Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೋನೇಷಿಯಾ ಫುಟ್ಬಾಲ್ ಸ್ಟೇಡಿಯಂನಲ್ಲಿ ಕಾಲ್ತುಳಿತ: ಸ್ಟೇಡಿಯಂ ನೆಲಸಮಕ್ಕೆ ಸರ್ಕಾರ ನಿರ್ಧಾರ

Indonesia

ಈ ತಿಂಗಳ ಆರಂಭದಲ್ಲಿ ಕಾಲ್ತುಳಿದಿಂದಾಗಿ ಸುಮಾರು 130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಇಂಡೋನೇಷಿಯಾ ಫುಟ್ಬಾಲ್ ಸ್ಟೇಡಿಯಂ ಅನ್ನು ಕೆಡವಿ ಹೊಸತನ್ನು ನಿರ್ಮಿಸಲು ಇಂಡೋನೇಷಿಯಾ ಸರ್ಕಾರ ನಿರ್ಧರಿಸಿದೆ.

ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ ಮಂಗಳವಾರ ಈ ಕುರಿತು ತನ್ನ ನಿರ್ಧಾರವನ್ನು ತಿಳಿಸಿದ್ದು, ಸ್ಟೇಡಿಯಂ ಮರು ನಿರ್ಮಾಣಕ್ಕೆ ತೀರ್ಮಾನಿಸಿದ್ದಾರೆ.

ತಿಂಗಳ ಆರಂಭದಲ್ಲಿ ವಿಶ್ವದಾದ್ಯಂತ ಫುಟ್ಬಾಲ್ ಪ್ರೇಮಿಗಳು ಈ ವಿಚಿತ್ರ ಮತ್ತು ಭಯಾನಕ ಘಟನೆಗೆ ಸಾಕ್ಷಿಯಾದರು. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಪಂದ್ಯದಲ್ಲಿ ನೆಚ್ಚಿನ ತಂಡದ ಅಭಿಮಾನಿಗಳು ಉತ್ಸಾಹದಿಂದ ಮೈದಾನ ತುಂಬಿದರಾದ್ರೂ ಅಂತ್ಯ ನೋವಿನಿಂದ ಕೂಡಿತ್ತು. 130 ಅಭಿಮಾನಿಗಳು ತುಳಿದು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ವಿಶ್ವ ಫುಟ್‌ಬಾಲ್‌ನ ಅತ್ಯಂತ ನೋವಿನ ನೆನಪುಗಳೊಂದಿಗೆ ನಿಂತಿರುವ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಕೆಡವಿ ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಮಂಗಳವಾರ ಹೇಳಿದ್ದಾರೆ.

ಇಂಡೋನೇಷಿಯಾ ಅಧ್ಯಕ್ಷರು, ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರೊಂದಿಗೆ ಮಂಗಳವಾರ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಕೊ ವಿಡೋಡೊ, "ನಾವು ಮಲಾಂಗ್‌ನಲ್ಲಿರುವ ಕಂಜುರುಹಾನಾ ಕ್ರೀಡಾಂಗಣವನ್ನು ಕೆಡವಿ ಅಲ್ಲಿ ಹೊಸ ಫಿಫಾ ಮಾನದಂಡದ ಕ್ರೀಡಾಂಗಣವನ್ನು ನಿರ್ಮಿಸುತ್ತೇವೆ. ಆಟಗಾರರು ಮತ್ತು ಅಭಿಮಾನಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರೀಡಾಂಗಣದ ಒಳಗೆ ವ್ಯವಸ್ಥೆ ಮಾಡಲಾಗುವುದು" ಎಂದು ಹೇಳಿದರು.

ಎರಡು ದಶಕಗಳ ನಂತರ, ಅರೆಮಾ ಫುಟ್‌ಬಾಲ್ ಕ್ಲಬ್ ಅವ್ಯವಸ್ಥೆಯನ್ನು ಉಂಟುಮಾಡಲು ಅಭಿಮಾನಿಯೊಬ್ಬರು ಪಿಚ್‌ಗೆ ನುಗ್ಗಿದಾಗ ಸಾಂಪ್ರದಾಯಿಕ ಎದುರಾಳಿಗಳಾದ ಪರ್ಸಬಯಾ ಸುರಬಯಾ ವಿರುದ್ಧ 2-3 ಅಂತರದಲ್ಲಿ ಸೋತರು. ಅಂದು ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಸ್ಥಳೀಯ ತಂಡ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತ್ತು. ಇದರಿಂದ ಬೇಸರಗೊಂಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಚ್‌ಗೆ ನುಗ್ಗಿದ್ದರು.

ಈ ವೇಳೆ ಪೊಲೀಸರು ಸ್ಟೇಡಿಯಂನಲ್ಲಿ ಅಶ್ರುವಾಯು ಪ್ರಯೋಗಿಸಿದ್ದರು. ಜನಸಂದಣಿಯೂ ಹೆಚ್ಚಿದ್ದರಿಂದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ, ಪೊಲೀಸರು, ಮಕ್ಕಳು ಸೇರಿದಂತೆ 130ಕ್ಕೂ ಹೆಚ್ಚು ಜನರು ಸ್ಟೇಡಿಯಂನಲ್ಲಿ ಸಾವನ್ನಪ್ಪಿದ್ದರು.

ಅಶ್ರುವಾಯು ಸಿಡಿಸಿದ ಪೊಲೀಸರ ಈ ನಿರ್ಧಾರದಿಂದ ಅಭಿಮಾನಿಗಳು ಉಸಿರು ಬಿಗಿ ಹಿಡಿದು ದಿಕ್ಕು ತೋಚದಂತಾಗಿ ಅಲ್ಲಿ ಇಲ್ಲಿ ಓಡಲಾರಂಭಿಸಿದರು. ಅಶ್ರುವಾಯುವನ್ನು ತಪ್ಪಿಸಲು ನೂರಾರು ಜನರು ನಿರ್ಗಮನ ಗೇಟ್ ಕಡೆಗೆ ಓಡಿದರು. 34 ಜನರು ತಕ್ಷಣ ಸಾವನ್ನಪ್ಪಿದರು. ಈ ಪಂದ್ಯದ ಕೊನೆಯಲ್ಲಿ, ಫುಟ್ಬಾಲ್ ಆಟಗಾರರು ಪೊಲೀಸ್ ಬೆಂಗಾವಲಿನಲ್ಲಿ ಮೈದಾನವನ್ನು ತೊರೆಯಬೇಕಾಯಿತು.

Story first published: Tuesday, October 18, 2022, 20:07 [IST]
Other articles published on Oct 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+