ಐಎಸ್‌ಎಲ್ 2019: ಗೌರವ ಕಾಯ್ದುಕೊಳ್ಳಲು ಪುಣೆ ವಿರುದ್ಧ ಚೆನ್ನೈ ಸೆಣಸು

ಚೆನ್ನೈ, ಫೆಬ್ರವರಿ 1: ನಿರಂತರ ಸೋಲಿನಿಂದ ಕಂಗೆಟ್ಟಿರುವ ಚೆನ್ನೈಯಿನ್ ಎಫ್ ಸಿ ತಂಡ ಮನೆಯಂಗಣದಲ್ಲಿ ಜಯ ಗಳಿಸಿ ನೆಮ್ಮದಿಯ ನಿಟ್ಟುಸಿರನ್ನು ಬಿಡಲು ಪುಣೆ ತಂಡದ ವಿರುದ್ಧ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.
ಐಎಸ್‌ಎಲ್ ಇತಿಹಾಸದಲ್ಲೇ ಹಾಲಿ ಚಾಂಪಿಯನ್ ತಂಡವೊಂದು ಈ ರೀತಿಯ ಹೀನಾಯ ಪ್ರದರ್ಶನವನ್ನು ನೀಡಿರಲಿಲ್ಲ. 13 ಪಂದ್ಯಗಳನ್ನಾಡಿರುವ ಚೆನ್ನೆ'ಯಿನ್ ತಂಡ ಕೇವಲ ಐದು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮನೆಯಂಗಣದಲ್ಲಿ 18 ಅಂಕಗಳನ್ನು ಗಳಿಸುವ ಅವಕಾಶ ಹೊಂದಿದ್ದ ತಂಡ ಕೇವಲ ಒಂದು ಅಂಕ ಗಳಿಸಸಿ ತಲೆ ತಗ್ಗಿಸಸಿದೆ. ಈ ರೀತಿ ಯಾವುದೇ ತಂಡ ಮನೆಯಂಗಣದಲ್ಲಿ ಹೀನಾಯ ಪ್ರದರ್ಶನ ತೋರಿರಲಿಲ್ಲ.
ಚೆನ್ನೆ'ಯಿನ್ ತಂಡ ಡಿಫೆನ್ಸ್ ಹಾಗೂ ದಾಳಿಯಲ್ಲಿ ವೈಫಲ್ಯ ಕಂಡಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಡಿಫೆನ್ಸ್ ವಿಭಾಗ ಇದುವರೆಗೂ ಎದುರಾಳಿ ತಂಡಕ್ಕೆ 25 ಗೋಲುಗಳನ್ನು ಗಳಿಸುವ ಅವಕಾಶ ನೀಡಿದೆ. ಯಾವುದೇ ತಂಡ ಈ ರೀತಿಯಲ್ಲಿ ಗೋಲು ನೀಡಿರಲಿಲ್ಲ. ಮೆಲಿಸನ್ ಆಲ್ವೆಸ್ ಅವರು ಅಮಾನತುಗೊಂಡಿರುವುದು ತಂಡದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅದೇ ರೀತಿ ಇನಿಗೊ ಕಾಲ್ಡರೆನ್ ಅವರ ನಿರ್ಗಮನವೂ ತಂಡದ ಬಲದ ಮೇಲೆ ಕೆಟ್ಟ ಪರಿಣಾಮ ಬೀರೀತು. ಸಿಕೆ ವಿನೀತ್ ಹಾಗೂ ಹಾಲಿಚರಣ್ ನಾರ್ಜರಿ ಅವರ ಸೇರ್ಪಡೆ ತಂಡದ ದಾಳಿ ವಿಭಾಗದ ಶಕ್ತಿಯನ್ನು ಹೆಚ್ಚಿಸಿರುವುದು ಸ್ಪಷ್ಟ. ಆದರೆ ಇಬ್ಬರು ಆಟಗಾರರು ತಂಡದ ಇತರ ಆಟಗಾರರೊಂದಿಗೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ.

ಆಟಗಾರರ ಮೇಲೆ ನಿಯಂತ್ರಣ
‘ನಾವು ವಿದೇಶಿ ಆಟಗಾರರೆಲ್ಲರನ್ನೂ ಆಡಿಸಬಹುದು, ಆದರೆ ಎಎಫ್ಸಿ ಕಪ್ ಹಾಗೂ ಸೂಪರ್ ಕಪ್ ಬಂದಾಗ ಆಟಗಾರರ ಮೇಲೆ ನಿಯಂತ್ರಣ ಹೇರಲಾಗುತ್ತದೆ. ವಿನೀತ್ ಹಾಗೂ ನಾರ್ಜರಿ ತಂಡವನ್ನು ಸೇರಿದ್ದಾರೆ, ಆದರೆ ಅವರಿಗೆ ಪೂರಕವಾದ ವಿದೇಶಿ ಆಟಗಾರರ ಹೊಂದಾಣಿಕೆಯ ಅಗತ್ಯವಿರುತ್ತದೆ. ಭಾರತದ ಆಟಗಾರನ್ನೇ ಆಡಿಸಬಹುದು, ಆದ್ದರಿಂದ ಒಂದೆರಡು ವಿದೇಶಿ ಆಟಗಾರರನನ್ನು ಬದಲಾಯಿಸುವ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ,ಈಗ ನಮ್ಮ ಗುರಿ ಏನಿದ್ದರೂ ಎಎಫ್ಸಿ ಕಪ್ ಕಡೆಗೆ,‘ ಎಂದು ತಂಡದ ಪ್ರಧಾನ ಕೋಚ್ ಜಾನ್ ಗ್ರೆಗೋರಿ ಹೇಳಿದ್ದಾರೆ.

ಫಿಲ್ ಬ್ರೌನ್ ಅವರ ಗರಡಿ
ಪುಣೆ ಸಿಟಿ ತಂಡ ನೂತನ ಮ್ಯಾನೇಜರರರ್ ಫಿಲ್ ಬ್ರೌನ್ ಅವರ ಗರಡಿಯಲ್ಲಿ ಪಳಗಿದೆ. ಚೆನ್ನೆ‘ ತಂಡದಂತೆ ಪುಣೆ ಕೂಡ ಕಳೆದ ಋತುವಿನ ಪ್ರದರ್ಶನದ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಲವಾಗಿದೆ.
‘ಪುಣೆ ತಂಡದ ನಿರ್ದೇಶಕರು ಸಭೆ ನಡೆಸಿ ನನಗೆ ಉಳಿದಿರುವ ಆರು ಪಂದ್ಯಗಳು ಪ್ರಮುಖ ಎಂಬುದನ್ನು ಹೇಳಿದ್ದಾರೆ. ತಂಡದ ಸದ್ಯದ ಪರಿಸ್ಥಿತಿಯನ್ನೂ ಮನದಟ್ಟು ಮಾಡಿದ್ದಾರೆ. ಉಳಿದಿರುವ ಪಂದ್ಯಗಳಲ್ಲಿ ಸಾಧ್ಯವಾದಷ್ಟನ್ನು ಗೆಲ್ಲಬೇಕಾಗಿದೆ. ನನ್ನ ಭವಿಷ್ಯ ಹಾಗೂ ಕ್ಲಬ್‌ನ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಸವಾಲು ಏನೆಂಬುದನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಕ್ಲಬ್‌ನಲ್ಲಿ ಉಳಿಯುವ ಬಗ್ಗೆ ನಮ್ಮ ಆಟಗಾರರಿಗೆ ತಿಳಿಸಿರುವೆ. ಐಎಸ್‌ಎಲ್‌ನಲ್ಲಿ ಮ್ಯಾನೇಜರ್ ಆಗಿ ಉಳಿಯಬೇಕೆಂಬುದು ನನ್ನ ಆಸೆ. ಅದಕ್ಕಾಗಿ ಇಲ್ಲಿ ಅಗತ್ಯ ಇರುವುದು ಜಯ.

ನಂಬಿಕೆ ಇದೆ
ಅದನ್ನು ಆಟಗಾರರು ಮಾತ್ರ ಪೂರೈಸಬಲ್ಲರು. ನಾಳೆ ಮಾತ್ರವಲ್ಲದೆ ಋತುವಿನ ಇತರ ದಿನಗಳಲ್ಲೂ ಅವರು ನನ್ನ ಮಾತಿಗೆ ಬೆಲೆ ಕೊಡುತ್ತಾರೆಂಬ ನಂಬಿಕೆ ಇದೆ, ‘ ಎಂದು ಬ್ರೌನ್ ಹೇಳಿದ್ದಾರೆ.
ಪುಣೆ ತಂಡ ಹಿಂದಿನ ಎರಡು ಪಂದ್ಯಗಳನ್ನು ಗೆದ್ದಿದೆ, ಅದೇ ರೀತಿ ನಿರಂತರ ಮೂರನೇ ಜಯಕ್ಕಾಗಿ ಎದುರು ನೋಡುತ್ತಿದೆ. ಮಾರ್ಸೆಲಿನೋ ಕೊನೆಗೂ ಆಟದ ಮೇಲೆ ಲಯ ಕಂಡುಕೊಂಡಿದ್ದಾರೆ. ಆರೆಂಜ್ ಬ್ರಿಗೇಡ್‌ನಲ್ಲಿ ಆಶಿಕ್ ಕುರುನಿಯಾನ್ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಏಷ್ಯನ್ ಕಪ್‌ನಲ್ಲಿ ಕುರುನಿಯಾನ್ ಉತ್ತಮ ಪ್ರದರ್ಶನ ತೋರಿದ್ದಾರೆ.

ಧನಪಾಲ್ ಗಣೇಶ್ ಗಾಯ
ಚೆನ್ನೆ‘ ತಂಡ ಕೂಡ ಕ್ರಿಸ್ಟೋರ್ ಹೆರ್ಡ್ ಅವರನ್ನು ತಂಡಕ್ಕೆ ಸೇರಿಕೊಂಡಿದ್ದು, ಇದರಿಂದ ತಂಡ ಬಲ ಹೆಚ್ಚಿರುವುದು ಸ್ಪಷ್ಟ. ಧನಪಾಲ್ ಗಣೇಶ್ ಗಾಯಗೊಂಡಿರುವುದು ಮಿಡ್‌ಫೀಲ್ಡ್ ವಿಭಾಗದಲ್ಲಿ ತಂಡದ ಶಕ್ತಿ ಕುಂದಿರುವುದು ಸ್ಪಷ್ಟ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications