಡ್ಪುರ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಎರಡನೇ ಜಯ ದಾಖಲಿಸಿದೆ.

ಮಂಗಳವಾರ ಇಲ್ಲಿನ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಹೈದರಾಬಾದ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿತು.

ಫಾರೂಖ್ ಚೌಧರಿ (34ನೇ ನಿಮಿಷ), ಅನಿಕೇತ್ ಜಾಧವ್(62ನೇ ನಿಮಿಷ) ಹಾಗೂ ಸರ್ಗಿಯೊ ಕ್ಯಾಸ್ಟಲ್ (75ನೇ ನಿಮಿಷ ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಮಾರ್ಸಿಲಿನೊ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತೇ ಹೊರತು ತಂದಡಕ್ಕೆ ಜಯದ ಹಾದಿ ತೋರಿಸಲಿಲ್ಲ. ಪ್ರಥಮಾರ್ಧದಲ್ಲಿ ಇತ್ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿದ್ದವು, ನಂತರ ಹೈದರಾಬಾದ್ ಎಫ್ ಸಿ ಪಂದ್ಯದ ಮೇಲೆ ಹಿಡಿತ ,ಕಳೆದುಕೊಂಡಿತು. ದ್ವಿತೀಯಾರ್ಧದಲ್ಲಿ ಟಾಟಾ ಪಡೆ ಎರಡು ಗೋಲು ಗಳಿಸಿ ಸತತ ಎರಡನೇ ಜಯ ಗಳಿಸಿತು. ಹೈದರಾಬಾದ್ ಸತತ ಎರಡನೇ ಸೋಲು ಅನುಭವಿಸಿತು.

ಸಮಬಲದ ಪ್ರಥಮಾರ್ಧ
ಹೈದರಾಬಾದ್ ಉತ್ತಮ ರೀತಿಯಲ್ಲಿ ತಿರುಗೇಟು ನೀಡಿದುದರ ಪರಿಣಾಮ ಜೇಮ್ಶೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಿಟಿ ಹಾಗೂ ಫಾರುಖ್ ಚೌಧರಿ ಉತ್ತಮ ಅವಕಾಶಗಳನ್ನು ನಿರ್ಮಿಸಿದರು. ನಿರೀಕ್ಷೆಯಂತೆ ಟಾಟಾ ಪಡೆ ಪಂದ್ಯದ ಮೇಲೆ ಆರಂಭದಿಂದಲೂ ಪ್ರಭುತ್ವ ಕಂಡಿತು. ಅದೇ ರೀತಿ ಮೊದಲ ಗೋಲನ್ನೂ ಜೇಮ್ಶೆಡ್ಪುರ ದಾಖಲಿಸಿತು. ಫಾರುಖ್ ಚೌಧರಿ 34 ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಹೈದರಾಬಾದ್ ಪಡೆ ತಕ್ಕ ತಿರುಗೇಟು ನೀಡಿತು. 45ನೇ ನಿಮಿಷದಲ್ಲಿ ಮಾರ್ಸಿಲಿನೊ ಗಳಿಸಿದ ಗೋಲಿನಿಂದ ಪಂದ್ಯ ಸಮಬಲಗೊಂಡಿತು, ಇದರೊಂದಿಗೆ ಮೊದಲ 45ನಿಮಿಷಗಳ ಆಟದಲ್ಲಿ ಇತ್ತಂಡಗಳು 1-1 ರಲ್ಲಿ ಪ್ರಭುತ್ವ ಸಾಧಿಸಿದ ಕಾರಣ ದ್ವಿತೀಯಾರ್ಧ ಹೆಚ್ಚು ಕುತೂಹಲಕ್ಕೆ ಅವಕಾಶ ಮಾಡಿಕೊಟ್ಟಿತು.

ಹೈದರಾಬಾದ್ ಗೆ ಜಯದ ನಿರೀಕ್ಷೆ
ಒಂದು ತಂಡ ಸೋತಿದೆ, ಇನ್ನೊಂದು ತಂಡ ಗೆದ್ದಿದೆ, ಈಗ ಇತ್ತಂಡಗಳಿಗೂ ಗೆಲ್ಲುವ ಹಂಬಲ, ಇಂಡಿಯನ್ ಸೂಪರ್ ಲೀಗ್ ನ ಹತ್ತನೇ ಪಂದ್ಯದಲ್ಲಿ ಜೇಮ್ಶೆಡ್ಪುರ ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ತಂಡಗಳು ಮುಖಾಮುಖಿಯಾದವು.

ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ, ಹೈದರಾಬಾದ್ ತಂಡಕ್ಕೆ ಎಲ್ಲದೂ ಹೊಸದಾಗಿ ಕಂಡರೂ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ತಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹೊಸ ತಂಡಕ್ಕೆ ಸಮಯವೇ ಇಲ್ಲದಂತಾಗಿದೆ. ಟಾಟಾ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿಯೊಂದಿಗೆ ಹೈದರಾಬಾದ್ ಅಂಗಣಕ್ಕಿಳಿಯಿತು, ತಂಡದ ಕೋಚ್ ಫಿಲ್ ಬ್ರೌನ್ ಅನುಭವಿ ಕೋಚ್, ತಂಡದ ಆಟಗಾರರನ್ನು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತು. ಅಮಾನತುಗೊಂಡಿರುವ ಬಿಕಾಶ್ ಜೈರು ಅವರ ಅನುಪಸ್ಥಿತಿ ಬಿಟ್ಟರೆ ಜೇಮ್ಶೆಡ್ಪುರ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿದೆ.

Story first published: Tuesday, October 29, 2019, 22:26 [IST]
Other articles published on Oct 29, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+