Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಉಡುಗೊರೆ ಗೋಲಿನಲ್ಲಿ ಜಯ ಗಳಿಸಿದ ಜೆಮ್ಷೆಡ್ಪುರ

ISL 2020-21: Chennaiyin FC vs Jamshedpur FC, match 89 highlights

ಗೋವಾ, ಫೆಬ್ರವರಿ 10: ಎನೆಸ್ ಸಿಪೊವಿಕ್ (90ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿ ಜೆಮ್ಷೆಡ್ಪುರ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಕೊಂಡಿದೆ. ಈ ಜಯದೊಂದಿಗೆ 21 ಅಂಕ ಗಳಿಸಿದ ಜೆಮ್ಷೆಡ್ಪುರ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿಯಿತು. 6ನೇ ಸ್ಥಾನದಲ್ಲಿದ್ದ ಬೆಂಗಳೂರು ಎಫ್ ಸಿ 7ನೇ ಸ್ಥಾನಕ್ಕೆ ಕುಸಿಯಿತು.

ಡೇವಿಡ್ ಗ್ರಾಂಡೆ ಅವರಿಗೆ ಪೆನಾಲ್ಟಿ ವಲಯದಲ್ಲಿ ಚೆಂಡು ನಿಯಂತ್ರಣಕ್ಕೆ ಸಿಕ್ಕಿತು. ಅದನ್ನು ಅವರು ಗೋಲ್ ಬಾಕ್ಸ್ ಗೆ ಗುರಿ ಇಟ್ಟರು. ಚೆಂಡು ಕೊಂಚ ತಿರುವು ಕಂಡು ಎನೆಸ್ ಸಿಪೊವಿಕ್ ಅವರ ಕಾಲಿಗೆ ತಗಲಿ ಗೋಲ್ ಕೀಪರ್ ನಿಯಂತ್ರಣಕ್ಕೆ ಸಿಗದೆ ನೆಟ್ ಸೇರಿಕೊಂಡಿತು.

ಗೋಲಿಲ್ಲದ ಪ್ರಥಮಾರ್ಧ: ಚೆನ್ನೈಯಿನ್ ಹಾಆಗೂ ಜೆಮ್ಷೆಡ್ಪುರ ನಡುವಿನ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಜೆಮ್ಷೆಡ್ಪುರ ತಂಡದ ಗೋಲ್ ಕೀಪರ್ ರೆಹನೇಶ್ ಉತ್ತಮ ರೀತಿಯಲ್ಲಿ ಸಾಧ್ಯತೆಯ ಗೋಲನ್ನು ತಡೆದು ತಂಡಕ್ಕೆ ನೆರವಾದರು. ಚೆನ್ನೈಯಿನ್ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿತ್ತು, ಆದರೆ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿತು. ಜೆಮ್ಷೆಡ್ಪುರ ಹಲವು ಬಾರಿ ಟಾರ್ಗೆಟ್ ಗೆ ಗುರಿ ಇಟ್ಟರೂ ಉತ್ತಮ ಫನಿಶಿಂಗ್ ಇಲ್ಲದ ಕಾರಣ ಗೋಲು ದಾಖಲಾಗಲಿಲ್ಲ. ಒಟ್ಟಿನಲ್ಲಿ ಉತ್ತಮ ಫುಟ್ಬಾಲ್ ಆಟ ದಾಖಲಾಯಿತೇ ವಿನಃ ಗೋಲು ದಾಖಲಾಗಲಿಲ್ಲ. ಪ್ರಥಮಾರ್ಧದ ಕೊನೆಯಲ್ಲಿ ಜೆಮ್ಷೆಡ್ಪುರ ಆಕ್ರಮಣಕಾರಿ ಆಟ ಪ್ರದರ್ಶಿಸಿ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು, ಉತ್ತಮ ಪಾಸ್ ಗಳು ಕಂಡುಬಂದರೂ ನೆಟ್ ಕಡೆಗೆ ಚೆಂಡು ಸಾಗಲಿಲ್ಲ. ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ 45 ನಿಮಿಷಗಳ ಕಾಲ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು.

ಸಮಾನ ದುಃಖಿಗಳ ಹೋರಾಟ: ಅಂಕಪಟ್ಟಿಯಲ್ಲಿ ಮಧ್ಯ ಸ್ಥಾನದಲ್ಲಿರುವ ಚೆನ್ನೈಯಿನ್ ಎಫ್ ಸಿ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳು ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲು ಅಂಕಗಣಕ್ಕಿಳಿದವು. ಈ ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಜಯ ಗಳಿಸಿತ್ತು. ಆದರೆ ಇತ್ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಜಯ ಕಂಡಿರಲಿಲ್ಲ. ಬೆಂಗಳೂರು ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಡ್ರಾ ಸಾಧಸಿತ್ತು. ಈ ಪಂದ್ಯದಲ್ಲಿ ಜಯ ಗಳಿಸಿ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಗುರಿಯೊಂದಿಗೆ ತಂಡ ಅಂಗಣಕ್ಕಿಳಿಯಿತು. ಕಳೆದ ನಾಲ್ಕು ಪಂದ್ಯಗಳಲ್ಲಿ ಚೆನ್ನೈಯಿನ್ ತಂಡ ಗೋಲು ಗಳಿಸಿರಲಿಲ್ಲ.

ಚೆನ್ನೈಯಿನ್ ಎಫ್ ಸಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆಯೋ ಅದೇ ರೀತಿಯ ಸಮಸ್ಯೆಗಳನ್ನು ಜೆಮ್ಷೆಡ್ಪುರ ಎಫ್ ಸಿ ಎದುರಿಸುತ್ತಿದೆ. ಈಸ್ಟ್ ಬೆಂಗಾಲ್ ವಿರುದ್ಧ ನಡೆದ ಪಂದ್ಯದಲ್ಲಿ ಜೆಮ್ಷೆಡ್ಪುರ ಸೋಲು ಅನುಭವಿಸಿತ್ತು. ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡದ ಜಯದ ರೂವಾರಿ ಎನಿಸಿದ್ದ ನಿರಿಜಸ್ ವಾಸ್ಕೀಸ್ ಈ ಬಾರಿ ಜೆಮ್ಷೆಡ್ಪುರ ತಂಡದಲ್ಲಿದ್ದಾರೆ, ಆದರೆ ಆರಂಭದಲ್ಲಿ ಮಿಂಚಿದ್ದ ನಿರಿಜಸ್ ಇತ್ತೀಚಿನ ಪಂದ್ಯಗಳಲ್ಲಿ ಗೋಲು ಗಳಿಸುತ್ತಿಲ್ಲ ಎಂಬುದು ಚಿಂತೆಯ ವಿಚಾರ.

Story first published: Wednesday, February 10, 2021, 22:22 [IST]
Other articles published on Feb 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+