ಐಎಸ್‌ಎಲ್ 2019: ಮನೆಯಂಗಣದಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿದ ಗೋವಾ

ಗೋವಾ, ಡಿಸೆಂಬರ್ 23: ಫೆರಾನ್ ಕೊರೊಮಿನಾಸ್ (19 ಮತ್ತು 89ನೇ ನಿಮಿಷ) ಹಾಗೂ ಬ್ರೆಂಡಾನ್ ಫೆರ್ನಾಂಡೀಸ್ (85ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಒಡಿಶಾ ಎಫ್ ಸಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಪ್ರಥಮಾರ್ಧದಲ್ಲಿ ಫರಾನ್ ಗಳಿಸಿದ ಗೋಲಿನಿಂದ ಗೋವಾ 1-0 ಅಂತರದಲ್ಲಿ ಮುನ್ನಡೆ ಕಂಡಿತ್ತು, ನಂತರ ದ್ವಿತಿಯಾರ್ಧದಲ್ಲಿ ಬ್ರೆಂಡಾನ್ ಮತ್ತು ಫೆರಾನ್ ತಲಾ ಒಂದು ಗೋಲು ಗಳಿಸುವ ಮೂಲಕ ಗೋವಾ ಪಡೆ 3-0 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಸಿತು. 9 ಪಂದ್ಯಗಳನ್ನು ಆಡಿರುವ ಗೋವಾ ತಂಡ ಸೋತಿರುವುದು ಒಮ್ಮೆ ಮಾತ್ರ. 5 ಪಂದ್ಯಗಳಲ್ಲಿ ಜಯ ಗಳಿಸಿ 3 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 18 ಅಂಕಗಳನ್ನು ಗಳಿಸಿರುವ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಗ್ರ ಸ್ಥಾನಕ್ಕೇರಿತು.
ಮುನ್ನಡೆದ ಗೋವಾ
ಗೋಲ್ ಯಂತ್ರ ಫೆರಾನ್ ಕೊರೊಮಿನಾಸ್ 19ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಫ್ ಸಿ ಗೋವಾ ತಂಡ ಒಡಿಶಾ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು. ಹಾಗೆ ನೋಡಿದರೆ ಒಡಿಶಾ ಪರ ಅರಿಡಾನೆ ಸ್ಯಾಂಟನಾ ಅವರು ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಆದರೆ ಕೊರೊಮಿನಾಸ್ ಎಲ್ಲಿಯೂ ತಪ್ಪು ಮಾಡದೆ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಜಾಕಿಚಾಂದ್ ನೀಡಿದ ಪಾಸ್ ಹ್ಯೂಗೋ ಬೌಮಾಸ್ ಅವರಿಗೆ ನೀಡಿದ ಪಾಸ್ ಎಲ್ಲಿಯೂ ತಪ್ಪದೆ ಕೊರೊಮಿನಾಸ್ ಅವರ ನಿಯಂತ್ರಣಕ್ಕೆ ಸಿಲುಕಿ, ಗೋಲ್ ಬಾಕ್ಸ್ ಸೇರಿತು. ಗೋವಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ಅವಕಾಶಗಳನ್ನು ನಿರ್ಮಿಸಿತ್ತು, ಆದರೆ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಆರಂಭದಲ್ಲಿ ಉತ್ತಮ ರೀತಿಯಲ್ಲಿ ಚೆಂಡಿನ ಮೇಲೆ ನಿಯಂತ್ರಿಸಿದ್ದ ಒಡಿಶಾಕ್ಕೆ ಸಮಯ ಕಳೆದಂತೆ ಪ್ರಭುತ್ವ ಸಾಧಿಸಲು ಸಾಧ್ಯವಾಗಲಿಲ್ಲ.

ಗೋವಾ ಫೇವರಿಟ್
ಗೋವಾ ತಂಡವನ್ನು ಅದರ ಮನೆಯಂಗಣದಲ್ಲಿ ಬಲಿಷ್ಠ ತಂಡಗಳಿಗೇ ಕಷ್ಟವಾಗಿರುವಾಗ ಸಂಕಷ್ಟದಲ್ಲಿರುವ ಹೈದರಾಬಾದ್ ಯಶಸ್ಸು ಕಾಣುತ್ತದೆ ಎಂದು ಹೇಳಲಾಗದು. ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪುವ ಗುರಿ ಹೊಂದಿರುವ ಗೋವಾ ಈ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಎಟಿಕೆ ವಿರುದ್ಧ ಜಯ ಗಳಿಸಿತ್ತು. ಆಕ್ರಮಣಕಾರಿ ಆಟ ಪ್ರದರ್ಶಿಸುವ ಗೋವಾ ತಂಡ ಸ್ಟಾರ್ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಅವರ ಆಗಮನದಿಂದ ತಂಡದ ಶಕ್ತಿ ಹೆಚ್ಚಿದೆ. ಬ್ರೆಂಡಾನ್ ಫೆರ್ನಾಂಡೀಸ್ ಹ್ಯುಗೋ ಬೌಮೌಸ್ ಮತ್ತು ಲೆನ್ ರಾಡ್ರಿಗಸ್ ತಂಡದ ಯಶಸ್ಸಿನಲ್ಲಿ ಪದರಮುಖ ಪಾತ್ರ ವಹಿಸಿರುತ್ತಾರೆ. ಕಾರ್ಲೋಸ್ ಪೆನಾ ಹಾಗೂ ಮೌರ್ತದಾ ಫಾಲ್ ಬ್ಯಾಕ್ ಲೈನ್ ನಲ್ಲಿ ತಂಡದ ಶಕ್ತಿ ಎನಿಸಿದ್ದಾರೆ.
ಗೋವಾದ ಎರಡೂ ವಿಭಾಗಗಳಲ್ಲಿ ಇರುವಂತೆ ಒಡಿಶಾ ತಂಡ ಅಷ್ಟು ಬಲಿಷ್ಠವಾಗಿಲ್ಲ. ಅರಿಡಾನೆ ಸ್ಯಾಂಟನಾ, ಕ್ಸಿಸ್ಕೋ ಹೆರ್ನಾಂಡೀಸ್ ಮತ್ತು ಜೆರ್ರಿ ಮಾವ್ಹಿಮಿಂಗ್ತಾಂಗ ಉತ್ತಮ ಪ್ರದರ್ಶನ ತೋರಬೇಕಾಗಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆದ್ದಿರುವ ಆತ್ಮವಿಶ್ವಾಸದೊಂದಿಗೆ ಗೋವಾ ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ವಿನೀತ್ ರಾಯ್ ಅಮಾನತಿನ ಹಿನ್ನಲೆಯಲ್ಲಿ ಪಂದ್ಯದಿಂದ ಹೊರಗುಳಿದ ಕಾರಣ ಮಿಡ್ ಫೀಲ್ಡ್ ವಿಭಾಗದಲ್ಲಿ ಮಾರ್ಕಸ್ ತೆಬಾರ್ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications