ಐಎಸ್‌ಎಲ್ 2021: ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದ ಬೆಸ್ಟ್ ಬೆಂಗಳೂರು

ಗೋವಾ: ಪ್ಲೇ ಆಫ್ ತಲುಪಬೇಕಾದರೆ ಈಸ್ಟ್ ಬೆಂಗಾಲ್ ವಿರುದ್ಧ ಗೆಲ್ಲಲೇ ಬೇಕೆಂಬ ಛಲದೊಂದಿಗೆ ಅಂಗಣಕ್ಕಿಳಿದ ಬೆಂಗಳೂರು ಎಫ್ ಸಿ ಅಷ್ಟೇ ಬದ್ಧತೆಯಿಂದ ಆಟವಾಡಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ತಲುಪಿತು. ಕ್ಲೈಟನ್ ಸಿಲ್ವಾ (12ನೇ ನಿಮಿಷ) ಹಾಗೂ ಈಸ್ಟ್ ಬೆಂಗಾಲ್ ತಂಡದ ಗೋಲ್ ಕೀಪರ್ ದೇವಜಿತ್ ಮಜುಂದಾರ್ (45ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ ಬೆಂಗಳೂರು ಜಯ ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಬೆಂಗಳೂರಿಗೆ ಮುನ್ನಡೆ: ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ಎಫ್ ಸಿ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿದೆ. ಕ್ಲೈಟನ್ ಸಿಲ್ವಾ (12ನೇ ನಿಮಿಷ) ಹಾಗೂ ಈಸ್ಟ್ ಬೆಂಗಾಲ್ ತಂಡದ ಗೋಲ್ ಕೀಪರ್ ದೇವಜಿತ್ ಮಜುಂದಾರ್ (45ನೇ ನಿಮಿಷ) ನೀಡಿದ ಉಡುಗೊರೆ ಗೋಲು ತಂಡದ ಮುನ್ನಡೆಗೆ ನೆರವಾಯಿತು.

ಬೆಂಗಳೂರಿಗೆ ಛೆಟ್ರಿ ಆಸರೆ
ಈಸ್ಟ್ ಬೆಂಗಾಲ್ ನ ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿಲ್ಲ. ನಾಯಕ ಸುನೀಲ್ ಛೆಟ್ರಿ ಉತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸಿದ್ದು, ಪಾಸ್ ಗಳನ್ನು ನೀಡಿದ್ದು ತಂಡ ತನ್ನ ಹಿಂದಿನ ಆಟ ಮರಳಿ ಪಡೆಯಲು ಸಾಧ್ಯವಾಯಿತು. ಈಸ್ಟ್ ಬೆಂಗಾಲ್ ತಂಡಕ್ಕೆ ಪೆನಾಲ್ಟಿ ವಲಯದಲ್ಲಿ ಫ್ರೀಕಿಕ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಬ್ರೈಟ್ ಎನೊಬಾಖರೆ ತುಳಿದ ಚೆಂಡು ಬೆಂಗೂರು ಆಟಗಾರನ ತಲೆಗೆ ತಗಲಿ ಹೊರಕ್ಕೆ ಚಿಮ್ಮಿತು. ಮತ್ತೆ ಈಸ್ಟ್ ಬೆಂಗಾಲ್ ಗೆ ಉತ್ತಮ ಅವಕಾಶ ಸಿಗಲಿಲ್ಲ.

ಈಸ್ಟ್ ಬೆಂಗಾಲ್ ಗೆ ಆತ್ಮವಿಶ್ವಾಸ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ವಿಫಲವಾಗುತ್ತಿರುವ ಜತೆಯಲ್ಲಿ ಅದೃಷ್ಟ ಕೈಚೆಲ್ಲುತ್ತಿರುವ ಬೆಂಗಳೂರು ಎಫ್ ಸಿ ವಿರುದ್ಧ ಎಸ್ ಸಿ ಈಸ್ಟ್ ಬೆಂಗಾಲ್ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಇತ್ತಂಡಗಳು ಇದುವರೆಗೂ 14 ಪಂದ್ಯಗಳನ್ನು ಆಡಿದ್ದು ಉಳಿಸಿರುವ ಅರು ಪಂದ್ಯಗಳಲ್ಲಿ ತಾವು ಅಂತಿಮ ನಾಲ್ಕರಲ್ಲಿ ನಿಲ್ಲಲು ಸಮರ್ಥರು ಎಂಬುದನ್ನು ತೋರಿಸಬೇಕಾಗಿದೆ. ಹಿಂದಿನ ಪಂದ್ಯದದಲ್ಲಿ ಬೆಂಗಳೂರು ತಂಡವನ್ನು ಏಕೈಕ ಗೋಲಿನಿಂದ ಸೋಲಿಸಿದ್ದ ಈಸ್ಟ್ ಬೆಂಗಾಲ್ ಆನಂತರದ ಪಂದ್ಯಗಳಲ್ಲಿ ತನ್ನ ನೈಜ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲವಾಗಿತ್ತು. ಮೂರು ಡ್ರಾ ಹಾಗೂ ಒಂದು ಸೋಲು ಕಂಡಿರುವ ತಂಡ ನಾಲ್ಕು ಪಂದ್ಯಗಳಲ್ಲಿ ಜಯದ ಹಾದಿ ತಲುಪಿಲ್ಲ. ಗೋಲು ಗಳಿಸುವಲ್ಲಿಯೂ ರಾಬಿ ಫ್ಲವರ್ ಪಡೆ ಹಿಂದೆ ಬಿದ್ದಿರುವುದು ನೋವಿನ ಸಂಗತಿ. ಕಳೆದ ನಾಲ್ಕು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 2 ಗೋಲು.

ಆತ್ಮಬಲವನ್ನು ಹೆಚ್ಚಿಸಲು ನೆರವು
ಬಿಎಫ್ ಸಿ ಇದುವರೆಗೂ ಎದುರಾಳಿ ತಂಡಕ್ಕೆ 19 ಗೋಲುಗಳನ್ನು ನೀಡಿದೆ. ಇದು ಈಸ್ಟ್ ಬೆಂಗಾಲ್ ತಂಡದ ಆತ್ಮಬಲವನ್ನು ಹೆಚ್ಚಿಸಲು ನೆರವಾಗಬಹುದು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 85ನೇ ನಿಮಿಷದವರೆಗೂ 2-0 ಗೋಲಿನಿಂದ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರು ನಂತರ 2-2 ಗೋಲುಗಳಿಂದ ನಿರಾಸೆಕಂಡಿತ್ತು. ಎರಿಕ್ ಪಾರ್ಥಲು ಮತ್ತು ಜುವಾನನ್ ಅವರ ಸ್ಥಾನವನ್ನು ತುಂಬುವುದು ಬೆಂಗಳೂರಿಗೆ ಕಷ್ಟವಾಗಬಹುದು. ಕ್ಸಿಸ್ಕೊ ಹೆರ್ನಾಂಡೀಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದು ಪಾರ್ಥಲು ಅವರ ಸ್ಥಾವನ್ನು ತುಂಬಲಿದ್ದಾರೆ. ಬೆಂಗಳೂರು ಗೆದ್ದರೆ 6ನೇ ಸ್ಥಾನ ತಲುಪಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications