ಐಎಸ್‌ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ

ಕೊಚ್ಚಿ, ಡಿಸೆಂಬರ್ 13: ಜೆಮ್ಶೆಡ್ಪುರ ಎಫ್‌ಸಿ ಪರ ಪಿಟಿ (38ನೇ ನಿಮಿಷ) ಮತ್ತು ಸಿಕೆ ವಿನೀತ್ (71ನೇ ನಿಮಿಷ) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಮೆಸ್ಸಿ ಬೌಲಿ (75ನೇ ಮತ್ತು 87ನೇ ನಿಮಿಷ) ಅವರು ಗಳಿಸಿದ ಗೋಲುಗಳ ನೆರವನಿಂದ ಇಂಡಿಯನ್ ಸೂಪರ್ ಲೀಗ್ ನ 37ನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು. ಎರಡೂ ತಂಡಗಳಲ್ಲಿ ತಲಾ ಒಂದು ಗೋಲು ಪೆನಾಲ್ಟಿಯಿಂದ ದಾಖಲಾಗಿರುವುದು ವಿಶೇಷ. ಜೆಮ್ಶೆಡ್ಪುರ ಇಲ್ಲಿ ಜಯ ಗಳಿಸಿರುತ್ತಿದ್ದರೆ ಅಗ್ರ ಸ್ಥಾನ ತಲುಪಿರುತ್ತಿತ್ತು ಆದರೆ ಅಂಕ ಹಂಚಿಕೊಂಡ ಕಾರಣ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಜೆಮ್ಶೆಡ್ಪುರ ಮುನ್ನಡೆ
38ನೇ ನಿಮಿಷದಲ್ಲಿ ಪಿಟಿ ಪೆನಾಲ್ಟಿ ಶೂಟ್ ನಿಂದ ಗಳಿಸಿದ ಗೋಲಿನಿಂದ ಮೇಲುಗೈ ಸಾಧಿಸಿದ ಪ್ರವಾಸಿ ಜೆಮ್ಶೆಡ್ಪುರ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಒಂದು ಗೋಲಿನಿಂದ ಮೇಲುಗೈ ಸಾಧಿಸಿತು. ಪ್ರಥಮಾರ್ಧದಲ್ಲಿ ಗೋಲು ಗಳಿಸಿರುವುದು ಮಾತ್ರವಲ್ಲ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಹಾಗೆ ನೋಡಿದರೆ ಕೇರಳ ಬ್ಲಾಸ್ಟರ್ಸ್ ತಂಡ ಮೊದಲ ಅವಕಾಶ ಪಡೆದಿತ್ತು. ಹೆಡರ್ ಮೂಲಕ ಗೋಲು ಗಳಿಸಬೇಕಾಗಿದ್ದ ಮಾರಿಯೋ ಆರ್ಕ್ಯೂಸ್ ಗುರಿ ತಪ್ಪಿ ನೇರವಾಗಿ ಗೋಲ್ ಕೀಪರ್ ಗೆ ಚೆಂಡು ಸಿಗುವಂತೆ ಮಾಡಿದ್ದಾರೆ. ಮತ್ತೆ ಅವಕಾಶ ಸಿಗಲಿಲ್ಲ. ತಿರಿ ಗಳಿಸಿದ ಪೆನಾಲ್ಟಿ ಯನ್ನು ಪಿಟಿ ಗೋಲಾಗಿ ಪರಿವರ್ತಿಸಿದರು. ಟಾಟಾ ಪಡೆಯ ಮೊದಲಾರ್ಧದ ಆಟವನ್ನು ಗಮನಿಸಿದಾಗ ದ್ವಿತೀಯಾರ್ಧದಲ್ಲಿ ಮತ್ತೆ ಗೋಲಾಗುವ ಸಾಧ್ಯತೆ ಹೆಚ್ಚಿದೆ.

ಅಗ್ರ ಸ್ಥಾನ ತಲುಪೀತೆ ಟಾಟಾ ಪಡೆ
ಜಯದ ಹಾದಿ ಕಾಣದೆ ಕಂಗೆಟ್ಟಿರುವ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿಯೊಂದಿಗೆ ಜೆಮ್ಶೆಡ್ಪುರ ಎಫ್ ಸಿ ಅಂಗಣಕ್ಕಿಳಿಯಿತು. ಕೇರಳ ಬ್ಲಾಸ್ಟರ್ಸ್ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಮತ್ತೆ ಜಯದ ಹಾದಿಯನ್ನೇ ಮರೆತ ಕೇರಳ ಪಡೆ ಮನೆಯಂಗಣದಲ್ಲಿ ಪ್ರೇಕ್ಷಕರ ಮುಂದೆ ಜಯ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.ಸಂದೇಶ್ ಜಿಂಗಾನ್, ಜೈರೋ ರೋಡ್ರಿಕ್ಯೂಸ್ ಮತ್ತು ಮಾರಿಯೋ ಆರ್ಕ್ಯೂಸ್ ಅವರು ಕೇರಳದ ಪರ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುವಲ್ಲಿ ವಿಫಲವಾದರು. ಇದು ಕೇರಳ ಬ್ಲಾಸ್ಟರ್ಸ್ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು. ಋತುವಿನಲ್ಲಿ ಎದುರಾಳಿ ತಂಡಕ್ಕೆ ಐದು ಗೋಲು ಗಳಿಸುವ ಅವಕಾಶ ನೀಡಿದೆ. ಇದು ತಂಡವೊಂದು ನೀಡಿದ ಅತಿಹೆಚ್ಚು ಗೋಲು. ತಂಡದ ಆಟಗಾರರು ಸ್ಟ್ರೀಟ್ ಸ್ಮಾರ್ಟ್ ಫುಟ್ಬಾಲ್ ಆಡಬೇಕೆಂದು ಕೋಚ್ ಎಲ್ಕೋ ಶೆಟ್ಟೋರಿ ತಮ್ಮ ತಂಡಕ್ಕೆ ಸಲಹೆ ನೀಡಿದ್ದಾರೆ. ಮೆಸ್ಸಿ ಬೌಲಿ, ಜೀಕ್ಸೋನ್ ಹಾಗೂ ಪ್ರಶಾಂತ್ ಉತ್ತಮ ಪ್ರದರ್ಶನ ತೋರಬೇಕಾಗಿದೆ.
ಜೆಮ್ಶೆಡ್ಪುರ ತಂಡ ಇಲ್ಲಿ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಮೇಲಕ್ಕೇರಲಿದೆ. ಸ್ಪೇನ್ ಮೂಲದ ಆಟಗಾರರಾದ ಪಿಟಿ ಹಾಗೂ ಸೆರ್ಗಿಯೋ ಕ್ಯಾಸ್ಟಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಕೇರಳ ಬ್ಲಾಸ್ಟರ್ಸ್ ಮನೆಯಂಗದಲ್ಲಿ ಆಡಿದ ಕೊನೆಯ ಹತ್ತು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications