ಐಎಸ್‌ಎಲ್: ನಾರ್ಥ್ಈಸ್ಟ್ ಯುನೈಟೆಡ್‌ಗೆ ಸೋತು ತಲೆಬಾಗಿದ ಬಾಗನ್

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ 72ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ 2-1 ಗೋಲಿನ ಅಂತರದಲ್ಲಿ ಜಯ ಗಳಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಮತ್ತೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿತು. ಹೈದರಾಬಾದ್ ಮತ್ತು ನಾರ್ಥ್ ಈಸ್ಟ್ ಸಮಾನ (18) ಅಂಕಗಳನ್ನು ಗಳಿಸಿದ್ದರೂ ಗೋಲುಗಳ ಅಂತರದಲ್ಲಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲೇ ಉಳಿಯಿತು.
ಮೊದಲಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ನಾರ್ಥ್ ಈಸ್ಟ್ ಯುನೈಟೆಡ್ ಪರ ಲೂಯಿನ್ ಮಚಾಡೋ (61ನೇ ನಿಮಿಷ) ಹಾಗೂ ಫೆಡರಿಕೊ ಗಲ್ಲೆಗೋ (81ನೇ ನಿಮಿಷ) ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು. ಎಟಿಕೆಎಂಬಿ ಪರ ರಾಯ್ ಕೃಷ್ಣ (72ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆಮಾಡಿತು.

ಗೋಲಿಲ್ಲದ ಪ್ರಥಮಾರ್ಧ
ಎಟಿಕೆ ಮೋಹನ್ ಬಾಗನ್ ಪಂದ್ಯದ ಮೇಲೆ ಹೆಚ್ಚು ಹಿಡಿತ ಸಾಧಿಸಿತ್ತು, ಆದರೆ ಗೋಲು ಗಳಿಸುವ ಅವಕಾಶ ಅಷ್ಟು ಉತ್ತಮವಾಗಿರಲಿಲ್ಲ. ನಾರ್ಥ್ ಈಸ್ಟ್ ಯುನೈಟೆಡ್ ಕೂಡ ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾಗಿತ್ತು ಪರಿಣಾಮ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು.ದೆಶ್ರಾನ್ ಬ್ರೌನ್ ನಾರ್ಥ್ ಈಸ್ಟ್ ಪರ ಉತ್ತಮ ಆಟ ಪ್ರದರ್ಶಿಸಿದರು, ಆದರೆ ಗೋಲಿಗೆ ಎಲ್ಲೂ ಅವಕಾಶ ಸಿಗಲಿಲ್ಲ. ಎಟಿಕೆಎಂಬಿ ಪರ ಡೇವಿಡ್ ವಿಲಿಯಮ್ಸ್ ಮಿಂಚಿನ ಆಟ ಪ್ರದರ್ಶಿಸಿದ್ದರು. ಆದರೆ ನಾರ್ಥ್ ಈಸ್ಟ್ ನ ಡಿಫೆಂಡರ್ ಗೋಲಿಗೆ ಅವಕಾಶ ಕಲ್ಪಿಸಲಿಲ್ಲ. ಎರಡೂ ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಿದವು. ಎಟಿಕೆಎಂಬಿ ದ್ವಿತಿಯಾರ್ಧದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದ ಕಾರಣ ಮುಂದಿನ 45 ನಿಮಿಷಗಳ ಪಂದ್ಯ ಕುತೂಹಲದಿಂದ ಕೂಡಿರವುದು ಸಹಜ.

ನಾರ್ಥ್ ಈಸ್ಟ್ ಗೆ ಜಯದ ಅಗತ್ಯ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳವು ದೃಷ್ಟಿಯಿಂದ ನಾರ್ಥ್ ಈಸ್ಟ್ ಯುನೈಟೆಡದ ತಂಡ ಎಟಿಕೆ ಮೋಹನ್ ಬಾಗನ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಆರನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಹಿಂದಿನ ಪಂದ್ಯದಲ್ಲಿ ಜೆಮ್ಷೆಡ್ಪುರ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿತ್ತು. ಪ್ರಧಾನ ಕೋಚ್ ಗೆರಾರ್ಡ್ ನಸ್ ನಿರ್ಗಮಿಸಿದ ನಂತರ ಕೋಚ್ ಹುದ್ದೆಯ ಜವಾಬ್ದಾರಿಯನ್ನು ಹೊತ್ತ ಖಲೀದ್ ಜಮಿಲ್ ಅವರ ಮೊದಲ ಪಂದ್ಯ ಅದಾಗಿತ್ತು.

ಭರವಸೆಗೆ ತಕ್ಕಂತೆ ಆಡಿದರು
ನೂತನ ಸ್ಟ್ರೈಕರ್ ದೆಶ್ರಾಮ್ ಬ್ರೌನ್ ಅವರು ಕೂಡ ಆ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಗೋಲು ಗಳಿಸುವ ಮೂಲಕ ತಮ್ಮ ಮೇಲಿಟ್ಟಿದ್ದ ಭರವಸೆಗೆ ತಕ್ಕಂತೆ ಆಡಿದರು. ಅದು ಬ್ರೌನ್ ಹಾಗೂ ಜಮೀಲ್ ಅವರ ಭರವಸೆಯ ಹೆಜ್ಜೆಯಾಗಿತ್ತು. ಆದರೆ ಈಗ ಎದುರಾಳಿ ಬಲಿಷ್ಠ ಎಟಿಕೆ ಮೋಹನ್ ಬಾಗನ್. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮೋಹನ್ ಬಾಗನ್, ಹಿಂದಿನ ಪಂದ್ಯದಲ್ಲಿ ನಾರ್ಥ್ ಈಸ್ಟ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿತ್ತು. ಎಟಿಕೆಎಂಬಿ ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿತ್ತು. ದ್ವಿತಿಯಾರ್ಧದಲ್ಲಿ ಡೇವಿಡ್ ವಿಲಿಯಮ್ಸ್ ಜಯದ ಗೋಲು ಗಳಿಸಿದ್ದರು. ಎಟಿಕೆಎಂಬಿ ಗಳಿಸಿರುವ 12 ಗೋಲುಗಳಲ್ಲಿ 11 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿದ್ದವು. ಆದ್ದರಿಂದ ನಾರ್ಥ್ ಈಸ್ಟ್ ಕೊನೆಯ ಕ್ಷಣದವರೆಗೂ ಹೋರಾಟದ ಆಟ ಪ್ರದರ್ಶಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications