ಐಎಸ್‌ಎಲ್ 2021: ನಾರ್ಥ್ ಈಸ್ಟ್, ಹೈದರಾಬಾದ್ ಗೋಲಿಲ್ಲದೆ ಸಮಬಲ

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ರಮುಖ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡಗಳು ಗೋಲಿಲ್ಲದೆ ಡ್ರಾ (0-0) ಸಾಧಿಸಿವೆ. ಈ ಪಲಿತಾಂಶದೊಂದಿಗೆ ಇತ್ತಂಡಗಳು ತಲಾ 23 ಅಂಕಗಳಿಸಿದರೂ ಅದೇ ಸ್ಥಾನಗಳಲ್ಲಿ ಮುಂದುವರಿದಿವೆ. ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದ್ದರೆ, ನಾರ್ಥ್ ಈಸ್ಟ್ ಯುನೈಟೆಡ್ ತಂಡ ಐದನೇ ಸ್ಥಾನದಲ್ಲೇ ಉಳಿಯಿತು.
ಎರಡೂ ತಂಡಗಳು ಉತ್ತಮ ಫುಟ್ಬಾಲ್ ಪ್ರದರ್ಶಿಸಿದವು, ಆದರೆ ಗೋಲಿನ ಅವಕಾಶ ಅಷ್ಟು ಸುಲಭವಾಗಿ ದಕ್ಕಲಿಲ್ಲ. ಹೈದರಾಬಾದ್ ಪ್ರಥಮಾರ್ಧದಲ್ಲಿರುವಂತೆ ದ್ವಿತಿಯಾರ್ಧದಲ್ಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು.

ಪೈಪೋಟಿಯ ಪ್ರಥಮಾರ್ಧ
45 ನಿಮಿಷಗಳ ಹೋರಾಟ ಉತ್ತಮ ಪೈಪೋಟಿಯಿಂದ ಕೂಡಿದ್ದರೂ ಅಲ್ಲಿ ಗೋಲು ದಾಖಲಾಗಲಿಲ್ಲ. ಹೈದರಾಬಾದ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತಾದರೂ ಗೋಲು ಗಳಿಸುವ ಅವಕಾಶವನ್ನು ನಿರ್ಮಿಸಿರಲಿಲ್ಲ. ನಾರ್ಥ್ ಈಸ್ಟ್ ಎರಡು ಬಾರಿ ಗೋಲ್ ಬಾಕ್ಸ್ ಕಡೆಗೆ ಗುರಿ ಇಟ್ಟಿತ್ತು, ಹೈದರಾಬಾದ್ ನ ಆಕಾಶ್ ಮಿಶ್ರಾ ಉತ್ತಮ ರೀತಿಯಲ್ಲಿ ನಾರ್ಥ್ ಈಸ್ಟ್ ನ ಡಿಫೆನ್ಸ್ ವಿಭಾಗವನ್ನು ತಡೆದು ಹಲವು ಬಾರಿ ಗೋಲು ಗಳಿಸುವ ಅವಕಾಶಕ್ಕೆ ತಡೆಯೊಡ್ಡಿದರು. ದ್ವಿತಿಯಾರ್ಧದಲ್ಲಿ ಹೈದರಾಬಾದ್ ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದೆ, ಆದ್ದರಿಂದ ಮುಂದಿನ 45 ನಿಮಿಷಗಳ ಪಂದ್ಯ ಹೆಚ್ಚು ಕುತೂಹಲದಿಂದ ಕೂಡಿರಬಹುದು ಎಂಬ ನೀರಿಕ್ಷೆಯನ್ನು ಮೂಡಿಸಿ ಇತ್ತಂಡಗಳು ವಿರಾಮಕ್ಕೆ ತೆರಳಿದವು. ಹೀಗೆ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು.

ಮೂರರ ಗುರಿ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳಲು ಸಾಮಾನ್ಯ ಎಲ್ಲಾ ತಂಡಗಳು ಸ್ಪರ್ಧೆಯನ್ನು ತೀವ್ರಗೊಳಿಸಿವೆ. ಕಳೆದ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಹೈದರಾಬಾದ್ ಎಫ್ ಸಿ ಮತ್ತು ನಾರ್ಥ್ ಈಸ್ಟ್ ಎಫ್ ಸಿ ತಂಡಗಳು ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದು ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ಮೂರನೇ ಸ್ಥಾನ ಗುರಿ ಇಟ್ಟುಕೊಂಡು ಅಂಗಣಕ್ಕಿಳಿದವು..15 ಪಂದ್ಯಗಳ ನಂತರ ಇತ್ತಂಡಗಳು 22 ಅಂಕಗಳನ್ನು ಗಳಿಸಿವೆ. ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದ್ದು ಗೋಲುಗಳ ಅಂತರದಲ್ಲಿ ನಾರ್ಥ್ ಈಸ್ಟ್ ಐದನೇ ಸ್ಥಾನದಲ್ಲಿದೆ.ಇಂದು ಗೆಲ್ಲುವ ತಂಡವು ಮೂರನೇ ಸ್ಥಾನ ತಲುಪಲಿದೆ.

ಸೋಲು ಕಂಡಿರಲಿಲ್ಲ
ನಿಜಾಮರ ಪಡೆ ಕಳೆದ ಏಳು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಕಳೆದ ಐದು ಪಂದ್ಯಗಳಲ್ಲಿ ಸೋಲು ಕಂಡಿರದ ನಾರ್ಥ್ ಈಸ್ಟ್ ಗೆದ್ದು ಪ್ಲೇ ಆಫ್ ತಲುಪುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ 22 ಅಂಕ ಗಳಿಸಿರುವ ಮೂರು ತಂಡಗಳು ಸ್ಪರ್ಧೆಯಲ್ಲಿವೆ. ನಿಜಾಮರ ಪಡೆ 15 ಪಂದ್ಯಗಳಲ್ಲಿ 20 ಬಾರಿ ಗೋಲು ಗಳಿಸಿದೆ. ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಪೈಪೋಟಿ ನೀಡಿದ ತಂಡಗಳೆರಡರ ನಡುವಿನ ಹೋರಾಟ ನಿಜವಾಗಿಯೂ ಕುತೂಹಲ ಕೆರಳಿಸುವಂಥದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications