ಐಎಸ್‌ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು

ಗೋವಾ: ಮೂರು ಸೋಲುಗಳ ನಂತರ ಕಂಗೆಟ್ಟಿರುವ ಜೆಮ್ಷೆಡ್ಪುರ ಎಫ್ ಸಿ ತಂಡಕ್ಕೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತ ತಲುಪವು ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾನುವಾರ ನಡೆಯಲಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜಯ ಕಾಣಬೇಕಾದ ಅನಿವಾರ್ಯತೆ ಇದೆ. ಎಂಟನೇ ಸ್ಥಾನ ತಲುಪಿರುವ ತಂಡಕ್ಕೆ ಜಯ ಗಳಿಸಲು ಇದು ಉತ್ತಮ ಅವಕಾಶವೆನಿಸಿದೆ. ಜೆಮ್ಷೆಡ್ಪುರ ತಂಡದ ಕೋಚ್ ಓವೆನ್ ಕೊಯ್ಲ್ ಅವರಿಗೆ ಸದ್ಯದ ಅಗತ್ಯ ಏನೆಂಬುದು ಚೆನ್ನಾಗಿ ಗೊತ್ತು.
ಕಳೆದ ವರ್ಷ ಚೆನ್ನೈಯಿನ್ ಎಫ್ ಸಿ ತಂಡ ಮಧ್ಯತರದಲ್ಲಿ ಆದ ಬದಲಾವಣೆಯಲ್ಲಿ ಯಶಸ್ಸು ಕಾಣಲು ಕೊಯ್ಲ್ ಅವರ ಪಾತ್ರ ಪ್ರಮುಖವಾಗಿತ್ತು. ತಂಡವನ್ನು ಫೈನಲ್ ಕೊಂಡೊಯ್ಯವಲ್ಲಿ ಕೊಯ್ಲ್ ಅವರ ಯೋಜನೆಗಳು ಪ್ರಮುಖವಾಗಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡವನ್ನು ಫೈನಲ್ ಗೆ ಕೊಂಡೊಯ್ಯವಲ್ಲಿ ಕೊಯ್ಲ್ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಜೆಮ್ಷೆಡ್ಪುರ ತಂಡ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೂ ತಮ್ಮ ತಂಡ ಪ್ಲೇ ಆಫ್ ಹಂತ ತಲುಪಲಿದೆ ಎಂದು ಕೋಚ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ನಮ್ಮಲ್ಲಿ ಇನ್ನೂ ಎರಡು ಪಂದ್ಯಗಳಿವೆ
"ಆ ಪ್ಲೇ ಆಫ್ ಸ್ಥಾನವನ್ನು ತಲುಪಲು ನಮ್ಮಲ್ಲಿ ಇನ್ನೂ ಎರಡು ಪಂದ್ಯಗಳಿವೆ" ಎಂದು ಹೇಳಿರುವ ಕೊಯ್ಲ್ , "ಅದನ್ನು ಸಾಧಿಸುವ ಸವಾಲು ನನ್ನಲಿದೆ ಎಂದು ಯಾರಿಗಾದರೂ ಅರಿವಿದ್ದಿರಬಹುದು, ಏಕೆಂದರೆ ಕಳೆದ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಚೆನ್ನೈಯಿನ್ ತಂಡವನ್ನು ಫೈನಲ್ ಗೆ ತಲುಪಿಸಿದ ಉದಾಹರಣೆ ಇದೆ. ಆದ್ದರಿಂದ ಪ್ಲೇ ಆಫ್ ತಲಪುತ್ತೇವೆ ಎಂಬ ನಂಬಿಕೆ ಇದೆ, ಅದಕ್ಕಾಗಿ ನಾವು ನಮ್ಮಲ್ಲಿರುವ ಉತ್ತಮ ಪ್ರದರ್ಶವನ್ನು ನೀಡಬೇಕು' ಎಂದರು.

ಹೈದರಾಬಾದ್ ಉತ್ತಮ ಸ್ಥಿತಿಯಲ್ಲಿದೆ
ಇದಕ್ಕಾಗಿ ತಂಡ ಸೈಮಿನ್ಲೆನ್ ಡೌಂಗಲ್ ಅವರನ್ನು ಸಾಲವಾಗಿ ಪಡೆದಿದ್ದು ಮತ್ತು ಫಾರೂಕ್ ಚೌಧರಿಯನ್ನು ತಂಡಕ್ಕೆ ಸೇರಿಸಕೊಂಡಿದೆ, ಇಬ್ಬರೂ ನಾಳೆಯ ಪಂದ್ಯದಲ್ಲಿ ಆಡಲಿದ್ದಾರೆ. ಎದುರಾಳಿ ತಂಡಕ್ಕೆ ಹೋಲಿಕೆ ಮಾಡಿ ಹೇಳುವುದಾದರೆ, ಹೈದರಾಬಾದ್ ತಂಡ ಉತ್ತಮ ಸ್ಥಿತಿಯಲ್ಲಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿರಲಿಲ್ಲ. ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಇತ್ತೀಚಿನ ಪಂದ್ಯಗಳಲ್ಲಿ ದುರ್ಬಲಗೊಂಡಿದ್ದು, ಹಿಂದಿನ ಮೂರು ಪಂದ್ಯಗಳಲ್ಲಿ 9 ಗೋಲುಗಳನ್ನು ನೀಡಿದೆ. ಹೈದರಾಬಾದ್ ಇದರ ಸದುಪಯೋಗ ಪಡೆಯಲು ಉತ್ಸುಕವಾಗಿದೆ. ಆದರೆ ಈ ಹಿಂದೆ ಮೂರು ಬಾರಿ ಪರಸ್ಪರ ಮುಖಾಮುಖಿಯಾದಾಗ ಹೈದರಾಬಾದ್ ತಂಡಕ್ಕೆ ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಅವರ ಪ್ರಕಾರ ನಾಳೆಯ ಪಂದ್ಯ ಎರಡೂ ತಂಡಗಳಿಗೂ ಕಠಿಣವಾಗಲಿದೆ.

ಹೋರಾಡುತ್ತಿರವುದು ಸಹಜ
"ಮೂರು ತಂಡಗಳ ವಿರುದ್ಧ ಜಯ ಕಾಣುವಲ್ಲಿ ವಿಫಲವಾಗಿರುವ ತಂಡದ ವಿರುದ್ಧ ನಾವು ಆಡಲಿದ್ದೇವೆ, ಹೊಸ ಆಟಗಾರರಿಂದ ಕೂಡಿರುವ ತಂಡ ಈಗ ನಾಲ್ಕನೇ ಸ್ಥಾನಕ್ಕಾಗಿ ಹೋರಾಡುತ್ತಿರವುದು ಸಹಜ. ಅಪಾರ ಅನುಭವ ಹೊಂದಿರುವ ಕೋಚ್ ಇರುವ ಜೆಮ್ಷೆಡ್ಪುರ ತಂಡವು ಉತ್ತಮ ಆಟಗಾರರಿಂದ ಕೂಡಿದೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications