ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ನಾರ್ತ್ ಈಸ್ಟ್ ಯಶಸ್ಸಿಗೆ ಡೆಲ್ಲಿ ಅಡ್ಡಿಯಾದೀತೆ?

By Isl Media
ISL 2019: Delhi can put a spanner in NorthEast’s work

ಗುವಾಹಟಿ, ಫೆಬ್ರವರಿ 6: ಇಲ್ಲಿನ ಇಂದಿರಾ ಗಾಂಧೀ ಕ್ರೀಡಾಂಗಣದಲ್ಲಿ ಗುರುವಾರ (ಫೆಬ್ರವರಿ 7) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖ ಪಂದ್ಯದಲ್ಲಿ ಜಯವನ್ನೇ ನಂಬಿಕೊಂಡಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಅನಿರೀಕ್ಷಿತ ಆಘಾತ ನೀಡಬಲ್ಲ ಡೆಲ್ಲಿ ಡೈನಮೋಸ್ ತಂಡ ಅತ್ಯಂತ ಅಪಾಯಕಾರಿ ಎನಿಸಿದೆ.

ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೃನಾಲ್-ಹಾರ್ದಿಕ್ ಚೊಚ್ಚಲ ಜೊತೆಯಾಟ!ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೃನಾಲ್-ಹಾರ್ದಿಕ್ ಚೊಚ್ಚಲ ಜೊತೆಯಾಟ!

ಪರ್ವತ ಪ್ರದೇಶದ ತಂಡಕ್ಕೆ ಪ್ಲೇ ಆಫ್ ನಲ್ಲಿ ಕೊನೆಯ ತಂಡವಾಗಿ ಸೇರುವ ಅವಕಾಶವಿದೆ. 14 ಪಂದ್ಯಗಳಿಂದ ತಂಡ 23 ಅಂಕಗಳನ್ನು ಗಳಿಸಿದೆ. ಇನ್ನು ಳಿದಿರುವುದು ನಾಲ್ಕು ಪಂದ್ಯಗಳು ಅವುಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಎಟಿಕೆ ಹಾಗೂ ಜೆಮ್ಷೆಡ್ಪುರ ತಂಡಗಳೂ ಕೊನೆಯ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿವೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗಾಗಿ ಕೆಳಗಿನ ಲಿಂಕ್‌ಕ್ಲಿಕ್ ಮಾಡಿ

1
1042957

ಮನೆಯಂಗಣದಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಎಲ್ಕೋ ಷೆಟೋರಿ ಪಡೆ ಕೇವಲ ಎರಡು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಹಂತದಲ್ಲಿ ಅಂಕಗಳನ್ನು ಕಳೆದುಕೊಂಡರೆ ಮೊದಲ ಬಾರಿಗೆ ಪ್ಲೇ ಆಫ್ ತಲಪುವ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಐಪಿಎಲ್ 2019ರ ಕೆಲ ಪಂದ್ಯಗಳನ್ನು ಬಾಂಗ್ಲಾದಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ!ಐಪಿಎಲ್ 2019ರ ಕೆಲ ಪಂದ್ಯಗಳನ್ನು ಬಾಂಗ್ಲಾದಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ!

'ಅವರಿಗೆ ಪ್ಲೇ ಆಫ್ ಹಂತ ತಲಪುವುದು ಕಠಿಣವಾಗಿದೆ. ಅವರು ಒತ್ತಡ ವಿಲ್ಲದೆ ಆಡಬಹುದು, ಉತ್ತಮ ಲಿತಾಂಶ ಕಾಣಬೇಕಾದರೆ ವಿಭಿನ್ನ ರೀತಿಯಲ್ಲಿ ಸಿದ್ಧತೆ ಅಗತ್ಯವಿರುತ್ತದೆ. ಹಿಂದಿನ ಪಂದ್ಯಗಳ ರೀತಿಯಲ್ಲಿ ನಾಳೆಯ ಪಂದ್ಯ ಇರುವುದಿಲ್ಲ, ನಾವು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದ್ದೇವೆ, ಅವರು ಕೇವಲ ಲಿತಾಂಶಕ್ಕಾಗಿ ಆಡುತ್ತಿದ್ದಾರೆ. ಅಂಥ ತಂಡಗಳ ವಿರುದ್ಧ ಅತ್ಯಂತ ವೇಗದಲ್ಲಿ ಗೋಲು ಗಳಿಸಿದರೆ ಅವರನ್ನು ಸುಲಭವಾಗಿ ನಿಯಂತ್ರಿಸಬಹುದು,' ಎಂದು ಷಟೋರಿ ಹೇಳಿದ್ದಾರೆ.

ಷೆಟೋರಿಗೆ ಚೆನ್ನಾಗಿ ಗೊತ್ತಿದೆ

ಷೆಟೋರಿಗೆ ಚೆನ್ನಾಗಿ ಗೊತ್ತಿದೆ

ಈ ಹಿಂದಿನ ಪಂದ್ಯದಲ್ಲಿ ಗೋವಾ ತಂಡಕ್ಕೆ ಗೋಲು ಗಳಿಸಲು ಡೆಲ್ಲಿ ತಂಡ ಅವಕಾಶ ನೀಡದಿರುವ ಅಂಶ ಷೆಟೋರಿಗೆ ಚೆನ್ನಾಗಿ ಗೊತ್ತಿದೆ, ಮತ್ತೊಮ್ಮೆ ಡೆಲ್ಲಿ ಅನಿರೀಕ್ಷಿತ ಪ್ರದರ್ಶನ ನೀಡುವುದು ಖಚಿತವಾಗಿದೆ. ಅದೇ ರೀತಿ ನಾರ್ತ್ ಈಸ್ಟ್ ತಂಡ ಕಳೆದ ಐದು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು ಬಾರಿ.

ರಣತಂತ್ರ ರೂಪಿಸಲಿದೆ

ರಣತಂತ್ರ ರೂಪಿಸಲಿದೆ

ಬಾರ್ತಲೋಮ್ಯೊ ಒಗ್ಬಚೆ ಅವರ ಮುದಾಳತ್ವದಲ್ಲಿ ನಾರ್ತ್ ಈಸ್ಚ್ ತಂಡ 4-2-3-1 ಮಾದರಿಯಲ್ಲಿ ರಣತಂತ್ರ ರೂಪಿಸಲಿದೆ. ಅದೇ ರೀತಿ ಷಟೋರಿ 4-4-2 ಮಾದರಿಯಲ್ಲೂ ರಣತಂತ್ರ ರೂಪಿಸಬಲ್ಲರು. ಆದರೆ ಜಯ ಅಗತ್ಯವಿರುವುದರಿಂದ ಷೆಟೋರಿ ಯಾವ ಮಾದರಿಯನ್ನು ಆಯ್ಕೆ ಮಾಡುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು.

ಡೆಲ್ಲಿ ಜಯದ ಹೆಜ್ಜೆ

ಡೆಲ್ಲಿ ಜಯದ ಹೆಜ್ಜೆ

ಇನ್ನೊಂದೆಡೆ ಡೆಲ್ಲಿ ಡೈನಮೋಸ್, ತಂಡ ಅಂತಿಮವಾಗಿ ನೈಜ ಫುಟ್ಬಾಲ್ ಆಟವಾಡಿ ಜಯದ ಹೆಜ್ಜೆ ಇಟ್ಟಿದೆ. ಕಳೆದ ಮೂರು ಪಂದ್ಯಗಳಲ್ಲಿ ಡೆಲ್ಲಿ ತಂಡ ಸಾಧ್ಯವಿರುವ ಒಂಬತ್ತು ಅಂಕಗಳಲ್ಲಿ ಏಳು ಅಂಕಗಳನ್ನು ಗೆದ್ದಿರುವುದು ವಿಶೇಷ. ಆದರೆ ಋತುವಿನ ಆರಂ‘ದಲ್ಲಿ ಕಂಡ ಸೋಲು ಡೆಲ್ಲಿ ತಂಡದ ಪ್ಲೇ ಆಫ್ ಆಸೆಯನ್ನು ದೂರ ಮಾಡಿತು. ಆದರೆ ಈಗ ಗೌರವಕ್ಕಾಗಿ ಆಡುತ್ತಿರುವ ತಂಡದಲ್ಲಿ ಆತ್ಮವಿಶ್ವಾಸದ ಅಲೆ ಎದ್ದಿದೆ. ತಮ್ಮ ಘನತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಅಂತಿಮ ಕ್ಷಣದಲ್ಲಿ ವಿರೋಚಿತ ಹೋರಾಟ ನೀಡಲು ಡೆಲ್ಲಿ ಸಜ್ಜಾಗಿದೆ.

ತಂಡಕ್ಕೆ ಸ್ಫೂರ್ತಿ

ತಂಡಕ್ಕೆ ಸ್ಫೂರ್ತಿ

‘ಉಳಿದಿರುವ ಪಂದ್ಯಗಳಲ್ಲಿ ನಾವು ಜಯ ಗಳಿಸಿದರೆ ತಂಡಕ್ಕೆ ಸ್ಫೂರ್ತಿ ಸಿಕ್ಕಂತೆ. ನಮಗೆ ಗೊತ್ತಿದೆ, ನಮ್ಮ ತಂಡ ಪ್ಲೇ ಆಫ್ ಹಂತವನ್ನು ತಲುಪುವುದು ಕಷ್ಟವೆಂದು. ಆದರೆ ನಾವು ಮುಂದಿನ ಪಂದ್ಯಗಳನ್ನು ಗೆದ್ದರೆ ತಂಡದ ಮನೋಬಲ ಹೆಚ್ಚುವುದು ಸ್ಪಷ್ಟ. ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ನಾವು ನಾರ್ತ್ ಈಸ್ಟ್ ವಿರುದ್ಧ 2-0 ಅಂತರದಲ್ಲಿ ಸೋತಿದ್ದೆವು. ನಾಳೆಯ ಪಂದ್ಯದಲ್ಲಿ ಗೆದ್ದರೆ ನಮ್ಮಮನೋಬಲ ಹೆಚ್ಚುವುದು ಸ್ಪಷ್ಟ. ‘ಎಂದು ತಂಡದ ಸಹಾಯಕ ಕೋಚ್ ಮೃದುಲಾ ಬ್ಯಾನರ್ಜಿ ಹೇಳಿದ್ದಾರೆ.

Story first published: Wednesday, February 6, 2019, 19:39 [IST]
Other articles published on Feb 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X