ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿಗೆ ಶರಣಾದ ಕೇರಳ ಬ್ಲಾಸ್ಟರ್ಸ್ ಎಫ್‌ಸಿ

ಕೊಚ್ಚಿ, ಅಕ್ಟೋಬರ್ 25: 82ನೇ ನಿಮಿಷದಲ್ಲಿ ಅಮೆನ್ ಚೇರ್ಮಿತ್ ಗಳಿಸಿದ ಏಕೈಕ ಗೋಲಿನಿಂದ ಆತಿಥೇಯ ಕೇರಳ ಬ್ಲಾಸ್ಟರ್ಸ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಆರಂಭ ಕಂಡಿದೆ.
ಟ್ಯುನಿಷಿಯಾ ಮೂಲದ ಆಟಗಾರ ಚೇರ್ಮಿತ್ ಮುಂಬೈ ತಂಡದಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತ್ತು, ಆದರೆ ದ್ವಿತೀಯಾರ್ಧದಲ್ಲಿ ಮುಂಬೈ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಕೇರಳ ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿತ್ತು. ಆದರೆ ಮುಂಬೈ ಮುನ್ನಡೆಯನ್ನು ತಡೆಯುವಲ್ಲಿ ಕೇರಳ ಅಂತಿಮವಾಗಿ ವಿಫಲವಾಯಿತು. ಚೇರ್ಮಿತ್ ಗಳಿಸಿದ ಗೋಲು ಹಳದಿ ಸೇನೆಯಲ್ಲಿ ನಿರಾಸೆಯ ಅಲೆಯನ್ನೇ ಎಬ್ಬಿಸಿತು,. 90ನೇ ನಿಮಿಷದಲ್ಲಿ ಕೇರಳಕ್ಕೆ ಸಮಬಲ ಸಾಧಿಸುವ ಅವಕಾಶ ಇದ್ದಿತ್ತು, ಬಾರ್ಥಲೋಮಿಯೋ ಓಗ್ಬ್ಯಾಚೆ ಗೋಲ್ ಬಾಕ್ಸ್ ಗೆ ಗುರಿಯಿಟ್ಟ ಚೆಂಡನ್ನು ಮುಂಬೈ ಗೋಲ್ ಕೀಪರ್ ತಡೆಯುವಲ್ಲಿ ಯಶಸ್ವಿಯಾದರು. ಅದು ಕೇರಳಕ್ಕೆ ಸಿಕ್ಕ ಕೊನೆಯ ಅವಕಾಶವಾಗಿತ್ತು.
ಗೋಲಿಲ್ಲದ ಪ್ರಥಮಾರ್ಧ
ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾದಾಗ ಅಲ್ಲಿ ಗೋಳಿನ ಸಾಧ್ಯತೆಗಳು ಕಡಿಮೆ ಇರುತ್ತದೆ. ಕೇರಳ ಹಾಗೂ ಮುಂಬೈ ತಂಡಗಳ ನಡುವೆ ನಡೆದ ಪಂದ್ಯದ ಪ್ರಥಮಾರ್ಧ ಹಾಗೆಯೇ ನಡೆಯಿತು. ನಿಧಾನಗತಿಯಲ್ಲಿ ಆರಂಭಗೊಂಡ ಪಂದ್ಯದಲ್ಲಿ ಮುಂಬೈ ಬಹಳ ಅಪಾಯಕಾರಿಯಾಗಿ ಕಂಡಿತು. ಆಟಗಾರರು ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆರಂಭದಲ್ಲಿ ಕೇರಳ ಚೆಂಡಿನ ಮೇಲೆ ನಿಯಂತ್ರಣ ಕಳೆದುಕೊಂಡಿತು. ಆದರೆ ಮುಂಬೈಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಜೈರೋ ರೋಡ್ರಿಗಸ್ ಗೆ ಒಂದು ಹಂತದಲ್ಲಿ ಗೋಲು ಗಳಿಸಲು ಉತ್ತಮ ಅವಕಾಶ ಹೊಂದಿದ್ದರು. ಆದರೆ ಮುಂಬೈ ನಾಯಕ ಅಮರಿಂದರ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು.

ಕೇರಳಕ್ಕೆ ಎರಡನೇ ಜಯದ ಗುರಿ
ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಗೆದ್ದು ಪ್ರಸಕ್ತ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಆರಂಭ ಕಂಡಿದ್ದ ಕೇರಳ ಬ್ಲಾಸ್ಟರ್ಸ್ ಮುಂಬೈ ಸಿಟಿ ಎಫ್ ಸಿ ವಿರುದ್ಧವೂ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಮಣಿಯಂಗಣದಲ್ಲಿ ಹೋರಾಟಕ್ಕೆ ಸಜ್ಜಾಯಿತು.
ನಾಯಕ ಹಾಗೂ ಸ್ಟಾರ್ ಸ್ಟ್ರೈಕರ್ ಬಾರ್ತಲೋಮ್ಯೋ ಓಗ್ಬ್ಯಾಚೆ ಎರಡು ಗೋಲು ಗಳಿಸಿ ಎದುರಾಳಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಅಭಿಮಾನಿಗಳ ಮನಸ್ಸು ಗೆದ್ದು ಎರಡನೇ ಪಂದ್ಯದಲ್ಲೂ ಅವರಿಗೆ ಜಯದ ಉಡುಗೊರೆ ನೀಡಲು ಸಜ್ಜಾಯಿತು.
ಕಳೆದ ಮುಖಾಮುಖಿಯಲ್ಲಿ ಕೇರಳ ತಂಡವನ್ನು 6-1 ಗೋಲುಗಳ ಅಂತರದಲ್ಲಿ ಮಣಿಸಿದ್ದ ಮುಂಬೈ ತಂಡ ಅತ್ಯಂತ ಆತ್ಮವಿಷವಾಸದಲ್ಲೇ ಅಂಗಣಕ್ಕಿಳಿಯಿತು. ಮುಂಬೈ ಕೂಡ ತನ್ನ ಪಡೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿದೆ. ಸರ್ಗೆ ಕೆವಿನ್ ಹಾಗೂ ಅಮೆನ್ ಚೇರ್ಮಿತ್ ಮುಂಬೈ ತಂಡದಲ್ಲಿ ಹೊಸ ಮುಖ, ಗೋಲು ಗಳಿಸಲು ಮೊದೌ ಸೌದೌ ಲೂಸಿಯನ್ ಗಾಯಾನ್ ಅವರ ತೆರವಾದ ಸ್ಥಾನದಲ್ಲಿ ಮುಂಬೈ ಡಿಫೆನ್ಸ್ ವಿಭಾಗವನ್ನು ನಿಭಾಯಿಸಬೇಕಾಗಿದೆ.. ಪೌಲೊ ಮಚಾಡೊ, ಬೌಲಿನ್ ಬೋರ್ಗೆಸ್ ಮತ್ತು ರಯ್ನಿಯೆರ್ ಫೆರ್ನಾಂಡಿಸ್ ಮುಂಬೈನ ಮಿಡ್ ಫೀಲ್ಡ್ ವಿಭಾಗದಲ್ಲಿ ಪ್ರಮುಖ ಅಸ್ತ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications