ಐಎಸ್‌ಎಲ್ 2019: ಅಗ್ರ ಸ್ಥಾನದಲ್ಲಿರುವ ಎಟಿಕೆಗೆ ಮುಂಬೈ ಸಿಟಿ ಸವಾಲು

ಕೋಲ್ಕೊತಾ, ನವೆಂಬರ್ 30: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸದ್ಯ ಅಗ್ರ ಸ್ಥಾನದಲ್ಲಿರುವ ಎಟಿಕೆ ತಂಡ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಜಯ ಗಳಿಸಿ ಮನೆಯಂಗಣದಲ್ಲಿ ಹ್ಯಾಟ್ರಿಕ್ ಜಯದ ಗುರಿ ಹೊಂದಿದೆ.
ಅಂಟೋನಿಯೋ ಹಬಾಸ್ ಪಡೆ ಆಡಿರುವ ಐದು ಪಂದ್ಯಗಳಲ್ಲಿ 10 ಅಂಕ ಗಳಿಸಿ ಅಂಕ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ. ಇದು ಎಟಿಕೆ ತಂಡ ಮನೆಯಂಗದಲ್ಲಿ ಆಡುತ್ತಿರುವ ಮೂರನೇ ಪಂದ್ಯವಾಗಿದ್ದು, ಹಿಂದಿನ ಪಂದ್ಯಗಳಲ್ಲಿ ಹೈದರಾಬಾದ್ ವಿರುದ್ಧ 5-0 ಹಾಗೂ ಜೆಮ್ಶೆಡ್ಪುರ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿತ್ತು. ಮುಂಬೈ ವಿರುದ್ಧ ಗೆದ್ದರೆ ಸತತ ಮೂರು ಪಂದ್ಯಗಳಲ್ಲಿ ಗೆದ್ದಂತಾಗುತ್ತದೆ.
ಒಡಿಶಾ ಎಫ್ ಸಿ ವಿರುದ್ಧ ಕೋಲ್ಕತಾ ಜಯ ಗಳಿಸುವಲ್ಲಿ ವಿಫಲವಾಗಿತ್ತು. ಹಬಾಸ್ ಅವರ ರಣ ತಂತ್ರಕ್ಕೆ ಇದೇ ಮೊದಲ ಬಾರಿಗೆ ರಾಯ್ ಕೃಷ್ಣ ಹಾಗೂ ತಂಡ ಉತ್ತಮ ರೀತಿಯಲ್ಲಿ ಸ್ಪಂದಿಸಲು ವಿಫಲವಾಗಿತ್ತು. ಎಟಿಕೆ ಇದುವರೆಗೂ ಹತ್ತು ಗೋಲುಗಳನ್ನು ಗಳಿಸಿ ಹೆಚ್ಚು ಗೋಲು ಗಳಿಸಿದವರಲ್ಲಿ ಅಗ್ರ ಸ್ಥಾನ ಹಂಚಿಕೊಂಡಿದೆ.
ತಂಡದಲ್ಲಿ ದಾಳಿ ಮಾಡುವವರೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆಯೇ ಹೊರತು ಡಿಫೆಂಡರ್ಸ್ ಕಡೆಗೆ ಯಾರೂ ಹೆಚ್ಚಿನ ಗಮನ ಹರಿಸಿದಂತಿಲ್ಲ. ಸೂಸೈರಾಜ್ ಹಾಗೂ ಪ್ರಬೀರ್ ದಾಸ್ ಎದುರಾಳಿ ತಂಡಕ್ಕೆ ಕೇವಲ ಮೋರು ಗೋಲುಗಳನ್ನು ಗಳಿಸಲು ಅವಕಾಶ ನೀಡಿದ್ದಾರೆ. ಎಟಿಕೆ ಬಿಟ್ಟರೆ ಬೆಂಗಳೂರು ಎಫ್ ಸಿ ಮಾತ್ರ ಅತಿ ಕೆಡಿಮೆ ಗೋಲು ನೀಡಿದ ತಂಡವೆನಿಸಿದೆ.

''ಪ್ರತಿಯೊಂದು ಪಂದ್ಯವೂ ಭಿನ್ನವಾಗಿರುತ್ತದೆ, ನಾವು ಪಂದ್ಯದ ತೀವೃತೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ, ನಮಗೆ ಪ್ರತಿಯೊಂದು ಪಂದ್ಯ ಗೆಲ್ಲಲಾಗದು. ಅದೇ ರೀತಿ ನಾವು ಸೋತಿಲ್ಲ,'' ಎಂದು ಕೋಚ್ ಹಬಾಸ್ ಹೇಳಿದ್ದಾರೆ.
ಮುಂಬೈ ಸಿಟಿ ಎಫ್ ಸಿ ಐದು ಪಂದ್ಯಗಳನ್ನಾಡಿ ಐದು ಅಂಕಗಳನ್ನು ಗಳಿಸಿದೆ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಮುಂಬೈ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು. ಪಂದ್ಯದ ಪ್ರತಿಯೊಂದು ವಿಭಾಗದಲ್ಲೂ ಮುಂಬೈ ಪ್ರಭುತ್ವ ಸಾಧಿಸಿತ್ತು. ಮೂರು ಅಂಕಗಳನ್ನು ಗಳಿಸುವ ಆತ್ಮವಿಶ್ವಾಸ ತೋರಿಸಿತ್ತು, ಜಾರ್ಜ್ ಕೋಸ್ಟಾ ಅವರು ತಮ್ಮ ತಂಡವು ಅದೇ ರೀತಿಯ ಪ್ರದರ್ಶನ ತೋರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಸಿಟಿ ಫುಟ್ಬಾಲ್ ಗ್ರೂಪ್ ಕ್ಲಬ್ ನ ಹೆಚ್ಚಿನ ಭಾಗದ ಪಾಲನ್ನು ಖರೀದಿಸಲು ಮುಂದೆ ಬಂದಿದ್ದು, ಇದು, ಆಟಗಾರರಲ್ಲಿ ಹೊಸ ಉತ್ಸಾಹವನ್ನು ಉಂಟುಮಾಡಲಿದೆ.
ಮೊದೌ ಸೌಗೌ ಗಾಯದ ಸಮಸ್ಯೆ ಯಿಂದ ಬಳಲುತ್ತಿದ್ದು, ಈಗ ತಂಡ ಅಮೈನ್ ಚೇರ್ಮಿತಿ ಅವರನ್ನು ಹೆಚ್ಚು ಆಧರಿಸಿದೆ. ಚೇರ್ಮಿತಿ ಇದುವರೆಗೂ ಮೂರು ಗೋಲುಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಡೀಗೊ ಕಾರ್ಲೋಸ್ ಮತ್ತು ಪೌಲೊ ಮಚಾಡೋ ಅತ್ಯಂತ ಅಪಾಯಕಾರಿ ಆಟಗಾರರು. ಬಂಡೆಯಂತಿರುವ ಎಟಿಕೆ ಡಿಫೆನ್ಸ್ ವಿಭಾಗವನ್ನು ಈ ಆಟಗಾರರು ಹೇಗೆ ಮುರುಯುತ್ತಾರೆ ಎಂಬುದು ಕುತೂಹಲದ ಸಂಗತಿ.
ಮುಂಬೈ ಸಿಟಿ ಎಫ್ ಸಿ ದುರ್ಬಲ ಡಿಫೆನ್ಸ್ ನಲ್ಲಿ ಮೂರನೇ ಸ್ಥಾನದಲ್ಲಿದೆ. ''ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೇವೆ, ಈಗ ಅವುಗಳನ್ನು ಸರಿಪಡಿಸಿಕೊಂಡಿದ್ದೇವೆ. ನಾವು ಉತ್ತಮವಾಗಿಯೇ ಆಡುತ್ತಿದ್ದೇವೆ, ಆದರೆ ಕೆಲವು ವ್ಯಕ್ತಿಗತ ಸಮಸ್ಯೆಗಳು ಆಟದ ಮೇಲೆ ಪರಿಣಾಮ ಬೀರುತ್ತದೆ. ಈಗ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ, [ಅಂದ್ಯವನ್ನು ಎಲ್ಲಿ ನಿಲ್ಲಿಸಬೇಕು ಅಲ್ಲಿ ಮುಗಿಸುವ ಯೋಜನೆ ಇದೆ,'' ಎಂದು ಕೋಸ್ಟಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications