For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮನೆಯಂಗಣದಲ್ಲಿ ಗೋವಾಕ್ಕೆ ಸೋಲಿನ ಆಘಾತ

By Isl Media
ISL 2019: Castel wins it for Jamshedpur in Goa

ಗೋವಾ, ನವೆಂಬರ್ 27: ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೆಜ್ 17ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಜೆಮ್ಶೆಡ್ಪುರ ಎಫ್ ಸಿ ಬಲಿಷ್ಠ ಎಫ್ ಸಿ ಗೋವಾ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿದೆ. ಈ ಜಯದಿಂದಾಗಿ ಟಾಟಾ ಪಡೆ ಇಂಡಿಯನ್ ಸೂಪರ್ ಲೀಗ್ ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಮೊದಲ ಸ್ಥಾನದ ಗುರಿ ಹೊಂದಿದ್ದ ಗೋವಾ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. 72ನೇ ನಿಮಿಷದ ನಂತರ ಜೆಮ್ಶೆಡ್ಪುರದ ಅಹಮದ್ ಜಹೌಹ್ ರೆಡ್ ಕಾರ್ಡ್ ಪಡೆದು ಹೊರನಡೆದರು. ಆ ನಂತರವೂ ಗೋವಾ ಪಂದ್ಯದ ಮೇಲೆ ಪ್ರಭುತ್ವ ಸಾಧಿಸುವಲ್ಲಿ ವಿಫಲವಾಯಿತು.

ಪ್ರಥಮಾರ್ಧದಲ್ಲಿ ಗೋವಾಕ್ಕೆ ಶಾಕ್!
17ನೇ ನಿಮಿಷದಲ್ಲಿ ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೇಜ್ ಗಳಿಸಿದ ಗೋಲಿನ ನೆರವಿನಿಂದ ಅಚ್ಚರಿಯ ಮುನ್ನಡೆ ಕಾಣುವುದರೊಂದಿಗೆ ಗೋವಾದ ಪ್ರೇಕ್ಷಕರು ಮೌನಕ್ಕೆ ಶರಣಾದರು. ಸಾಮಾನ್ಯವಾಗಿ ಗೋವಾ ತಂಡ ಆರಂಭದಲ್ಲಿ ಮುನ್ನಡೆ ಕಾಣುತ್ತದೆ ಎಂಬುದು ಸಾಮಾನ್ಯ ಫುಟ್ಬಾಲ್ ಪ್ರೇಕ್ಷಕನ ನಿರೀಕ್ಷೆಯಾಗಿರುತ್ತದೆ. ಆದರೆ ಈ ಬಾರಿ ಟಾಟಾ ಪಡೆ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಋತುವಿನಲ್ಲಿ ಮೊದಲ ಬಾರಿಗೆ ಗೋಲ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ ಸುಬ್ರತಾ ಪಾಲ್ ಪಂದ್ಯ ಆರಂಭಗೊಂಡ ಏಳನೇ ನಿಮಿಷದಲ್ಲಿ ಗೋವಾದ ಮುನ್ನಡೆಗೆ ತಡೆಯೊಡ್ಡಿದರು. ಜಾಕಿಚಾಂದ್ ಸಿಂಗ್ ಇಟ್ಟ ಗುರಿ ಪಾಲ್ ಅವರ ಕೈ ಸೇರಿತ್ತು. 43ನೇ ನಿಮಿಷದಲ್ಲೂ ಜಾಕಿಚಾಂದ್ ಸಿಂಗ್ ಗುರಿಗೆ ಸುಬ್ರತಾ ಪಾಲ್ ಅಡ್ಡಿಯಾದರು.

ಆರಂಭದಿಂದಲೂ ಗೋವಾ ತನ್ನ ನೈಜ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗೋಲ್ ಬಾಕ್ಸ್ ಗೆ ಗುರಿ ಇಟ್ಟರೂ ಉತ್ತಮ ರೀತಿಯಲ್ಲಿ ಫಿನಿಷ್ ಮಾಡಲು ವಿಫಲವಾಯಿತು. ಕ್ಯಾಸ್ಟಲ್ ಗೋಲು ಗಳಿಸಿದ ಮೇಲೂ ಗೋವಾ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಆದರೆ ಸುಬ್ರತಾ ಪಾಲ್ ಸೂಪರ್ ಮ್ಯಾನ್ ರೀತಿಯಲ್ಲಿ ತಂಡಕ್ಕೆ ನೆರವಾದರು.

ISL 2019: Castel wins it for Jamshedpur in Goa

ಅಜೇಯರ ವಿರುದ್ಧ ಜಯದ ಹಂಬಲ
ಕಾಡೆತ್ತು ಎಂದೇ ಕರೆಯಲ್ಪಡುವ ಎಫ್ ಸಿ ಗೋವಾ ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ, ಆದರೆ ಕಂಡ ಫಲಿತಾಂಶ ತೃಪ್ತಿದಾಯಕವಾಗಿರಲಿಲ್ಲ. ಎರಡು ಪಂದ್ಯಗಳಲ್ಲಿ ಜಯ ಗಳಿಸಿದರೆ ಇನ್ನೆರಡು ಪಂದ್ಯಗಳು ದ್ರಾದಲ್ಲಿ ಕೊನೆಗೊಂಡಿದೆ. ವಿರಾಮಕ್ಕೆ ಮುನ್ನ ಮುಂಬೈ ಸಿಟಿ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಗೋವಾ ಜಯ ಗಳಿಸಿತ್ತು. ಇದುವರೆಗೂ ಆಡಿರುವ ಎಲ್ಲ ನಾಲ್ಕು ಪಂದ್ಯಗಳಲ್ಲೂ ಗೋಲು ಗಳಿಸಿ ತನ್ನ ಸಾಮರ್ಥ್ಯವನ್ನು ಪ್ರಕಟಪಡಿಸಿತ್ತು. ಋತುವಿನ ಮೊದಲ ಪಂದ್ಯದಲ್ಲಿ ಮಾತ್ರ ಗೋವಾ ಕ್ಲೀನ್ ಶೀಟ್ ಸಾಧನೆ ಮಾಡಿತ್ತು. ಈಗ ಕ್ಲೀನ್ ಶೀಟ್ ಸಾಧನೆಯ ಜೊತೆಗೆ ಅಗ್ರ ಸ್ಥಾನ ತಲಪುವ ಗುರಿಯೊಂದಿಗೆ ಅಂಗಣಕ್ಕೆ ಇಳಿಯಿತು.

ಜೇಮ್ಶೆಡ್ಪುರ ಎಫ್ ಸಿ ಋತುವಿನ ಆರಂಭದ ಎರಡು ಪಂದ್ಯಗಳನ್ನು ಗೆದ್ದು, ಉತ್ತಮ ಆರಂಭ ಕಂಡಿತ್ತು, ಆದರೆ ನಂತರ ಅದೇ ರೀತಿಯಲ್ಲಿ ಮುಂದುವರೆಯಲು ವಿಫಲವಾಯಿತು. ಒಂದು ಡ್ರಾ ಹಾಗೂ ಒಂದು ಸೋಲು ತಂಡದ ಜಯದ ಹಾದಿಯಲ್ಲಿ ಅಡ್ಡಿ ಮಾಡಿತು. ಹಿಂದಿನ ಎರಡು ಪಂದ್ಯಗಳಲ್ಲಿ ಟಾಟಾ ಪಡೆಗೆ ಆರು ಅಂಕಗಳನ್ನು ಗಳಿಸಬಹುದಾಗಿತ್ತು. ಆದರೆ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟಿತ್ತು. ಫರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ಜಯ ಗಳಿಸುವ ಗುರಿಯೊಂದಿಗೆ ಜೆಮ್ಶೆಡ್ಪುರ ಎಫ್ ಸಿ ಅಂಗಣಕ್ಕಿಳಿಯಿತು.

Story first published: Tuesday, November 26, 2019, 23:48 [IST]
Other articles published on Nov 26, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+