ಐಎಸ್‌ಎಲ್: ಕೇರಳದ ವಿರುದ್ಧ ಜಯ ಗಳಿಸಿದ ಹೈದರಾಬಾದ್ ಮೂರನೇ ಸ್ಥಾನಕ್ಕೆ

ಗೋವಾ: ಫ್ರಾನ್ಸಿಸ್ಕೋ ಸ್ಯಾಂಡಸಾ (58 ಮತ್ತು 63ನೇ ನಿಮಿಷ), ಅರಿದಾನೆ ಸ್ಯಾಂಟನಾ (86ನೇ ನಿಮಿಷ) ಮತ್ತು ಜೊಆವ್ ವಿಕ್ಟರ್ ಬ್ರೊನೊ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 4-0 ಗೋಲುಗಳ ಅಂತರದಲ್ಲಿ ಮಣಿಸಿದ ಹೈದರಾಬಾದ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ಜಿಗಿಯಿತು.
ಈ ಸೋಲಿನೊಂದಿಗೆ ಕೇರಳ ಬ್ಲಾಸ್ಟರ್ಸ್ ತಂಡದ ಪ್ಲೇ ಆಫ್ ಹಾದಿ ಮುಚ್ಚಲ್ಪಟ್ಟಿತು. ಈ ಫಲಿತಾಂಶದಿಂದಾಗಿ ಮೂರನೇ ಸ್ಥಾನದಲ್ಲಿದ್ದ ನಾರ್ಥ್ ಈಸ್ಟ್ ಯುನೈಟೆಡ್ ನಾಲ್ಕನೇ ಸ್ಥಾನಕ್ಕೆ ಕುಸಿದರೆ ನಾಲ್ಕನೇ ಸ್ಥಾನದಲ್ಲಿದ್ದ ಗೋವಾ ಐದನೇ ಸ್ಥಾನಕ್ಕೆ ಜಾರಿತು.

ಗೋಲಿಲ್ಲದ ಪ್ರಥಮಾರ್ಧ
ಇತ್ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ಮೊದಲ 45 ನಿಮಿಷಗಳ ಪಂದ್ಯದಲ್ಲಿ ಗೋಲು ದಾಖಲಾಗಲಿಲ್ಲ. ಲಕ್ಷ್ಮೀಕಾಂತ್ ಕಟ್ಟೀಮನಿ ಎರಡು ಬಾರಿ ಕೇರಳದ ನೇರ ಗೋಲು ಗಳಿಕೆಗೆ ಅಡ್ಡಿಯಾದರು. ಅಲ್ಬೆನೋ ಕೂಡಾ ಹೈದರಾಬಾದ್ ನ ಗೋಲು ಗಳಿಕೆಗೆ ಅಡ್ಡಿಯಾದರು. ಕೇರಳ ಹೆಚ್ಚಿನ ಪಂದ್ಯಗಳಲ್ಲಿ ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು, ತನ್ನ ಹಳೇ ಚಾಳಿಯನ್ನು ಇಲ್ಲಿರೂ ಮುಂದುವರಿಸಿತು.

ದಕ್ಷಿಣದ ಡರ್ಬಿ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸೋಮವಾರ ಬೆಂಗಳೂರು ಎಫ್ ಸಿ ತಂಡ ಮುಂಬೈ ಸಿಟಿ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಪ್ಲೇ ಆಫ್ ಸ್ಥಾನಕ್ಕಾಗಿ ನಡೆಯುತ್ತಿರುವ ಹೋರಾಟದ ಹಾದಿ ಮತ್ತಷ್ಟು ತೀವ್ರಗೊಂಡಿದೆ. ಈಗ ಹೈದರಾಬಾದ್ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಪ್ಲೇ ಆಫ್ ಗುರಿಯನ್ನು ಹೊತ್ತು ಅಂಗಣಕ್ಕಿಳಿದವು. ನಿಜಾಮರ ಪಡೆ ಕಳೆದ ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಅದರಲ್ಲಿ ಆರು ಪಮದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಹೀಗೆ ಹಲವಾರು ಪಂದ್ಯಗಳಲ್ಲಿ ಅಂಕ ಹಂಚಿಕೊಂಡ ಹೈದರಾಬಾದ್ 24 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದೆ.

ಹೈದರಾಬಾದ್ ವಿಫಲ
ಅವಕಾಶಗಳನ್ನು ನಿರ್ಮಿಸಿದರೂ ಅದನ್ನು ಗೋಲಾಗಿಸುವಲ್ಲಿ ಹೈದರಾಬಾದ್ ವಿಫಲವಾಗಿದೆ. ಇನ್ನು ಕೇವಲ ಮೂರು ಪಂದ್ಯಗಳು ಉಳಿದಿರುವುದರಿಂದ ನಿಜಾಮರ ಪಡೆ ಡ್ರಾಗಳನ್ನು ಜಯವಾಗಿ ಪರಿವರ್ತಿಸಬೇಕಾಗಿದೆ. ಇಲ್ಲಿ ಜಯ ಗಳಿಸಿದರೆ ಹೈದರಾಬಾದ್ ಮೂರನೇ ಸ್ಥಾನಕ್ಕೆ ತಲುಪಲಿದೆ, ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಹೈದರಾಬಾದ್ ಗೆ 2-0 ಅಂತರದಲ್ಲಿ ಸೋಲುಣಿಸಿತ್ತು. 10ನೇ ಸ್ಥಾನದಲ್ಲಿರುವ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಪ್ಲೇ ಆಫ್ ಅವಕಾಶ ಬಹಳ ಕಡಿಮೆ. 17 ಪಂದ್ಯಗಳಿಂದ 16 ಅಂಕ ಗಳಿಸಿರುವ ಕೇರಳ ತಂಡ ಉಳಿದಿರುವ ಎಲ್ಲ ಪಂದ್ಯಗಳಲ್ಲಿ ಜಯ ಗಳಿಸಿದರೆ ಪ್ಲೇ ಆಫ್ ಹಾದಿ ಸುಗಮವಾಗಬಹುದು, ಆದರೆ ಇತರ ತಂಡಗಳ ಫಲಿತಾಂಶವನ್ನೂ ಆಧರಿಸಬೇಕಾಗಿದೆ. ಜಯದ ಹಂತದಿಂದ ಇದುವರೆಗೂ ಕಿಬು ವೆಕುನಾ ಅವರ ಪಡೆ 18 ಅಂಕಗಳನ್ನು ಕಳೆದುಕೊಂಡಿದೆ. 29 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದ್ದೇ ಕೇರಳ ಈಗ 10ನೇ ಸ್ಥಾನದಲ್ಲಿರಲು ಪ್ರಮುಖ ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications