ಐಎಸ್‌ಎಲ್: ಛತ್ರಪತಿ ಅಂಗಣದಲ್ಲಿ ಎಟಿಕೆ-ಗೋವಾ ಗೋಲಿಲ್ಲದ ಹೋರಾಟ

ಪುಣೆ, ನವೆಂಬರ್ 25: ಇಂಡಿಯನ್ ಸೂಪರ್ ಲೀಗ್ ನ 22ನೇ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಸಮಬಲಗೊಂಡಿದೆ. ಇಲ್ಲಿನ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಒಡಿಶಾ ಎಫ್‌ಸಿ ಹಾಗೂ ಎಟಿಕೆ ನಡುವಿನ ಪಂದ್ಯ ಗೋಲಿಲ್ಲದೇ ಸಮಬಲದಲ್ಲಿ ಕೊನೆಗೊಂಡಿತು. ಈ ಫಲಿತಾಂಶ ಇತ್ತಂಡಗಳ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ಎಟಿಕೆ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.
ಗೋಲು ದಾಖಲಾಗಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉತ್ತಮ ಫುಟ್ಬಾಲ್ ಆಟಕ್ಕೆ ಇತ್ತಂಡಗಳು ಸಾಕ್ಷಿಯಾದವು. ಇತ್ತಂಡಗಳಿಗೂ ದ್ವಿತೀಯಾರ್ಧದಲ್ಲಿ ಸಮಬಲದ ಅವಕಾಶ ಸಿಕ್ಕಿತ್ತು. ರಾಯ್ ಕೃಷ್ಣ ಉತ್ತಮ ಅವಕಾಶವನ್ನು ಕೈ ಚೆಲ್ಲಿದರು. ಒಂದು ಉತ್ತಮ ಪಂದ್ಯ ಗೋಳಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು.
ಗೋಲಿಲ್ಲದ ಪ್ರಥಮಾರ್ಧ
ಹಾಗೆ ನೋಡಿದರೆ ಒಡಿಶಾ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ಒಂದೆರಡು ಅವಕಾಶ ಸಿಕ್ಕರೂ ಅದು ಗೋಲಾಗಿ ಪರಿವರ್ತನೆ ಆಗಲಿಲ್ಲ. ಮಾಜಿ ಚಾಂಪಿಯನ್ ಎಟಿಕೆಯ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಅರಿಂದಂ ಭಟ್ಟಾಚಾರ್ಯ ಹಾಗೂ ಅರ್ಶದೀಪ್ ಸಿಂಗ್ ಇತ್ತಂಡಗಳ ಸಮಬಲಕ್ಕೆ ಪ್ರಮುಖ ಕಾರಣರಾದರು.

ಬಲಿಷ್ಠರ ವಿರುದ್ಧ ಸಮರ್ಥರ ಹೋರಾಟ
ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ್ನು ತನ್ನ ಹೊಸ ಮನೆಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಒಡಿಶಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸದ್ಯ ಅಗ್ರ ಸ್ಥಾನದಲ್ಲಿರುವ ಎಟಿಕೆ ವಿರುದ್ಧ ಹೋರಾಟಕ್ಕೆ ಸಜ್ಜಾಯಿತು. ತಲೆಯಲ್ಲಿ ವಿಭಿನ್ನ ಯೋಚನೆಗಳನ್ನು ಇರಿಸಿಕೊಂಡಿರುವ ಇತ್ತಂಡಗಳು ಅಂಗಣಕ್ಕಿಳಿದವು. ಒಡಿಶಾ ತಂಡ ಒಂದು ಅಂಕ ಹಿಂದೆ ಬಿದ್ದು ನಾಲ್ಕನೇ ಸ್ಥಾನದಲ್ಲಿದೆ. ತಮ್ಮ ಸ್ಥಾನವನ್ನು ಸುಭಧ್ರಗೊಳಿಸಿಕೊಳ್ಳಲು ಎಟಿಕೆ ವಿರುದ್ಧ ಮೂರು ಅಂಕ ಗಳಿಸಲು ಒಡಿಶಾ ಸಜ್ಜಾಗಿದೆ. ಆದರೆ ಒಡಿಶಾ ತಂಡದ ಕೆಲವು ನ್ಯೂನ್ಯತೆಗಳು ಎಟಿಕೆ ತಂಡಕ್ಕೆ ಚೆನ್ನಾಗಿ ಗೊತ್ತಿದೆ, ಈ ಋತುವಿನಲ್ಲಿ ಆರು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ನೀಡಿರುವುದು ತಂಡದ ಡಿಫೆನ್ಸ್ ವಿಭಾಗದ ಬಗ್ಗೆ ಯೋಚಿಸುವಂತೆ ಮಾಡಿದೆ. ಇದರಿಂದಾಗಿ ಒಡಿಶಾ ಕಠಿಣ ಸ್ಥಿತಿಯನ್ನು ಎದುರಿಸಲಿದೆ. ಅರಿದಾನೆ ಸಂತಾನಾ ಮೂರು ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ಸಿಸ್ಕೋ ಹೆರ್ನಾಂಡಿಸ್ ಹಾಗೂ ಜೆರ್ರಿ ಮಾವ್ಹಿಂಗ್ಥಂಗ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.
ಕೇರಳ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡ ಬಳಿಕ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಅಗ್ರ ಸ್ಥಾನಕ್ಕೆ ಏರಿತು. ಒಂಬತ್ತು ಗೋಲುಗಳನ್ನು ಗಳಿಸಿದ ತಂಡ ಎದುರಾಳಿ ತಂಡಕ್ಕೆ ನೀಡಿದ್ದು ಕೇವಲ ಒಂದು ಗೋಲು. ಡೇವಿಡ್ ವಿಲಿಯಮ್ಸ್ ಹಾಗೂ ರಾಯ್ ಕೃಷ್ಣ ತಂಡಕ್ಕೆ ಗೋಲು ಗಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಎಡು ಗಾರ್ಸಿಯ ಅಟ್ಯಾಕ್ ವಿಭಾಗದಲ್ಲಿ ತಂಡಕ್ಕೆ ನೆರವಾದರು. ಮೈಕೆಲ್ ಸೂಸೈರಾಜ್ ಹಾಗೂ ಪ್ರಬೀರ್ ದಾಸ್ ಅವರ ಬಗ್ಗೆ ಒಡಿಶಾ ಎಚ್ಚರಿಕೆಯಿಂದ ಇರಬೇಕಾಗಿದೆ. ಇದೆಲ್ಲ ಇದುವರೆಗೂ ನಡೆದ ಕತೆ, ಆದರೆ ಒಡಿಶಾ ತನ್ನ ಹೊಸ ಮನೆಯಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಮಾಜಿ ಚಾಂಪಿಯನ್ನರಿಗೆ ರೀತಿಯಲ್ಲಿ ಸವಾಲೊಡ್ಡುತ್ತದೆ ಎಂಬುದು ಮುಖ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications