ಸಚಿನ್ ತೆಂಡೂಲ್ಕರ್ ಇಷ್ಟಪಟ್ಟಿದ್ದೆ, ಈಗ ನಾನು ಕೊಹ್ಲಿ ಫ್ಯಾನ್: ಕಾಹಿಲ್

ಕೋಲ್ಕತ್ತಾ, ಸೆಪ್ಟೆಂಬರ್ 22: ನನಗೆ ಕ್ರಿಕೆಟ್ ಇಷ್ಟ. ಕ್ರಿಕೆಟ್ ಲೋಕದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ನಾನು ಎಂದು ಆಸ್ಟ್ರೇಲಿಯಾ ಫುಟ್ಬಾಲ್ ದಂತಕತೆ ಟಿಮ್ ಕಾಹಿಲ್ ಹೇಳಿದ್ದಾರೆ.
ಮುಂಬರಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಪಂದ್ಯಾಟದಲ್ಲಿ ಜೆಮ್‌ಶೆಡ್‌ಪುರ್ ಫುಟ್ಬಾಲ್ ಕ್ಲಬ್ ಪರ ಆಡುತ್ತಿರುವ ಟಿಮ್ ಕಾಹಿಲ್ ಮಾತನಾಡುತ್ತ, 'ನಾನು ಯಾವತ್ತಿಗೂ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಈಗ ಖಂಡಿತಾ ನಾನ್ ವಿರಾಟ್ ಕೊಹ್ಲಿ ಅಭಿಮಾನಿ' ಎಂದರು.
'ಕಷ್ಟಪಟ್ಟು ಸಾಧನೆ ಶಿಖರ ಏರಿದ ಕೊಹ್ಲಿ ಅವರ ಹಿಂದಿನ ಕತೆ ನನಗೆ ಗೊತ್ತಿದೆ. ಈಗಲೂ ಅವರು ಪರಿಶ್ರಮ ಪಡುತ್ತಿದ್ದಾರೆ. ಜೊತೆಗೆ ಕೊಹ್ಲಿ ಮಿನಮ್ರ ವ್ಯಕ್ತಿತ್ವದವರು, ತ್ಯಾಗ ಗುಣ ಹೊಂದಿರುವವರು. ಇವೆಲ್ಲ ಕಾರಣಕ್ಕಾಗಿಯೇ ಕೊಹ್ಲಿ ನನಗೆ ಪಂಚಪ್ರಾಣ ಎನಿಸಿದ್ದಾರೆ' ಎಂದು ಕಾಹಿಲ್ ನುಡಿದರು.
'ಕ್ರೀಡಾಂಗಣದ ಹೊರಗಿದ್ದೂ ಭಾರತದ ಜನತೆಗೆ ಭಾವನಾತ್ಮಕವಾಗಿ, ದಾನ ರೀತಿಯಲ್ಲೂ ನೆರವಾಗುತ್ತಿರುವ ಕೊಹ್ಲಿ ಬದುಕಿನ ಪರಿ ನನಗೆ ಇಷ್ಟವಾಯಿತು. ಕೊಹ್ಲಿಯೊಬ್ಬರು ಸ್ನೇಹಜೀವಿ. ಉತ್ತಮ ವ್ಯಕ್ತಿಗಳಿಗೆ ಅವರು ಉತ್ತಮ ಉದಾಹರಣೆ. ನಾನು ಸಾಮಾಜಿಕ ಜಾಲತಾಣದಲ್ಲೂ ಕೊಹ್ಲಿಯ ಹಿಂಬಾಲಕನಾಗಿದ್ದೇನೆ' ಎಂದು ಟಿಮ್ ಕೊಹ್ಲಿಯನ್ನು ಶ್ಲಾಘಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications