For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಕೊನೆಯ ಕ್ಷಣದಲ್ಲಿ ಅಂಕ ಗಳಿಸಿದ ಹೈದರಾಬಾದ್

By Isl Media
ISL 2019: Man down Hyderabad rescued by Robin

ಹೈದರಾಬಾದ್, ನವೆಂಬರ್ 29: ಬೆಂಗಳೂರು ಎಫ್‌ಸಿ ಪರ ನಾಯಕ ಸುನಿಲ್ ಚೆಟ್ರಿ ( 2ನೇ ನಿಮಿಷ) ಹಾಗೂ ಹೈದರಾಬಾದ್ ಎಫ್‌ಸಿ ಪರ ರಾಬಿನ್ ಸಿಂಗ್ (93ನೇ ನಿಮಿಷ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್ ಲೀಗ್ ನ 27ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿದೆ. ಹಿಂದೆ ಬೆಂಗಳೂರು ಎಫ್‌ಸಿ ಪರ ಆಡಿದ್ದ ರಾಬಿನ್ ಸಿಂಗ್ ತನ್ನ ಮಾಜಿ ತಂಡದ ಜಯವನ್ನು ಕೊನೆಯ ಕ್ಷಣದಲ್ಲಿ ಕಸಿದುಕೊಂಡರು. ಇದರಿಂದ ಅಗ್ರ ಸ್ಥಾನಕ್ಕೇರುವ ಬೆಂಗಳೂರು ಕನಸು ನನಸಾಗಲಿಲ್ಲ.

ಬೆಂಗಳೂರಿಗೆ ಮುನ್ನಡೆ
ನಾಯಕ ಸುನಿಲ್ ಛೆಟ್ರಿ 2 ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಬೆಂಗಳೂರು ತನ್ನ ಗೋಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಅವಕಾಶ ಇದ್ದಿತ್ತು. ಆದರೆ ಅವಕಾಶ ಕೈಚೆಲ್ಲಿತು. ಹೈದರಾಬಾದ್ ಉತ್ತಮ ರೀತಿಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸುವಲ್ಲಿ ವಿಫಲವಾಯಿತು. ಗೋಲನ್ನು ನಿಯಂತ್ರಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿತೇ ಹೊರತು ಗೋಲು ಗಳಿಸುವತ್ತ ಯತ್ನಿಸಿಲ್ಲ.

ಎರಡೇ ನಿಮಿಷದಲ್ಲಿ ಗೋಲು!
ಪಂದ್ಯ ಆರಂಭಗೊಂಡ ಎರಡೇ ನಿಮಿಷಗಳಲ್ಲಿ ಬೆಂಗಳೂರು ಎಫ್ ಸಿ ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಿ ಹೈದರಾಬಾದ್ ಗೆ ಆರಂಭಿಕ ಆಘಾತ ನೀಡಿದರು. ಗೋಲ್ ಕೀಪರ್ ಮಾಡಿದ ಪ್ರಮಾದ ಹಾಗೂ ಬ್ಯಾಕ್ ಲೇನ್ ಆಟಗಾರರ ವೈಫಲ್ಯ ಈ ಗೋಲು ಗಳಿಕೆಗೆ ಕಾರಣವಾಯಿತು. ಕಮಲ್ಜಿತ್ ಸಿಂಗ್ ಎಸೆದ ಚೆಂಡು ಲಲ್ದನ್ಮವಿಯಾ ರಾಲ್ತೆ ಅವರ ನಿಯಂತ್ರಣಕ್ಕೆಸಿಕ್ಕಿತು. ಇದು ನಾಯಕ ಹಾಗೂ ಗೋಲ್ ಕೀಪರ್ ಕಮಲ್ಜಿತ್ ಅವರ ಕಳಪೆ ಮಟ್ಟದ ಪಾಸ್ ಆಗಿತ್ತು. ಇದು ಬಾಕ್ಸ್ ಗೆ ಹತ್ತಿರವಾಗಿತ್ತು. ರಾಲ್ತೆ ಚೆಂಡನ್ನು ಡಿಫೆಂಡರ್ ಗೆ ಪಾಸ್ ಮಾಡಲು ಯತ್ನಿಸಿದರು. ಆದರೆ ಚೆಂಡು ಛೆಟ್ರಿ ಅವರ ನಿಯಂತ್ರಣಕ್ಕೆ ಸಿಕ್ಕಿತು. ಗೋಲ್ ಬಾಕ್ಸ್ ನ ಕಡೆಗೆ ಚೆಂಡನ್ನು ಕೊಂಡೊಯ್ದ ಛೆಟ್ರಿಗೆ ಅಡ್ಡಿ ಮಾಡುವವರು ಯಾರೂ ಇರಲಿಲ್ಲ. ಗೋಲ್ ಕೀಪರ್ ನನ್ನ ಸುಲಭವಾಗಿ ವಂಚಿಸಿದ ಛೆಟ್ರಿ ತಂಡಕ್ಕೆ ಮೊದಲ ಗೋಲು ತಂದಿತ್ತರು.

ಚೇತರಿಸುವ ಗುರಿಯಲ್ಲಿ ಹೈದರಾಬಾದ್
ಐದು ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿರುವ ಹೈದರಬಾದ್ ಎಫ್ ಸಿ ತಂಡಕ್ಕೆ ಬೆಂಗಳೂರು ಎಫ್ ಸಿ ವಿರುದ್ಧ ಜಯ ಗಳಿಸುವ ಅಗತ್ಯವಿದೆ. ಇದುವರೆಗೂ ಸೋಲು ಕಾಣದ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನ ೨೭ನೇ ಪಂದ್ಯದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮೇಲಕ್ಕೇರುವ ಗುರಿ ಬೆಂಗಳೂರು ಮುಂದಿದೆ. ಬೆಂಗಳೂರು ಎರಡು ಜಯ ಹಾಗೂ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಬೆಂಗಳೂರು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೇವಲ ಒಂದು ಜಯ ಕಂಡಿರುವ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.

ಹೈದರಾಬಾದ್ ನ ಡಿಫೆನ್ಸ್ ವಿಭಾಗ ಅಷ್ಟು ,ಉತ್ತಮವಾಗಿಲ್ಲ, ಇದುವರೆಗೂ ತಂಡ ಎದುರಾಳಿಗೆ ೧೨ ಗೋಲುಗಳನ್ನು ನೀಡಿದೆ. ಈಗ ಸುನಿಲ್ ಛೆಟ್ರಿ, ಉದಾಂತ್ ಸಿಂಗ್ ಹಾಗೂ ದಿಮಾಸ್ ಡೆಲ್ಗಡೊ ಅವರಂಥ ಅನುಭವಿ ಆಟಗಾರರನ್ನು ಹಿಮ್ಮೆಟ್ಟಿ ಗೋಲು ಗಳಿಸಬೇಕಾಗಿದೆ. ಹೈದರಾಬಾದ್ ತಂಡದಮಾರ್ಸೆಲೋ ಪೆರೇರಾ, ರಾಬಿನ್ ಸಿಂಗ್ ಮತ್ತು ಅಭಿಷೇಕ್ ಹಲ್ದರ್ ಇನ್ನೂ ತಮ್ಮ ನೈಜ ಆಟ ಪ್ರದರ್ಶಿಸಿಲ್ಲ.

Story first published: Friday, November 29, 2019, 22:55 [IST]
Other articles published on Nov 29, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+