For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಫುಟ್ಬಾಲ್ ಮೂಲಕ ರಂಜಿಸಲು ಒಡಿಶಾ, ಜೇಮ್ಶೆಡ್ಪುರ ಸಜ್ಜು

By Isl Media
ISL 2019: Jamshedpur, Odisha keen to entertain

ಜೇಮ್ಶೆಡ್ಪುರ, ಅಕ್ಟೋಬರ್ 22: ಮೂರನೇ ಬಾರಿಗೆ ಐಎಸ್ ಎಲ್ ನಲ್ಲಿ ಸ್ಪರ್ಧಿಸುತ್ತಿರುವ ಜೇಮ್ಶೆಡ್ಪುರ ಕಳೆದ ಎರಡು ಋತುಗಳಲ್ಲಿ ಪಾಲಿ ಆಫ್ ಹಂತದಿಂದ ಅಲ್ಪ ಅಂತರದಲ್ಲಿ ವಂಚಿತವಾಗಿದ್ದು ಈ ಬಾರಿ ಆ ಸ್ಥಾನವನ್ನು ತಲಪುವ ಗುರಿ ಹೊಂದಿದೆ. ಉಕ್ಕಿನ ಪಡೆ ಮಂಗಳವಾರ ಜೆಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಒಡಿಶಾ ಎಫ್ ಸಿ ವಿರುದ್ಧ ಋತುವಿನ ಮೊದಲ ಪಂದ್ಯವನ್ನು ಆಡಲಿದೆ.

ಕಳೆದ ಋತುವಿನಲ್ಲಿ ಎರಡು ಪ್ರಧಾನ ಕೋಚ್ ಗಳನ್ನು ಹೊಂದಿದ್ದ ಜೇಮ್ಶೆಡ್ಪುರಕ್ಕೆ ಇಬ್ಬರು ತಮ್ಮದೇ ಆದ ಆಟದ ಶೈಲಿಯನ್ನು ಪರಿಚಯಿಸಿದ್ದರು. ಈಗ ಸ್ಪೇನ್ ನ ಅಂಟೋನಿಯೋ ಇರಿಯೊಂಡೊ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಪ್ರೇಕ್ಷಕರು ಆಕ್ರಮಣಕಾರಿ ಆಟವನ್ನು ನಿರೀಕ್ಷಿಸುತ್ತಿದ್ದಾರೆ.

''ಎದುರಾಳಿಗಳು ಆಕ್ರಮಣಕಾರಿ ಆಟಕ್ಕೆ ಮುಂದಾದಾಗ ನಾವು, ಅದನ್ನು ಸಮರ್ಥಿಸಿಕೊಳ್ಳಲು ಯತ್ನಿಸುವೆವು ಆದರೆ ನಮ್ಮ ಮುಖ್ಯ ಗುರಿ 90 ನಿಮಿಷಗಳ ಕಾಲವೂ ಚೆಂಡನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ನಮಗೆ ಎಲ್ಲಕ್ಕಿಂತ ಮುಖ್ಯವಾದುದು ನಮ್ಮ ಆಟದ ಶೈಲಿಯ ಮೂಲಕ ನಮ್ಮ ಅಭಿಮಾನಿಗಳನ್ನು ಖುಷಿಗೊಳಿಸುವುದು.
ಸ್ಪೇನ್ ಮೂಲದ ಇಬ್ಬರು ಆಟಗಾರರಾದ ಮಾರಿಯೋ ಆರ್ಕ್ಯೂಸ್ ಹಾಗೂ ಸರ್ಗಿಯೋ ಸಿಡಾನ್ಛ್ ಅವರ ಸ್ಥಾನವನ್ನು ತುಂಬುವುದು, ಈ ಇಬ್ಬರೂ ಆಟಗಾರರು ಕೇರಳ ಬ್ಲಾಸ್ಟರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೂ ಸಿ. ಕೆ. ವಿನೀತ್ ಅವರಿಂದ ತಂಡದ ಮನೋಬಲ ಹೆಚ್ಚಿರುವುದು ಸ್ಪಷ್ಟ. ವಿನೀತ್ ಐಎಸ್ ಎಲ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರಲ್ಲಿ ಮೂರನೇ ಸ್ಥಾನದಲ್ಲಿದ್ದರೆ. ವಿದೇಶಿ ಆಟಗಾರರಾದ ಫ್ರಾನ್ಸಿಸ್ಕೋ ಪಿಟಿ ಲೂನಾ ಹಾಗೂ ನೋಯ್ ಆಕ್ಸೋಟ್ ಅವರ ಸ್ಥಾನದಲ್ಲಿ ಮೆಮೊ ಮತ್ತು ತಿರಿ ತಂಡಕ್ಕೆ ಆಧಾರವಾಗಿದ್ದರೆ.

''ಮೊದಲ ಪಂದ್ಯದಲ್ಲಿ ಗೆಲ್ಲುವುದು ಮುಖ್ಯವಾಗಿದೆ, ಆದರೆ ಇದು ಅತ್ಯಂತ ಅಧೈರ್ಯ ತರುವಂತ ಸ್ಥಿತಿ. ಆಟಗಾರರು ಅತ್ಯಂತ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಂಗಣದಲ್ಲಿ ಹೇಗೆ ಆಡಬೇಕು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ,'' ಎಂದು ಕೋಚ್ ಹೇಳಿದ್ದಾರೆ.

ಜೋಸೆಫ್ ಗುಂಬಾವ್ ಅವರ ತಂಡ ಡೆಲ್ಲಿ ಡೈನಮೋಸ್ ಕೇವಲ ಎಂಟನೇ ಸ್ಥಾನವನ್ನು ಗಳಿಸಿತ್ತು, ಆದರೆ ಅತ್ಯಂತ ಕುತೂಹಲಕಾರಿಯಾದ ಆಟವನ್ನು ಆಡುವ ಆಟಗಾರರು ತಂಡದಲ್ಲಿದ್ದಾರೆ, ಡೆಲ್ಲಿ ಡೈನಮೋಸ್ ಈಗ ಭುವನೇಶ್ವರವನ್ನು ತನ್ನ ಮನೆಯನ್ನಾಗಿಸಿಕೊಂಡಿದ್ದು, ಈಗ ಒಡಿಶಾ ಎಫ್ ಸಿ ಆಗಿ ಅಂಗಣಕ್ಕಿಳಿಯಲಿದೆ. ಅಂಗಣದಲ್ಲಿ ಉತ್ತಮ ಫಲಿತಾಂಶವನ್ನು ಕಾಣಲು ಗುಂಬಾವ್ ತನ್ನ ಯುವ ಆಟಗಾರೊಂದಿಗೆ ಸ್ಪೂರ್ತಿದಾಯಕ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ದಿಲ್ಲಿಯ ಸ್ಟಾರ್ ವಿಂಗರ್ ಲಿಯಂಜುವಾಲ ಚಾಂಗ್ಟೆ ಈಗ ಚೆನ್ನೈಯಿನ್ ಎಫ್ ಸಿ ಸೇರಿದ್ದಾರೆ, ಆದರೆ, ಡೇನಿಯಲ್ ಲಾಲಿಮ್ಪುಯ , ಜೆರ್ರಿ ಮೊವ್ಮಿಂಗ್ತಂಗ ಮತ್ತು ನಂದಕುಮಾರ್ ಶೇಖರ್ ಒಡಿಶಾದ ಫಾರ್ವರ್ಡ್ ವಿಭಾಗದ ಶಕ್ತಿ ಎನಿಸಿದ್ದಾರೆ.

''ಕಳೆದ ಋತು ಮುಗಿದ ಇತಿಹಾಸ. ಈಗ ನಾವು ಹೊಸ ಕ್ಲಬ್ ನಲ್ಲಿ ಪ್ರಯಾಣ ಆರಂಭಿಸಿದ್ದೇವೆ. ಮತ್ತು ಹೊಸ ನಗರ ಕೂಡ ಹೌದು. ಹೆಚ್ಚಿನ ಆಟಗಾರರು ಅವರೇ ಆಗಿದ್ದಾರೆ. ನಮ್ಮದು ಉತ್ತಮ ತಂಡವೆಂಬುದು ನನ್ನ ನಂಬಿಕೆ. ತಂಡವನ್ನು ಉತ್ತಮಗೊಳಿಸಲು ಎಲ್ಲಾ ರೀತಿಯ ಆಟಗಾರರನ್ನು ಸೇರಿಸಿಕೊಂಡಿದ್ದೇವೆ. ನಮ್ಮದು ಪರಿಪೂರ್ಣ ತಂಡ ಎಂಬುದು ನನ್ನ ನಂಬಿಕೆ,'' ಎಂದು ಗೊಂಬಾವ್ ಹೇಳಿದ್ದಾರೆ.

ಜೇಮ್ಶೆಡ್ಪುರ ವಿರುದ್ಧ ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವ ಗುರಿಯನ್ನು ಒಡಿಶಾ ಹೊಂದಿದೆ, ಎರಡೂ ತಂಡಗಳು ಒಂದೇ ರೀತಿಯ ಗುರಿಯಲ್ಲಿವೆ. ಇದರಿಂದ ಮಿಡ್ ಫೀಲ್ಡ್ ನಲ್ಲಿ ಹೆಚ್ಚು ಕುತೂಹಲ ಮನೆಮಾಡಲಿದೆ. ವಿನೀತ್ ರೈ ಹಾಗೂ ಮಾರ್ಕಸ್ ತಾಬೆರ್ ಒಡಿಶಾ ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

''ನಾವು ಸಾಕಷ್ಟು ಕುತೂಹಲದಲ್ಲಿದ್ದೇವೆ, ಉತ್ತಮ ಕೆಲಸ ಮಾಡುವುದು ನಮ್ಮ ಗುರಿಯಾಗಿದೆ. ನಮ್ಮ ಪಾಲಿಗೆ ಫುಟ್ಬಾಲ್ ಇರುವುದೇ ಸಂಭ್ರಮಿಸಲು. ಈ ಮನಸ್ಥಿತಿಯೊಂದಿಗೆ ನಾವು ಇಲ್ಲಿದ್ದೇವೆ,'' ಎಂದರು. ಈ ಪಂದ್ಯದಲ್ಲಿ ಸ್ಪೇನ್ ನ ಆಟದ ರುಚಿ ಸವಿಯಬಹುದು. ಇದು ಕೇವಲ ಇಬ್ಬರು ಸ್ಪೇನ್ ಕೋಚ್ ಗಳ ನಡುವಿನ ತಂತ್ರಗಾರಿಕೆಯ ಹೋರಾಟವಲ್ಲ, ಎರಡೂ ತಂಡದಲ್ಲೂ ಸ್ಪೇನ್ ಮೂಲದ ಆಟಗಾರರಿರುವುದು ಗಮನಾರ್ಹ. ಕ್ಸಿಸ್ಕೋ ಹೆರ್ನಾಡೀಸ್, ಅರಿದಾನೆ ಸಂತಾನ, ತಂಡದಲ್ಲಿದ್ದು, ಒಡಿಶಾ ತಂಡದಲ್ಲಿ ಐವರು ಸ್ಪೇನ್ ಮೂಲದ ಆಟಗಾರರಿದ್ದಾರೆ.

Story first published: Monday, October 21, 2019, 23:17 [IST]
Other articles published on Oct 21, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+