For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಗೋವಾದ ಗೋಲಿನ ಮಳೆಯಲ್ಲಿ ಮುಳುಗಿದ ಮುಂಬೈ

By Isl Media
ISL 2019: Goa on top in a six-goal thriller

ಮುಂಬೈ, ನವೆಂಬರ್ 7: ಲೆನ್ನಿ ರೊಡ್ರಿಗಸ್ (27ನೇ ಫೆರಾನ್ ಕೊರೊಮಿನಾಸ್ (45ನೇ ನಿಮಿಷ) ಹ್ಯೂಗೋ ಭೌಮಾಸ್ (59ನೇ ನಿಮಿಷ) ಮತ್ತು ಕಾರ್ಲೋಸ್ ಗೊನ್ಸಾಲಿಸ್ ಪೆನ್ನಾ (89ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಲಯಕ್ಕೆ ಮರಳಿದೆ. ಮುಂಬೈ ಸಿಟಿ ಎಫ್ ಸಿ ಪರ ಸಾರ್ಥಕ್ ಗೌಳಿ (49ನೇ ನಿಮಿಷ) ಹಾಗೂ ಸೌವಿಕ್ ಚಕ್ರವರ್ತಿ (55ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ತಿರುಗೇಟು ನೀಡಿದ ಗೋವಾ
ಪ್ರಥಮಾರ್ಧದಲ್ಲಿ ಗೋವಾ ತಂಡ ಮೇಲುಗೈ ಸಾಧಿಸಿದರೆ ದ್ವಿತೀಯಾರ್ಧದ ಆರಂಭದಲ್ಲಿ ಗೋವಾ ಆರಂಭದಲ್ಲೇಎರಡು ಗೋಲು ಗಳಿಸಿ ಸಮಬಲ ಸಾಧಿಸಿತು. 49ನೇ ನಿಮಿಷದಲ್ಲಿ ಸಾರ್ಥಕ್ ಗೌಳಿ ಹಾಗೂ 55ನೇ ನಿಮಿಷದಲ್ಲಿ ಸೌವೀಕ್ ಚಕ್ರವರ್ತಿ ಗಳಿಸಿದ ಗೋಲು ಪಂದ್ಯವನ್ನು 2-2 ಗೋಲಿನಿಂದ ಸಮಬಲಗೊಳಿಸಿತು. ದ್ವಿತೀಯಾರ್ಧದಲ್ಲಿ ಮುಂಬೈ ತಂಡ ಪ್ರಥಮಾರ್ಧದ ತಂಡವಾಗಿ ಕಾಣಲಿಲ್ಲ. ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅದ್ಭುತ ಪ್ರದರ್ಶನ ತೋರಿತು.

ಗೋವಾಕ್ಕೆ ಮುನ್ನಡೆ
ನಿರೀಕ್ಷೆಯಂತೆ ಎಫ್ ಸಿ ಗೋವಾ ತಂಡ ಮುಂಬೈ ವಿರುದ್ಧ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿತು. 27 ನೇ ನಿಮಿಷದಲ್ಲಿ ಲೆನ್ನಿ ರೊಡ್ರಿಗಸ್ ಗಳಿಸಿದ ಗೋಲಿನಿಂದ ಗೋವಾ ತಂಡ ಮೇಲುಗೈ ಸಾಧಿಸಿತು, ಪ್ರಥಮಾರ್ಧದ ಕೊನೆಯಯ ಕ್ಷಣದಲ್ಲಿ ಅಂದರೆ 45 ನೇ ನಿಮಿಷದಲ್ಲಿ ಫರಾನ್ ಕೊರೊಮಿನಾಸ್ ತಂಡದ ಪರ ಎರಡನೇ ಗೋಲು ಗಳಿಸಿ ಬೃಹತ್ ಮುನ್ನಡೆ ನೀಡಿದರು. ಗೋವಾ ತಂಡ ಪಂದ್ಯದ ಪ್ರತಿಯೊಂದು ವಿಭಾಗದಲ್ಲೂ ಮೇಲುಗೈ ಸಾಧಿಸಿತು. ಆರಂಭದಲ್ಲಿ ಇತ್ತಂಡಗಳು ಅವಕಾಶವನ್ನು ಸೃಷ್ಟಿಸಿರಲಿಲ್ಲ. ಆದರೆ ಪಥಮಾರ್ಧದ ಅರ್ಧದಲ್ಲಿ ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನಮಾಡಿದವು. ರೊಡ್ರಿಗಸ್ ಹಾಗೂ ಕೊರೊಮಿನಾಸ್ ಗೋಲು ಗಳಿಸಿದ ನಂತರ ಡೀಗೊ ಕಾರ್ಲೋಸ್ ಅವರಿಗೆ ಉತ್ತಮ ಅವಕಾಶ ಸಿಕ್ಕಿತ್ತು ಆದರೆ ಮುಂಬೈಗೆ ಅಲ್ಲಿ ಅದೃಷ್ಟ ಇರಲಿಲ್ಲ.

ISL 2019: Goa on top in a six-goal thriller

ಹೀರೋ ಇಂಡಿಯನ್ ಸೂಪರ್ ಲೀಗ್ ನ 17ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಂಬೈ ಫುಟ್ಬಾಲ್ ಅರೇನಾ ದಲ್ಲಿ ಮುಂಖಾಮುಖಿಯಾದವು. ಹೊಸ ಕೋಚ್ ಜಾರ್ಜ್ ಕೋಸ್ಟಾ ಅವರ ಪಾಳಯದಲ್ಲಿ ಮಿಂಚುತ್ತಿರುವ ಮುಂಬೈ ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿದೆ. ಆದರೆ ನಂತರದ ಎರಡು ಪಂದ್ಯಗಳಲ್ಲಿ ಅದೇ ರೀತಿಯ ಪ್ರದರ್ಶನ ತೋರುವಲ್ಲಿ ತಂಡ ವಿಫಲವಾಗಿತ್ತು,. ಹೊಸ ತಂಡ ಒಡಿಶಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಸೋತಿರುವುದು ಮುಂಬೈ ಸಾಮರ್ಥ್ಯವನ್ನು ಪ್ರಶ್ನಿಸುವಂತಿತ್ತು. ತಂಡದಲ್ಲಿ ರೌಲಿನ್ ಬೋರ್ಗೆಸ್ ಹಾಗೂ ಮ್ಯಾಟೋ ಗ್ರಗಿಕ್ ಅವರ ಅನುಪಸ್ಥಿತಿ ಕಾಡಲಿದೆ. ಇದು ಮುಂಬೈ ತಂಡದಲ್ಲಿ ದೊಡ್ಡ ಅಂತರವನ್ನೇ ನಿರ್ಮಿಸಲಿದೆ. ಮುಂಬೈಗೆ ಈಗ ಇದ್ದವರೇ ಗತಿಯಾಗಿದೆ.

ಗೋವಾ ತಂಡ ಕೂಡ ಚೆನ್ನೈಯಿನ್ ಎಫ್ ಸಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆದ್ದು ಶುಭಾರಂಭ ಕಂಡಿತ್ತು, ಆದರೆ ನಂತರದ ಎರಡೂ ಪಂದ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಸೋಲಿನಿಂದ ಪಾರಾಗಿತ್ತು, ಮನ್ವಿರ್ ಸಿಂಗ್ ಗೋವಾದ ಪರ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದಾರೆ, ಅದೇ ರೀತಿ ಫರಾನ್ ಕೊರೊಮಿನಾಸ್, ಸ್ಪೇನ್ ನ ಆಟಗಾರ ಮುಂಬೈ ವಿರುದ್ಧ ಆರು ಪಂದ್ಯಗಳಲ್ಲಿ ಐದು ಗೋಲು ಗಳಿಸಿರುತ್ತಾರೆ. ಮುಂಬೈ ಕೋಚ್ ತಮ್ಮ ತಂಡ ಹಿಂದಿನ ಪ್ರಮಾದಗಳನ್ನು ಪುನರಾವರ್ತನೆ ಮಾಡುವುದಿಲ್ಲ ಎಂದಿದ್ದಾರೆ.

Story first published: Thursday, November 7, 2019, 23:04 [IST]
Other articles published on Nov 7, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+