ಐಎಸ್‌ಎಲ್: ಮತ್ತೆ ಬೆಂಗಳೂರಿಗೆ ಸೋಲಿನ ಆಘಾತ, ಬಾಗನ್ ಮೇಲುಗೈ

ಗೋವಾ, ಫೆಬ್ರವರಿ 9: ರಾಯ್ ಕೃಷ್ಣ (37ನೇ ನಿಮಿಷ) ಹಾಗೂ ಮಾರ್ಸೆಲಿನೊ ಪೆರೆರಾ (44ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ವಿರುದ್ಧ 2-0 ಗೋಲಿನಿಂದ ಜಯ ಗಳಿಸಿದ ಎಟಿಕೆ ಮೋಹನ್ ಬಾಗನ್ ತಂಡ ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಕೊಂಡಿತು ಮಾತ್ರವಲ್ಲಿ ಅಗ್ರ ಸ್ಥಾನ ತಲುಪಲು ಕೇವಲ ಒಂದು ಅಂಕದ ಕೊರತೆಕಂಡಿತು. ಈ ಸೋಲಿನೊಂದಿಗೆ ಬೆಂಗಳೂರು ಎಫ್ ಸಿ ಪ್ಲೇ ಆಫ್ ಆಸೆ ಮತ್ತಷ್ಟು ದೂರವಾಯಿತು.
ಎಟಿಕೆಎಂಬಿ 2-0: ತನ್ನ ದೌರ್ಬಲ್ಯಗಳನ್ನು ಪ್ರದರ್ಶಿಸಿದ ಬೆಂಗಳೂರು ಎಫ್ ಸಿ ತಂಡ ಎಟಿಕೆ ಮೋಹನ್ ಬಾಗನ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 0-2 ಗೋಲುಗಳಿಂದ ಹಿನ್ನಡೆ ಕಂಡಿದೆ. ಅನಾವಶ್ಯಕ ಅಡ್ಡಿ ಹಾಗೂ ಡಿಫೆನ್ಸ್ ನಲ್ಲಿ ವಿಫಲ ಕಂಡ ಬೆಂಗಳೂರು ವಿರುದ್ಧ ಮೋಹನ್ ಬಾಗನ್ ಸೆಟ್ ಪೀಸ್ ಮೂಲಕ 2-0 ಗೋಲುಗಳಿಂದ ಮೇಲುಗೈ ಸಾಧಿಸಿದೆ. ರಾಯ್ ಕೃಷ್ಣ (37ನೇ ನಿಮಿಷ)_ ಹಾಗೂ ಮಾರ್ಸೆಲಿನೋ ಪೆರೆರಾ (44ನೇ ನಿಮಿಷ) ಗಳಿಸಿದ ಗೋಲು ಮೋಹನ್ ಬಾಗನ್ ತಂಡಕ್ಕೆ ಅಮೂಲ್ಯ ಮುನ್ನಡೆ ತಂದುಕೊಟ್ಟಿತು.
36ನೇ ನಿಮಿಷದಲ್ಲಿ ಪ್ರತೀಕ್ ಚೌಧರಿ ಮೋಹನ್ ಬಾಗನ್ ನ ರಾಯ್ ಕೃಷ್ಣ ಅವರನ್ನು ಪೆನಾಲ್ಟಿ ವಲಯದಲ್ಲಿ ಉದ್ದೇಶ ಪೂರ್ವಕವಾಗಿ ತಡೆದು ಹಳದಿ ಕಾರ್ಡ್ ಪಡೆದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಯ್ ಕೃಷ್ಣ ಬೆಂಗಳೂರಿನ ಗೋಲ್ಗ ಕೀಪರ್ ಗರ್ ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿ ಚೆಂಡನ್ನು ನೆಟ್ ಗೆ ತಲುಪಿಸಿದರು. 44ನೇ ನಿಮಿಷದಲ್ಲಿ ಹರ್ಮನ್ಜೋತ್ ಕಬ್ರಾ ಪೆನಾಲ್ಟಿ ವಲಯದಲ್ಲಿ ಇದೇ ರೀತಿಯ ಪ್ರಮಾದ ಎಸಗಿ ಹಳದಿ ಕಾರ್ಡ್ ಗೆ ಗುರಿಯಾದರು. ಫ್ರೀಕಿಕ್ ಮೂಲಕ ಮಾರ್ಸೆಲಿನೊ ಅದ್ಭುತ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು.
ಬೆಂಗಳೂರಿಗೆ ಜಯವೊಂದೇ ಮಂತ್ರ: ಇಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿಯಾದರೆ ಬೆಂಗಳೂರಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿರುವ ಹಂಬಲ. ಆದರೆ ಇಲ್ಲಿ ಇಬ್ಬರಿಗೂ ಜಯ ಅಗತ್ಯ ಇದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಗೋಲಿಲ್ಲದೆ ಡ್ರಾ ಕಂಡ ಬೆಂಗಳೂರಿಗೆ ಬಾಗನ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಹೆಚ್ಚಿನ ತಂಡಗಳು ಅಗ್ರ ನಾಲ್ಕತಲ್ಲಿ ಸ್ಥಾನ ಪಡೆಯುವ ಅರ್ಹತೆಯನ್ನು ಇನ್ನೂ ಹೊಂದಿವೆ. ನೌಶಾದ್ ಮೂಸಾ ಅವರ ಪಡೆ ಎಟ್ಯಾಕ್ ವಿಭಾಗದಲ್ಲಿ ಇಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಹಿಂದಿನ ಪಂದ್ಯದ ಫಲಿತಾಂಶವೇ ಇದಕ್ಕೆ ಕಾರಣ. ಇಲ್ಲಿ ಸೋಲು ಅಥವಾ ಡ್ರಾ ಸಾಧನೆ ಮುನ್ನಡೆಗೆ ಅಡ್ಡಿಯಾಗುವುದು ಸಹಜ. ಮಧ್ಯಂತರ ಕೋಚ್ ಬಂದಾಗಿನಿಂದ ಬ್ಲೂಸ್ ಪಡೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಒಂದು ಪಂದ್ಯದಲ್ಲಿ ಜಯ ಗಳಿಸಿದೆ.
ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಬೇಕಾದರೆ ಬೆಂಗಳೂರು ಜಯದ ಲಯಕ್ಕೆ ಮರಳಬೇಕಾಗಿದೆ. ಇಂದಿನ ಪಂದ್ಯದಲ್ಲಿ ಜಯ ಗಳಿಸಿದರೆ ಬೆಂಗಳೂರು ನಾಲ್ಕನೇ ಸ್ಥಾನದ ಪ್ರತಿಸ್ಪರ್ಧಿಗಳ ಸಮೀಪಕ್ಕೆ ತಲುಪಲಿದೆ. ಆದರೆ ಎದುರಾಳಿ ಮೋಹನ್ ಬಾಗನ್ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಎರಡನೇ ಸ್ಥಾನದಲ್ಲಿರುವ ಕೋಲ್ಕೊತಾದ ಪಡೆಗೆ ಅಗ್ರ ಸ್ಥಾನ ತಲುಪಲು ಕೇವಲ ನಾಲ್ಕ ಅಂಕಗಳ ಅಗತ್ಯ ಇದೆ. ಒಡಿಶಾ ಎಫ್ ಸಿ ಯಿಂದ ಮಾರ್ಸೆಲೋ ಪೆರೆರಾ ಅವರನ್ನು ಸಾಲದ ರೂಪದಲ್ಲಿ ಪಡೆದ ನಂತರ ತಂಡದ ಅಟ್ಯಾಕ್ ವಿಭಾಗದಲ್ಲಿ ಸುಧಾರಣೆಯಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಬಲಿಷ್ಠವಾಗಿರುವ ಮೋಹನ್ ಬಾಗನ್ ಇಲ್ಲಿ ಗೆಲ್ಲುವ ಫೇವರಿಟ್ ಎನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications