For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮುಂಬೈಗೆ ಮನೆಯಲ್ಲೇ ಮತ್ತೊಂದು ಆಘಾತ ನೀಡಿದ ಗೋವಾ

ISL 2019: Five-star Goa blow Mumbai away

ಮುಂಬೈ ಮಾರ್ಚ್ 10: ಜಾಕಿಚಂದ್ ಸಿಂಗ್ (31ನೇ ನಿಮಿಷ ), ಮೌರ್ತಾದಾ ಫಾಲ್ ( 39 ಹಾಗೂ 58 ನೇ ನಿಮಿಷ ), ಫರಾನ್ ಕೊರೊಮಿನಾಸ್ (51ನೇ ನಿಮಿಷ ), ಬ್ರೆನ್ದಾನ್ ಫೆರ್ನಾಂಡಿಸ್ (82ನೇ ನಿಮಿಷ ) ಅವರ ಅದ್ಭುತ ಗೋಲುಗಳ ನೆರವಿನಿಂದ ಗೋವಾ ತಂಡ ಮುಂಬೈ ಸಿಟಿ ಎಫ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಎರಡನೇ ಸೆಮಿಫೈನಲ್ ನ ಮೊದಲ ಹಂತದ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅದ್ಭುತ ಸಾಧನೆ ಮಾಡಿದೆ.

ಈ ಮೂಲಕ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ 152ನೇ ಗೋಲು ಗಳಿಸಿ ದಾಖಲೆ ಬರೆಯಿತು. ಫರಾನ್ ಕೊರೊಮಿನಾಸ್ ವೈಯಕ್ತಿಕ ಗೋಲುಗಳ ಸಂಖ್ಯೆಯನ್ನು 16ಕ್ಕೆ ಏರಿಸಿಕೊಂಡರು. ಮುಂಬೈ ಪರ ರೊಲ್ ಬಾಸ್ಟೋಸ್ 20ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ರೋಚಕ ಪ್ರಥಮಾರ್ಧ :ಮುಂಬೈ ತಂಡದ ಪರ ರೊಲ್ ಬಾಸ್ಟೋಸ್ 20ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಆತಿಥೇಯರಿಗೆ ಆರಂಭದಲ್ಲೇ ಮುನ್ನಡೆ. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ, 31ನೇ ನಿಮಿಷದಲ್ಲಿ ಜಾಕಿಚಂದ್ ಸಿಂಗ್ ಗಳಿಸಿದ ಗೋಲಿನಿಂದ ಗೋವಾ ತಂಡ ಸಮಬಲ ಸಾಧಿಸಿತು.

ಗೋವಾದ ಆಕ್ರಮಣಕಾರಿ ಆಟದ ಪರಿಣಾಮ

ಗೋವಾದ ಆಕ್ರಮಣಕಾರಿ ಆಟದ ಪರಿಣಾಮ

ಗೋವಾದ ಆಕ್ರಮಣಕಾರಿ ಆಟದ ಪರಿಣಾಮ ತಂಡಕ್ಕೆ 39ನೇ ನಿಮಿಷದಲ್ಲಿ ಮತ್ತೊಂದು ಗೋಲಿನ ಸಂಭ್ರಮ. ಈ ಬಾರಿ ಮೌರ್ತಾದಾ ಫಾಲ್ ಅವರ ಗಳಿಸಿದ ಗೋಲು ಗೋವಾ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಇದರೊಂದಿಗೆ ಪ್ರವಾಸಿ ಗೋವಾ ತಂಡ ಪ್ರಥಮಾರ್ಧದಲ್ಲಿ 2-1 ಗೋಲುಗಳಿಂದ ಮೇಲುಗೈ ಕಂಡಿತು.

ಎರಡನೇ ಸೆಮಿಫೈನಲ್ ನ ಮೊದಲ ಹಂತದ ಪಂದ್ಯ

ಎರಡನೇ ಸೆಮಿಫೈನಲ್ ನ ಮೊದಲ ಹಂತದ ಪಂದ್ಯ

ಹೀರೋ ಇಂಡಿಯನ್ ಸೂಪರ್ ಲೀಗ್‌ನ ಎರಡನೇ ಸೆಮಿಫೈನಲ್ ನ ಮೊದಲ ಹಂತದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾದವು. ಆತಿಥೇಯ ಮುಂಬೈ ತಂಡ ಲೀಗ್ ಹಂತದ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಆದರೆ ಕೊನೆಯ ಹಂತದವರೆಗೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅಂತಿಮ ಐದು ಪಂದ್ಯಗಳಲ್ಲಿ ಮುಂಬೈ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ. ಸೆಮಿಫೈನಲ್ ತಲುಪಿರುವ ತಂಡಗಳಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸೋಲನುಭವಿಸಿರುವುದು ಮುಂಬೈ.

ಐಎಸ್ಎಲ್ 2019: ಕೊನೆ ಪಂದ್ಯದಲ್ಲೂ ಸೋಲು, ಚೆನ್ನೈಗೆ ಕೊನೆಯ ಸ್ಥಾನ

ಗೋವಾ, ಮನೆಯಂಗಣದಲ್ಲಿ ಎರಡು ಪಂದ್ಯಗಳಲ್ಲಿ ಸೋತಿದೆ

ಗೋವಾ, ಮನೆಯಂಗಣದಲ್ಲಿ ಎರಡು ಪಂದ್ಯಗಳಲ್ಲಿ ಸೋತಿದೆ

ಆದರೆ ಮನೆಯಂಗಣದ ಪಂದ್ಯಗಳಲ್ಲಿ ಮುಂಬೈ ಇದುವರೆಗೂ ಅದ್ಭುತ ಪ್ರದರ್ಸನ ತೋರಿದೆ. ಮನೆಯಂಗಣದಲ್ಲಿ ಮುಂಬೈ ಗೋವಾದ ರೀತಿ ಅತಿ ಹೆಚ್ಚು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಆದರೆ ಗೋವಾ ವಿರುದ್ಧ ಮನೆಯಂಗಣದಲ್ಲಿ ಎರಡು ಪಂದ್ಯಗಳಲ್ಲಿ ಸೋತಿರುವುದು ಗಮನಾರ್ಹ. ಸೋತಿರುವುದರಲ್ಲಿ ದೊಡ್ಡ ಸೋಲು ಗೋವಾದ ವಿರುದ್ಧವೇ ಸಿಕ್ಕಿದೆ. ಈಗ ಮುಂಬೈಗೆ ಗೆಲ್ಲುವುದರ ಜತೆಯಲ್ಲಿ ಸೇಡು ತೀರಿಸಿಕೊಳ್ಳುವ ಗುರಿಯೂ ಇದೆ. ಮೌಡೌ ಸೊಗೌ ಇದುವರೆಗೂ 12 ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

ಗೋವಾ ಅತ್ಯಂತ ಬಲಿಷ್ಠ ತಂಡವೆನಿಸಿದೆ

ಗೋವಾ ಅತ್ಯಂತ ಬಲಿಷ್ಠ ತಂಡವೆನಿಸಿದೆ

ಗೋವಾ ತಂಡ ಈ ಬಾರಿಯ ಬಲಿಷ್ಠ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಅಟ್ಯಾಕ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಗೋವಾ ಎತ್ತಿದ ಕೈ. 36 ಗೋಲುಗಳನ್ನು ಗಳಿಸಿರುವ ತಂಡದ ಪರ ಫೆರಾನ್ ಕೊರೊಮಿನಾಸ್ 15 ಗೋಲುಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೋವಾ ಏಳು ಗೋಲುಗಳನ್ನು ಗಳಿಸಿ ಪ್ರಭುತ್ವ ಸಾಧಿಸಿದೆ. ಸೆಮಿಫೈನಲ್ ತಲುಪಿರುವ ತಂಡಗಳಲ್ಲಿ ಗೋವಾ ಅತ್ಯಂತ ಬಲಿಷ್ಠ ತಂಡವೆನಿಸಿದೆ. ಲೀಗ್ ಹಂತದ ಕೊನೆಯ ಐದು ಪಂದ್ಯಗಳಲ್ಲಿ ಗೋವಾ ಒಮ್ಮೆ ಮಾತ್ರ ಸೋತಿದೆ. ಗೋವಾ ಮನೆಯಂಗಣದಿಂದ ಹೊರಗಡೆ ನಡೆದ ಪಂದ್ಯಗಳಲ್ಲಿ ಗೋವಾ ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾಗಿದೆ.

Story first published: Sunday, March 10, 2019, 10:43 [IST]
Other articles published on Mar 10, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+