ಐಎಸ್‌ಎಲ್ 2019: ಡೆಲ್ಲಿ ಡೈನಮೋಸ್ ಎದುರು ಡಲ್ಲಾದ ಪುಣೆ ಸಿಟಿ

ಪುಣೆ, ಫೆಬ್ರವರಿ 25: ಲಾಲಿಯಾನ್ಜುವಾಲಾ (17ನೇ ನಿಮಿಷ), ರೋಮಿಯೊ ಫೆರ್ನಾಂಡೀಸ್ (30ನೇ ನಿಮಿಷ) ಡೇನಿಯಲ್ ಲಾಲ್ಹಿಂಪುಯ (52ನೇ ನಿಮಿಷ) ಗಳಿಸಿದ ಗೋಲಿನಿಂದ ಡೆಲ್ಲಿ ಡೈನಮೋಸ್ ತಂಡ ಆತಿಥೇಯ ಪುಣೆ ಸಿಟಿ ವಿರುದ್ಧ 3-1 ಗೋಲಿನಿಂದ ಜಯ ಗಳಿಸಿ ಗೌರವ ಕಾಯ್ದುಕೊಂಡಿತು. ಪುಣೆ ಪರ ನಿಖಿಲ್ ಪೂಜಾರಿ 23ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಇತ್ತಂಡಗಳಿಗೆ ಮೊದಲ 45 ನಿಮಿಷಗಳ ಅವಧಿಯಲ್ಲಿ ಸಾಕಷ್ಟು ಅವಕಾಶಗಳು ಕೂಡಿ ಬಂದಿತ್ತು. ಆದರೆ ಅದರ ಸದುಪಯೋಗ ಪಡೆಯುವಲ್ಲಿ ಡೆಲ್ಲಿ ಯಶಸ್ವಿಯಾಯಿತು. ಪರಿಣಾಮ ಪ್ರಥಮಾ'ರ್ದದಲ್ಲಿ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. 17ನೇ ನಿಮಿಷದಲ್ಲಿ ಡೆಲ್ಲಿ ಪರ ಲಾಲಿಯಾನ್ಜುವಾಲಾ ಛಾಂಗ್ಟೆ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ಮುನ್ನಡೆ ಕಂಡಿತು.

ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ
ಆದರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. 23ನೇ ನಿಮಿಷದಲ್ಲಿ ನಿಖಿಲ್ ಪೂಜಾರಿ ಗಳಿಸಿದ ಗೋಲಿನಿಂದ ಪುಣೆ ಸಮಬಲ ಸಾಧಿಸಿತು. ನಿಖಿಲ್ ಪೂಜಾರಿಯ ಗೋಲು ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿತು. 30ನೇ ನಿಮಿಷದಲ್ಲಿ ರೋಮಿಯೊ ಫೆರ್ನಾಂಡೀಸ್ ಗಳಿಸಿದ ಗೋಲಿನಿಂದ ಡೆಲ್ಲಿ ತಂಡ ಮೇಲುಗೈ ಸಾಧಿಸಿತು. ಆ ನಂತರವೂ ಇತ್ತಂಡಗಳಿಗೆ ಗೋಲು ಗಳಿಸುವ ಉತ್ತಮ ಅವಕಾಶ ಸಿಕ್ಕರೂ ಗೋಲು ದಾಖಲಾಗಲಿಲ್ಲ.

ಹಿಂದು ಮುಂದಿನ ಯೋಚನೆ ಇಲ್ಲ
ಇಂಡಿಯನ್ ಸೂಪರ್ ಲೀಗ್‌ನ 85ನೇ ಪಂದ್ಯಕ್ಕೆ ಹಿಂದು ಮುಂದಿನ ಯೋಚನೆ ಇಲ್ಲ. ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಎಫ್ಸಿ ಪುಣೆ ಸಿಟಿ ಹಾಗೂ ಡೆಲ್ಲಿ ಡೈನಮೋಸ್ ತಂಡಗಳು ಮುಖಾಮುಖಿಯಾದವು. ನಿರಂತರ ಕಳಪೆ ಪ್ರದರ್ಶನ ತೋರಿದ ಕಾರಣ ಇತ್ತಂಡಗಳು ಪ್ಲೇ ಆಫ್ ಬಸ್ಸನ್ನು ತಪ್ಪಿಸಿಕೊಂಡಿವೆ.

ಉತ್ತಮ ಹೋರಾಟ
ಸೋಲಿನ ನಂತರವೂ ಉತ್ತಮ ಹೋರಾಟ ನೀಡಿದ ಇತ್ತಂಡಗಳು ಇತ್ತೀಚಿನ ಪಂದ್ಯಗಳಲ್ಲಿ ಜಯದ ನಾಗಲೋಟ ಆರಂಭಿಸಿದವು. ಆದರೆ ಆಗಲೇ ಇತರ ತಂಡಗಳು ತಮ್ಮ ಸ್ಥಾನವನ್ನು ಕಬಳಿಸಿಕೊಂಡಿದ್ದವು. ಆತಿಥೇಯ ಪುಣೆ ತಂಡ ಕಳೆದ ಆರು ಪಂದ್ಯಗಳಲ್ಲಿ ಸೋಲನುಭವಿಸಿರಲಿಲ್ಲ, ರಾಜಧಾನಿಯ ತಂಡವೂ ಕಳೆದ ಐದು ಪಂದ್ಯಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದವು.

ಕುತೂಹಲ ಪಂದ್ಯ
ಮುಂದಿನ ಹಂತ ತಲುಪುವ ಉದ್ದೇಶ ಇಲ್ಲದಿದ್ದರೂ ಈ ಪಂದ್ಯ ಮಾತ್ರ ಅತ್ಯಂತ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ. ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಡೆಲ್ಲಿ ತಂಡ ಪುಣೆ ವಿರುದ್ಧ 4-1ರ ಹಿನ್ನಡೆ ಕಂಡಿರಬಹುದು, ಆದರೆ ಡೆಲ್ಲಿ ತಂಡದ ಇತ್ತೀಚಿನ ಸಾಧನೆಯನ್ನು ಗಮನಿಸಿದಾಗ ಪುಣೆಯನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಋತುವಿನ ಆರಂ‘ದಲ್ಲಿ ನಡೆದ ಪಂದ್ಯದಲ್ಲಿ ಇತ್ತಂಡಗಳು ಅಂಕ ಹಂಚಿಕೊಂಡಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications