Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದಾದ್ಯಂತ 82 ಪ್ರದೇಶಗಳಲ್ಲಿ ಇಂಡಿಯನ್ ಸೂಪರ್ ಲೀಗ್ ನೇರ ಪ್ರಸಾರ

Indian Super League to be showcased live across 82 territories worldwide

ಮುಂಬೈ: ಬಹು ನಿರೀಕ್ಷಿತ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿ ಇದೇ ನವೆಂಬರ್ 20ರಿಂದ ಆರಂಭಗೊಳ್ಳಲಿದೆ. ಭಾರತದ ದೊಡ್ಡ ಫುಟ್ಬಾಲ್ ಟೂರ್ನಿಯು ವಿಶ್ವದಾದ್ಯಂತ ಸುಮಾರು 82 ಪ್ರದೇಶಗಳಲ್ಲಿ ನೇರಪ್ರಸಾರಗೊಳ್ಳಲಿದೆ. ಗೋವಾದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ವಿಶ್ವದಾದ್ಯಂತ ಇರುವ ಫುಟ್ಬಾಲ್ ಪ್ರೇಮಿಗಳ ಪ್ರೀತಿ, ಬೆಂಬಲಕ್ಕೆ ಭರವಸೆ ನೀಡಿರುವ ಐಎಸ್‌ಎಲ್ ಟಿವಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಐದು ಪಾಲುದಾರರ ಮೂಲಕ ವಿಶ್ವದ 82 ಪ್ರದೇಶಗಳಲ್ಲಿ ಪಂದ್ಯದ ನೇರ ಪ್ರಸಾರ ನೀಡಲು ಮುಂದಾಗಿದೆ.

ಈ ಬಾರಿಯ ಐಎಸ್‌ಎಲ್ ಟೂರ್ನಿಯ ಪಂದ್ಯಗಳನ್ನು ಭಾರತದಲ್ಲಿ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ವೀಕ್ಷಿಸೋದಷ್ಟೇ ಅಲ್ಲ, ಅಂತಾರಾಷ್ಟ್ರೀಯವಾಗಿ ಯುಎಸ್ಎ, ಆಸ್ಟ್ರೇಲಿಯಾ, ಯುರೋಪ್, ಸೆಂಟ್ರಲ್ ಏಷ್ಯಾ, ಸೌತ್ ಈಸ್ಟ್ ಏಷ್ಯಾ, ಏಷ್ಯಾ ಪ್ಯಾಸಿಫಿಕ್ ಪ್ರದೇಶಗಳಲ್ಲೂ ಅಭಿಮಾನಿಗಳು ವೀಕ್ಷಿಸಲಿದ್ದಾರೆ.

2020-21ರ ಐಎಸ್‌ಎಲ್ ಸೀಸನ್‌ನಲ್ಲಿ ಒಟ್ಟು 115 ಪಂದ್ಯಗಳು ನಡೆಯಲಿದ್ದು 11 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಕೋಲ್ಕತಾದ ದೈತ್ಯ ತಂಡ ಎಟಿಕೆ ಮೋಹನ್ ಬಗಾನ್ ಮತ್ತು ಎಸ್‌ಇ ಈಸ್ಟ್ ಬೆಂಗಾಲ್ ತಂಡಗಳೂ ಸೇರಿವೆ. ಜಾಲತಾಣಿಗರಿಗೆ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಸಬ್ಸ್ಕೈಬ್ ಮೂಲಕ ಮತ್ತು ಜಿಯೋ ಟಿವಿಯವರಿಗೆ ಪಂದ್ಯವನ್ನು ವೀಕ್ಷಿಸಬಹುದು.

ಸ್ಟಾರ್ ಸ್ಪೋರ್ಟ್ಸ್ 1 ಎಸ್‌ಡಿ ಮತ್ತು ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 2 ಎಸ್‌ಡಿ ಮತ್ತು ಎಚ್‌ಡಿ (ಇಂಗ್ಲಿಷ್); ಸ್ಟಾರ್ ಸ್ಪೋರ್ಟ್ಸ್ ಹಿಂದಿ 1 ಎಸ್‌ಡಿ ಮತ್ತು ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಗೋಲ್ಡ್ 2 (ಹಿಂದಿ), ಏಷ್ಯಾನೆಟ್ ಪ್ಲಸ್, ಏಷ್ಯಾನೆಟ್ ಮೂವೀಸ್ (ಮಲಯಾಳಂ); ಸ್ಟಾರ್ ಸ್ಪೋರ್ಟ್ಸ್ ಬಾಂಗ್ಲಾ; ಸ್ಟಾರ್ ಸ್ಪೋರ್ಟ್ಸ್ ಕನ್ನಡ; ಸ್ಟಾರ್ ಸ್ಪೋರ್ಟ್ಸ್ ತಮಿಳು; ಸ್ಟಾರ್ ಸ್ಪೋರ್ಟ್ಸ್ ತೆಲುಗು ಮತ್ತು ಸ್ಟಾರ್ ಸ್ಪೋರ್ಟ್ಸ್ ಮರಾಠಿ ಚಾನೆಲ್‌ಗಳಲ್ಲಿ ಪಂದ್ಯ ನೇರ ಪ್ರಸಾರಗೊಳ್ಳಲಿದೆ.

Story first published: Thursday, November 19, 2020, 17:18 [IST]
Other articles published on Nov 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+