ಐಎಸ್‌ಎಲ್: ಮತ್ತೆ ಡ್ರಾಕ್ಕೆ ತೃಪ್ತಿಪಟ್ಟ ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ

ಮುಂಬೈ, ಡಿಸೆಂಬರ್ 6: ಕೇರಳ ರಫಾಯೆಲ್ ಮೆಸ್ಸಿ ಬೌಲಿ ( 75ನೇ ನಿಮಿಷ) ಹಾಗೂ ಮುಂಬೈ ಸಿಟಿ ಎಫ್ ಸಿ ಪರ ಅಮೈನ್ ಚೇರ್ಮಿತಿ (77ನೇ ನಿಮಿಷ) ತಲಾ ಒಂದು ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ 32ನೇ ಪಂದ್ಯ ಸಮಬಲದಲ್ಲಿ ಕೊನೆಗೊಂಡಿತು. ಇದರೊಂದಿಗೆ ಇತ್ತಂಡಗಳು ಸತತ ಆರು ಪಂದ್ಯಗಳಲ್ಲಿ ಜಯ ಕಾಂಡಾದವು.
ಗೋಲಿಲ್ಲದ ಪ್ರಥಮಾರ್ಧ
ಪಂದ್ಯ ಕುತೂಹಲದಿಂದ ಕೂಡಿದ್ದರೂ ಗೋಲಿನಲ್ಲಿ ಕೊನೆಗೊಳ್ಳದಿದ್ದರೆ ಆಟಗಾರರರಿಗೆ ನಿರಾಸೆಯಾಗುವುದು ಸಹಜ. ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ ಎಫ್ ಸಿ ನಡುವಿನ ಪಂದ್ಯದ ಪ್ರಥಮಾರ್ಧ ಕುತೂಹಲದಿಂದ ಕೂಡಿತ್ತು. ಇತ್ತಂಡಗಳಿಗೂ ಜಯದ ಅನಿವಾರ್ಯತೆ ಇದ್ದಿತ್ತು. ಈ ಕಾರಣ ಇತ್ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದವು. ಅಮರಿಂದರ್ ಸಿಂಗ್ ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದ್ದು ಕೇರಳ ಬ್ಲಾಸ್ಟರ್ಸ್ ತಂಡದ ಗೋಲು ಗಳಿಕೆಗೆ ತಡೆಯಾಯಿತು. ಮೆಸ್ಸಿ ಬೌಲಿ ಅವರಿಗೆ ಅದ್ಭುತ ಗೋಲು ಗಳಿಸುವ ಅವಕಾಶ ಇದ್ದಿತ್ತು. ಅದು ಒಂದು ವೇಳೆ ಗೋಲಾಗಿರುತ್ತಿದ್ದರೆ ಋತುವಿನ ಉತ್ತಮ ಗೋಲಾಗಿ ದಾಖಲಾಗಿರುತ್ತಿತ್ತು. ಆದರೆ ಅಮರಿಂದರ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ಕೇರಳದ ಮುನ್ನಡೆಗೆ ಅಡ್ಡಿಯಾದರು. ಮುಂಬೈ ಪರ ಮೊದೌ ಸೌಗೌ ಅವರಿಗೆ ಕೊನೆಯ ಕ್ಷಣದಲ್ಲಿ ಗೋಲು ಗಳಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರು. ಇತ್ತಂಡಗಳಿಗೆ ಜಯದ ತೀವ್ರತೆ ಎಷ್ಟಿತ್ತೆಂಬುದು ಮೊದಲಾರ್ಧದಿಂದ ಸ್ಪಷ್ಟವಾಯಿತು.

ಇಬ್ಬರಿಗೂ ಜಯದ ಅನಿವಾರ್ಯತೆ
ಇಂಡಿಯನ್ ಸೂಪರ್ ಲೀಗ್ ನ 32ನೇ ಪಂದ್ಯದಲ್ಲಿ ಅಂಗಣಕ್ಕಿಳಿದ ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ ಸಿ ತಂಡಗಳಿಗೆ ಜಯದ ಅಗತ್ಯವಿದೆ. ಋತುವಿನಲ್ಲಿ ಇದುವರೆಗೂ ಇತ್ತಂಡಗಳು ಅಸ್ಥಿರ ಪ್ರದರ್ಶನ ನೀಡುತ್ತಾ ಬಂದಿವೆ. ಕಳೆದ ಐದು ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಸಾಧ್ಯತೆ ಇರುವ ಹದಿನೈದು ಅಂಕಗಳಲ್ಲಿ ಆತಿಥೇಯ ಮುಂಬೈ ಗಳಿಸಿರುವುದು ಕೇವಲ ಮೂರು ಅಂಕ. ಮುಂಬೈ ಸಿಟಿ ಎಫ್ ಸಿ ತಂಡದ ಡಿಫೆನ್ಸ್ ವಿಭಾಗ ಕ್ಷೀಣಿಸಿದ್ದು ಇದುವರೆಗೂ ೧೨ ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಇದುವರೆಗೂ ತಂಡವೊಂದು ಎದುರಾಳಿಗೆ ನೀಡಿದ ಅತಿ ಹೆಚ್ಚು ಗೋಲುಗಳಲ್ಲಿ ಎರಡನೆಯದು. ಮುಂಬೈ ತಂಡ ಮನೆಯಂಗಣದಲ್ಲಿ ಇದುವರೆಗೂ ಜಯ ಕಂಡಿಲ್ಲ, ಇದು ತಂಡದ ಮತ್ತೊಂದು ಪ್ರಮುಖ ಚಿಂತೆಯಾಗಿದೆ. ಈ ಪಂದ್ಯದ ಬಗ್ಗೆ ಮುಂಬೈ ಗೆ ಆತ್ಮವಿಶ್ವಾಸ ಇದೆ ಏಕೆಂದರೆ, ಇದೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಗಳಿಸಿತ್ತು.
ಪ್ರವಾಸಿ ಕೇರಳ ತಂಡದ್ದು ಇದೇ ಸಮಸ್ಯೆ. ಉತ್ತಮ ಆರಂಭ ಕಂಡ ತಂಡ ಈಗ ಅಸ್ಥಿರ ಪ್ರದರ್ಶನ ಮುಂದುವರಿಸಿದೆ. ಆಡಿರುವ ಐದು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮಾತ್ರ. ಡಿಫೆನ್ಸ್ ವಿಭಾಗ ಕೈ ಕೊಟ್ಟಿರುವುದೇ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ, ತಂಡ ಇದುವರೆಗೂ ಗಳಿಸಿರುವುದು ಕೇವಲ ಐದು ಗೋಲುಗಳು. ಇದು ಹೈದರಾಬಾದ್ ನಂತರ ಎರಡನೇ ಕೆಡಿಮೆ ಗೋಲಾಗಿದೆ. ಹಿಂದಿನ ವೈಫಲ್ಯಗಳನ್ನು ನೆನೆಯುತ್ತಿದ್ದರೆ ಯಶಸ್ಸಿನ ಹಾದಿ ಸಾಗದು, ಹಾಗಾಗಿ ಇತ್ತಂಡಗಳು ಹೊಸ ಹುಮ್ಮಸ್ಸಿನೊಂದಿಗೆ ಅಂಗಣಕ್ಕಿಳಿದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications