
ಮುಂಬೈ, ಮಾರ್ಚ್ 4: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಈ ತಂಡ ಹೇಗೆ ತನ್ನ ಅಸ್ಥಿತ್ವವನ್ನು ಕಂಡುಕೊಂಡಿತು ಎಂದು ಅಚ್ಚರಿ ಪಡುವವರಿಗೆ ಕೋಚ್ ಎಲ್ಕೊ ಷೆಟೋರಿ ತಕ್ಕ ರೀತಿಯಲ್ಲಿ ಉತ್ತರ ನೀಡದೆ ಇರರು. ಐಎಸ್‌ಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾರ್ತ್ ಈಸ್ಟ್ ತಂಡ ಪ್ಲೇ ಆಫ್ ಹಂತ ತಲುಪಿದೆ. ಮೂಲ ಎಂಟು ತಂಡಗಳಲ್ಲಿ ಪ್ಲೇ ಆಫ್ ತಲುಪದಿರುವ ಏಕೈಕ ತಂಡವೆಂಬ ಕುಖ್ಯಾತಿಗೆ ನಾರ್ತ್ ಈಸ್ಟ್ ತುತ್ತಾಗಿತ್ತು. ಆದರೆ ಈ ಬಾರಿ ಪ್ಲೇ ಆಫ್ ತಲುಪುವ ಮೂಲಕ ಷೆಟೋರಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದರು.
ಈ ತಂಡ ಬಹಳ ಕಡಿಮೆ ಬಜೆಟ್‌ನ ತಂಡವಾಗಿದೆ, ಅಲ್ಲದೆ ತಂಡದಲ್ಲಿ ಸ್ಟಾರ್ ಎನಿಸಿಕೊಂಡಿರುವ ಆಟಗಾರರೂ ಇಲ್ಲ. ಆದರೆ ಮಿಡ್‌ಫೀಲ್ಡ್‌ನಲ್ಲಿ ಉತ್ತಮ ರೀತಿಯಲ್ಲಿ ದಾಳಿ ನಡೆಸಬಲ್ಲ ಫೆಡ್ರಿಕೊ ಗಲ್ಲೆಗೊ ಮತ್ತು ಸ್ಟ್ರೈಕರ್ ಬಾರ್ತಲೋಮ್ಯೊ ಒಗ್ಬಚೆ ಈ ಜೋಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಆದರೆ ತಂಡ ಸೆಮಿಫೈನಲ್ ಹಂತ ತಲುಪಲು ಡಿಫೆನ್ಸ್ ವಿಭಾಗದ ದಿಟ್ಟ ಹೋರಾಟವೇ ಪ್ರಮುಖ ಕಾರಣ.
'ಋತು ಆರಂ'ವಾಗುವುದಕ್ಕೆ ಮೊದಲು ನಮ್ಮ ತಂಡದ ಬಗ್ಗೆ ಡಿಫೆನ್ಸ್ ಬಹಳ ದುರ್ಬಲವಾಗಿದೆ ಎಂದು ಹೇಳುತ್ತಿದ್ದರು. ಆದರೆ ನಾರ್ತ್ ಈಸ್ಟ್ ಇದುವರೆಗೂ ಎದುರಾಳಿ ತಂಡಕ್ಕೆ ಕಡಿಮೆ ಗೋಲುಗಳನ್ನು ನೀಡಿದ ತಂಡವಾಗಿದೆ,' ಎಂದು ಷೆಟೋರಿ ಹೇಳಿದ್ದಾರೆ. ಷೆಟೋರಿ ತಂಡ ಈ ಬಾರಿಯ ಲೀಗ್‌ನಲ್ಲಿ ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ತಂಡವೆನಿಸಿದೆ. ಕೇವಲ 18 ಗೋಲುಗಳನ್ನು ನೀಡಿರುವುದೇ ಇದಕ್ಕೆ ಸಾಕ್ಷಿ. ಅದರಲ್ಲಿ ಐದು ಗೋಲು ಗೋವಾ ತಂಡದ ವಿರುದ್ಧದ ಪಂದ್ಯದಲ್ಲಿ ದಾಖಲಾಗಿತ್ತು.
ತಂಡದ ಆಟಗಾರರ ಕಡೆಗೆ ಗಮನಿಸಿದಾಗ ಉತ್ತಮ ಡಿಫೆನ್ಸ್ ಹೊಂದಿದ್ದರೂ ತಂಡ ಗಾಯದ ಸಮಸ್ಯೆಯನ್ನು ಎದುರಿಸಿದ್ದು ಹೆಚ್ಚು. ಗಾಯದ ಸಮಸ್ಯೆ ಇಲ್ಲದಿದ್ದರೆ ತಂಡ ಇನ್ನೂ ಉತ್ತಮವಾಗಿ ಪ್ರದರ್ಶನ ತೋರುತ್ತಿತ್ತು. ಆರಂಭದಲ್ಲಿ ಮಿಸ್ಲಾವ್ ಕೊಮೊರ್‌ಸ್ಕಿ ಹಾಗೂ ಮಾಟೊ ಗ್ರಿಕ್ ಡಿೆನ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಕ್ರೊಯೇಷ್ಯಾದ ಇಬ್ಬರು ಆಟಗಾರರು ಸೆಂಟ್ರಲ್ ಡಿಫೆನ್ಸ್ ಪ್ರಮುಖ ಶಕ್ತಿಯಾಗಿದ್ದರು. ಆದರೆ ಇತರ ಡಿಫೆನ್ಸ್ ಆಟಗಾರರಲ್ಲಿ ಅಷ್ಟು ಆತ್ಮವಿಶ್ವಾಸ ಇದ್ದಿರಲಿಲ್ಲ.
ರೇಗಾನ್ ಸಿಂಗ್, ರಾಬರ್ಟ್ ಲಾಲ್‌ಥ್ಲುಮುವಾನಾ ಮತ್ತು ಕೀಗಾನ್ ಪೆರೇರಾ ಸಾಧಾರಣ ಪ್ರದರ್ಶನ ತೋರಿದ್ದರು. ಪ್ರೊವಾಟ್ ಲಾಕ್ರಾ ಮೊದಲ ಬಾರಿಗೆ ಐಎಸ್‌ಎಲ್‌ನಲ್ಲಿ ಆಡುತ್ತಿದ್ದಾರೆ. ಆದರೆ ಫುಲ್‌ಬ್ಯಾಕ್ ವಿಭಾಗ ಪಂದ್ಯದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಸೆಂಟ್ರಲ್ ಡಿಫೆನ್ಸ್‌ನಲ್ಲಿ ಪವನ್ ಕುಮಾರ್ ಹಾಗೂ ಗುರ್ವಿಂದರ್ ಸಿಂಗ್ ಮತ್ತೊಂದು ಉತ್ತಮ ಆಯ್ಕೆ. ಪವನ್ ಕುಮಾರ್ ಉನ್ನತ ಮಟ್ಟದ ಲೀಗ್‌ನಲ್ಲಿ ನಿರಂತರವಾಗಿ ಆಡುವ ಅವಕಾಶ ಪಡೆದಿರಲಿಲ್ಲ, ಅದೇ ರೀತಿ ಗುರ್ವಿಂದರ್ ಕಳೆದ ಬಾರಿ ಈಸ್ಟ್ ಬೆಂಗಾಲ್‌ನಿಂದ ಹೊರ ಬಂದ ನಂತರ ಅವಕಾಶವನ್ನು ಪಡೆಯುತ್ತಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಕೊಮೊರ್‌ಸ್ಕಿ ಋತುವಿನಿಂದಲೇ ಹೊರಗುಳಿದ ಕಾರಣ ಷೆಟೋರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಆದರೆ ಗುರ್ವಿಂದರ್ ಈ ಸ್ಥಾನವನ್ನು ತುಂಬಿದ್ದಾರೆ. ಈಗ ಪ್ಲೇ ಆಫ್ಗೆ ತಂಡದಲ್ಲಿ ಮತ್ತೊಮ್ಮೆ ಡಿಫೆನ್ಸ್ ವಿಭಾಗದ ಸಮಸ್ಯೆ ಎದುರಾಗಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಗುರ್ವಿಂದರ್ ಪ್ರಮಾದವೆಸಗಿ ಹೊರ ಕಳುಹಿಸಲ್ಪಿಟ್ಟಿದ್ದಾರೆ. ಇದರಿಂದಾಗಿ ಬೆಂಗಳೂರು ಎಫ್ ಸಿ ವಿರುದ್ಧದ ಸೆಮಿೈನಲ್ ಪಂದ್ಯದಲ್ಲಿ ಷೆಟೋರಿಗೆ ಯಾವ ರೀತಿಯ ರಣತಂತ್ರವನ್ನು ರೂಪಿಸಬೇಕೆಂಬ ಚಿಂತೆ ಆವರಿಸಿದೆ.
'ಗುರ್ವಿಂದರ್ ಸಿಂಗ್ ಅಮಾನತುಗೊಂಡಿರುವುದರಿಂದ ಮುಂದಿನ ಹೋರಾಟಕ್ಕಾಗಿ ನಾವು ಯೋಚಿಸಬೇಕಾಗಿದೆ. ' ಎಂದು ಸಹಾಯಕ ಕೋಚ್ ಶುವಾನ್ ಒಂಟಾಂಗ್ ತಂಡದಲ್ಲಿರುವ ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ನಾರ್ತ್ ಈಸ್ಟ್ ಉತ್ತಮ ರೀತಿಯಲ್ಲಿ ಡಿಫೆನ್ಸ್ ಶಕ್ತಿಯನ್ನು ಪ್ರದರ್ಶಿಸಿತ್ತು. ಆರಂಭದಲ್ಲೇ ಆಟಗಾರರು ರೆಡ್ ಕಾರ್ಡ್ ಪಡೆದು ಹೊರ ನಡೆದರೂ ಕ್ಲೀನ್ ಶೀಟ್ ಸಾಧನೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 'ನಮ್ಮ ಆಟಗಾರರು ತೋರಿದ ಸಾಮರ್ಥ್ಯದ ಬಗ್ಗೆ ಹೆಮ್ಮೆ ಅನಿಸುತ್ತಿದೆ. ವಿಶೇಷವಾಗಿ ಡಿಫೆನ್ಸ್ ವಿಭಾಗದಲ್ಲಿ, ನಾವು ನಿಜವಾಗಿಯೂ ಅದ್ಭುತ ಪ್ರದರ್ಶನ ತೋರಿದ್ದೇವೆ. ಆ ಪ್ರಯತ್ನವೇ ನಮಗೆ ಅಂಕವನ್ನು ತಂದುಕೊಟ್ಟಿತು,' ಎಂದು ಒಂಟಾಂಗ್ ಹೇಳಿದ್ದಾರೆ.
ಆರಂಭದಲ್ಲಿ ಆಟಗಾರರನ್ನು ಕಾಡಿದ ಗಾಯದ ಸಮಸ್ಯೆ ಹಾಗೂ ಗುರ್ವಿಂದರ್ ಅಮಾನತು ಇವುಗಳ ನಡುವೆಯೂ ಋತುವಿನುದ್ದಕ್ಕೂ ತೋರಿರುವಂತೆ ಸೆಮಿಫೈನಲ್ ಪಂದ್ಯದಲ್ಲೂ ನಾರ್ತ್ ಈಸ್ಟ್‌ನ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದೆ.