ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಗೋವಾ ಚಿತ್ತ

By Isl Media
ISL 2019: FC Goa target second spot

ಗೋವಾ, ಫೆಬ್ರವರಿ 27: ಗುರುವಾರ (ಫೆಬ್ರವರಿ 28) ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಗೋವಾ ತಂಡ ಪ್ರವಾಸಿ ಚೆನ್ನೈಯಿನ್ ವಿರುದ್ಧ ಜಯ ಗಳಿಸಿ ಎರಡನೇ ಸ್ಥಾನದೊಂದಿಗೆ ಪ್ಲೇ ಆಫ್ ಆಡುವ ಗುರಿ ಹೊಂದಿದೆ.

ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿರರುವ ಸರ್ಗಿಯೊ ಲೆಬೆರಾ ಪಡೆ ಚೆನ್ನೈ ವಿರುದ್ಧ ಜಯ ಗಳಿಸಿ, ಪ್ಲೇ ಆಫ್ ಗೆ ಸಜ್ಜಾಗುವ ಯೋಜನೆ ಹಾಕಿಕೊಂಡಿದೆ. ಆಕ್ರಮಣಕಾರಿ ಆಟ ಹಾಗೂ ಸಲಿಸಾಗಿ ಗೋಲು ಗಳಿಸುವ ಗೋವಾ ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ತಂಡವೆನಿಸಿದೆ. ತಂಡದ ಯಶಸ್ಸಿನಲ್ಲಿ ಫೆರಾನ್ ಕೊರೊಮಿನಾಸ್ ಹಾಗೂ ಎಡು ಬೇಡಿಯಾ ಪ್ರಮುಖ ಪಾತ್ರವಹಿಸಿರುತ್ತಾರೆ.

1
1042973

ಗೋವಾ ತಂಡ ಪ್ಲೇ ಆ್ ಹಂತ ತಲುಪಲು ತಂಡದ ಡಿಫೆನ್ಸ್ ವಿಭಾಗದ ಯಶಸ್ಸು ಕೂಡ ಪ್ರಮುಖ ಕಾರಣವಾಗಿದೆ. ಬೆಂಗಳೂರು ವಿರುದ್ಧ 0-3 ಅಂತರದಲ್ಲಿ ಸೋಲನುಭವಿಸಿದರೂ ಗೋವಾ ತಂಡ ಐದು ಕ್ಲೀನ್ ಶೀಟ್ ಸಾಧನೆ ಮಾಡಿದೆ. 'ಈ ಋತುವಿನ ಆರಂಭದಲ್ಲಿ ತಂಡದ ಡಿಫೆನ್ಸ್ ವಿಭಾಗವನ್ನು ಉತ್ತಮಪಡಿಸುವುದು ನನ್ನ ಮುಖ್ಯ ಗುರಿಯಾಗಿತ್ತು. ಈಗ ಆತಿ ಹೆಚ್ಚು ಕ್ಲೀನ್ ಶೀಟ್ ಸಾಧನೆ ಮಾಡಿದ ತಂಡಗಳಲ್ಲಿ ನಮ್ಮ ತಂಡ ಕೂಡ ಒಂದು. ಅದೇ ರೀತಿ ನಮ್ಮ ತಂಡ ಗೋಲ್ ವ್ಯತ್ಯಾಸದಲ್ಲೂ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದ ನನ್ನ ಗುರಿ ತಲುಪ್ದಿದೇನೆಂಬ ತೃಪ್ತಿ ಇದೆ. ಎರಡು ಪಂದ್ಯಗಳು ಬಾಕಿ ಇರುವಾಗಲೇ ನಾವು ಪ್ಲೇ ಆ್ ಹಂತವನ್ನು ತಲುಪಿದವೆ,' ಎಂದು ತಂಡದ ಕೋಚ್ ಲೊಬೆರಾ ಹೇಳಿದ್ದಾರೆ.

ಸೆನೆಗಲ್‌ನ ಡಿಫೆಂಡರ್ ಮೌರ್ತಾದ ಫಾಲ್ ಹಾಗೂ ಮೊರಾಕ್ಕೊದ ಆಟಗಾರ ಅಮ್ಮದ್ ಜಾಹೌ ಕೂಡ ಈ ಡಿಫೆನ್ಸ್ ವಿಭಾಗದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರರೆ. ಕಳೆದ ಬಾರಿಯ ಚಾಂಪಿಯನ್ ಚೆನ್ನೆ'ಯಿನ್ ತಂಡ ಕೊನೆಯ ಸ್ಥಾನದಲ್ಲಿದ್ದು, ಅಂತಿಮ ಮುಜುಗರದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಲಿದೆ. ಅಂಕದಲ್ಲಿ ಎರಡಂಕೆಯನ್ನು ತಲಪುವ ಗುರಿ ಹೊಂದಿದ್ದು, ಇದು ಅಸಾಧ್ಯವಾದರೆ ತಂಡ ಮತ್ತಷ್ಟು ಮುಜುಗರಕ್ಕೆ ಈಡಾಗುವುದು ಸ್ಪಷ್ಟ.

ಭಾರತ vs ಪಾಕಿಸ್ತಾನ: ಎಲ್ಲಾ ಪಂದ್ಯಗಳೂ ಮುಖ್ಯ ಎಂದ ಜೂಲನ್ ಗೋಸ್ವಾಮಿಭಾರತ vs ಪಾಕಿಸ್ತಾನ: ಎಲ್ಲಾ ಪಂದ್ಯಗಳೂ ಮುಖ್ಯ ಎಂದ ಜೂಲನ್ ಗೋಸ್ವಾಮಿ

ಒಂಬತ್ತು ಅಂಕಗಳನ್ನು ಗಳಿಸಿರುವ ಚೆನ್ನೆ' ತಂಡಕ್ಕೆ ಈಗ ಕೊನೆಯ ಸ್ಥಾನವೇ ಗತಿ ಎನಿಸಿದೆ. ಒಂದು ವೇಳೆ ಗೋವಾ ವಿರುದ್ಧ ಜಯ ಗಳಿಸದಿದ್ದರೆ, ಐಎಸ್‌ಎಲ್ ಇತಿಹಾಸದಲ್ಲೇ ಅತಿ ಕಡಿಮೆ ಅಂಕ ಪಡೆದ ತಂಡವೆನಿಸಲಿದೆ. ಇಲ್ಲಿ ಗೆದ್ದು ಮುಂಬರುವ ಎಎಫ್ಸಿ ಕಪ್‌ನಲ್ಲಿ ಸ್ಫೂರ್ತಿದಾಯಕ ಆಟ ಪ್ರದರ್ಶಿಸುವ ಗುರಿಯೂ ಚೆನ್ನೆ' ತಂಡದ ಮೇಲಿದೆ. 'ಗೋವಾ ವಿರುದ್ಧ ಗೆದ್ದರೆ ಖುಷಿಯಾಗಲಿದೆ. ಈ ಋತುವಿನಲ್ಲಿ ಜಯ ಗಳಿಸಲು ನಮಗೆ ಸಾಕಷ್ಟು ಅವಕಾಶವಿದ್ದಿತ್ತು. ಆದರೆ ಹಲವಾರು ಸಮಸ್ಯೆಗಳನ್ನು ಎದುರಿಸಿ ನಾವು ಕೊನೆಯ ಸ್ಥಾನಕ್ಕಿಳಿಯಬೇಕಾಯಿತು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲಿಯೂ ಆಟವಾಡಿಲ್ಲ,' ಎಂದು ಗ್ರೆಗೋರಿ ಹೇಳಿದ್ದಾರೆ.

Story first published: Wednesday, February 27, 2019, 22:52 [IST]
Other articles published on Feb 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X