ಐಎಸ್‌ಎಲ್: ಪ್ಲೇ ಆಫ್ ಗಾಗಿ ಚೆನ್ನೈಯಿನ್, ಹೈದರಾಬಾದ್ ನಡುವೆ ಫೈಟ್

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ಮತ್ತು ಹೈದರಾಬಾದ್ ಎಫ್ ಸಿ ತಂಡಕ್ಕೆ ಪ್ಲೇ ಆಫ್ ತಲುಪಲು ಇದು ಉತ್ತಮ ಅವಕಾಶ, ಇಲ್ಲಿ ಜಯ ಗಳಿಸಿದರೆ ಹೈದರಾಬಾದ್ ಎಫ್ ಸಿ ತಂಡ ಗೋವಾವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೇಲೇರಲಿದೆ. ಚೆನ್ನೈಯಿನ್ ಎಫ್ ಸಿ ತಂಡಕ್ಕೂ ಇಲ್ಲಿ ಮೂರು ಅಂಕ ಗಳಿಸಿದರೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಸದ್ಯದ ಸ್ಥಿತಿಯಲ್ಲಿ ಹೈದರಾಬಾದ್ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿದೆ.
ನಿಜಾಮರ ಪಡೆ ಉತ್ತಮವಾಗಿ ಆಡುತ್ತಿರುವುದು ಮಾತ್ರವಲ್ಲ, ಕಳೆದ ಆರು ಪಂದ್ಯಗಳಲ್ಲಿ ಅಜೇಯವಾಗಿ ಮುನ್ನಡೆದಿದೆ. ಆ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿರುವುದು ಮಾನ್ವೆಲ್ ಮಾರ್ಕ್ವೇಜ್ ಆವರಿಗೆ ಬೇಸರವನ್ನುಂಟು ಮಾಡಿದೆ. ಆದರೆ ಇದಕ್ಕೆ ಮುಖ್ಯ ಪರಿಹಾರವೆಂದರೆ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವುದು.

ಗೋಲಿಗಾಗಿ ಉತ್ಸುಕ
"ತಂಡವು ಅವಕಾಶಗಳಿಂದ ಹೆಚ್ಚಿನ ಗೋಲುಗಳನ್ನು ಗಳಿಸಲು ಉತ್ಸುಕವಾಗಿದೆ. ಇದು ಸ್ಪಷ್ಟ, ಆದರೆ ಸ್ಪಷ್ಟ ಅವಕಾಶಗಳನ್ನು ನಿರ್ಮಿಸುವುದು ಅತ್ಯಂತ ಪ್ರಮುಖವಾದುದು. ನನ್ನ ಪ್ರಕಾರ ತಂಡಗಳು ಉತ್ತಮ ಫುಟ್ಬಾಲ್ ಆಡಿದರೆ ಜನರು ಅದರಿಂದ ಆಕರ್ಷಿತರಾಗುತ್ತಾರೆ. ಫುಟ್ಬಾಲ್ ನಲ್ಲಿ ಅತ್ಯಂತ ಪ್ರಮುಖವಾದುದು ಫೈನಲ್ ಸ್ಕೋರ್. ನಮಗೆ ಸೋಲಿಗಿಂತ ಜಯವೇ ಪ್ರಮುಖವಾದುದು. ಡ್ರಾದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಬಹುದು, ಆದರೆ ನಾವು ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿದ್ದೇವೆ. ಈಗ ಚೆನ್ನೈಯಿನ್ ತಂಡದ ವಿರುದ್ಧ ನಾವು ಮೂರು ಅಂಕಗಳನ್ನು ಗಳಿಸಬೇಕಾಗಿದೆ, ಹಾಗಾದರೆ ನಮ್ಮ ತಂಡವು ಇತರ ತಂಡಗಳಿಗಿಂತ ಮುನ್ನಡೆಯಲ್ಲಿ ಅಂತರ ಕಾಯ್ದುಕೊಳ್ಳಲಿದೆ," ಎಂದರು.
ಅರಿದಾನೆ ಸ್ಯಾಂಟನಾ ಅವರ ಆಗಮನವು ತಂಡದ ಹೆಚ್ಚಿನ ಸಮಸ್ಯೆಯನ್ನು ದೂರಮಾಡಲಿದೆ. ಹಿಂದಿನ ಪಂದ್ಯದ ಹೀರೋ ನಾಲ್ಕು ಬಾರಿ ಗುರಿಇಟ್ಡಿದ್ದರು. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತಂಡ ಅಂತಮ ಹಂತದಲ್ಲಿ ಚೇತರಿಸಿಕೊಳ್ಳಲು ಅರಿದಾನೆ ಅವರ ಪಾತ್ರ ಪ್ರಮುಖವಾದುದು.

ತಪ್ಪುಗಳ ಪುನರಾವರ್ತನೆಯಿಲ್ಲ
ಚೆನ್ನೈಯಿನ್ ಗೆ ನಾಳೆಯ ಪಂದ್ಯ ಕೇವಲ ಅಂಕಗಳಲ್ಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲ. ಹಿಂದಿನ ಪಂದ್ಯದಲ್ಲಿ ಮಾಡಿರುವ ಪ್ರಮಾದಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ. "ಚೆನ್ನೈಯಿನ್ ತಂಡಕ್ಕೆ ಕೇವಲ ಮೂರು ಅಂಕಗಳಿಂದ ಹಿಂದಿರುವ ತಂಡದ ವಿರುದ್ಧದ ಪಂದ್ಯವಲ್ಲ., ಹೈದರಾಬಾದ್ ವಿರುದ್ಧ ನಾವು ಅತ್ಯಂತ ಕೆಟ್ಟ ಫುಟ್ಬಾಲ್ ಆಡಿದೆವು. ನಾವು ಇದನ್ನು ಬದಲಾಯಿಸಿ ವೃತ್ತಿಪರ ಫುಟ್ಬಾಲ್ ಆಡಬೇಕಾಗಿದೆ. ಕೆಲವೊಮ್ಮೆ ನಾವು ಕೆಟ್ಟ ದಿನಗಳನ್ನು ಎದುರಿಸಬೇಕಾಗುತ್ತದೆ, ಆದರೆ ಸ್ಫೂರ್ತಿ, ಛಲ ಮತ್ತು ಧ್ಯೇಯವಿಲ್ಲಿದೆ ಸೋಲನ್ನು ಒಪ್ಪಿಕೊಳ್ಳುವಂತಿಲ್ಲ," ಎಂದು ಚೆನ್ನೈಯಿನ್ ತಂಡದ ಕೋಚ್ ಸಾಬಾ ಲಾಜ್ಲೋ ಹೇಳಿದರು.

ಗಳಿಸಿದ್ದು ಬರೀ 11 ಗೋಲು
ಎದುರಾಳಿ ಸಂಖ್ಯೆಯಂತೆ ಲಾಜ್ಲೋ ತಂಡವು ಸುಧಾರಣೆ ಕಂಡುಕೊಂಡಿದೆ. ಪ್ರತಿಯೊಂದು ಋತುವಿನಲ್ಲೂ ಚೆನ್ನೈಯಿನ್ ತಂಡ ಗೋಲು ಗಳಿಸುವುದಕ್ಕಾಗಿ ಪರದಾಡಿತ್ತು. ಈ ಬಾರಿ 11 ಗೋಲು ಗಳಿಸಿದ್ದು ಋತುವಿನಲ್ಲೇ ಕಡಿಮೆ ಎನಿಸಿದೆ. ಗೋಲು ಪರಿವರ್ತನೆಯ ಸರಾಸರಿ 6.01 ಈ ಐಎಸ್ ಎಲ್ ಇತಿಹಾಸದಲ್ಲೇ ಕಡಿಮೆ. ಇವುಗಳನ್ನು ಸರಿಮಾಡಿಕೊಳ್ಳದೆ ಚೆನ್ನೈಯಿನ್ ತಂಡ ಪ್ಲೇ ಆಫ್ ತಲಪುವಲ್ಲಿ ಕಷ್ಟದ ಮಾರ್ಗ ಎದುರಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications